ಉಡುಪಿ: ಸಂತೆಕಟ್ಟೆಯ ರಾಷ್ಟೀಯ ಹೆದ್ದಾರಿ 66ರ ಅಂಡರ್ ಪಾಸ್‌ನ ಒಂದು ಬದಿ ರಸ್ತೆ ಡಾಮರು ಕಾಮಗಾರಿ ಪೂರ್ಣ ಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರ-ಉಡುಪಿ ಬದಿಯ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ.
ಸಂತೆಕಟ್ಟೆ ಜಂಕ್ಷನ್‌ನಲ್ಲಿನ ಸಂಚಾರ ಸಮಸ್ಯೆಗೆ ಪರಿಹಾರವಾಗಿ 2023ರ ಜನವರಿಯಲ್ಲಿ ಸುಮಾರು 27.4ಕೋಟಿ ರೂ.ವೆಚ್ಚದಲ್ಲಿ ಒಂದು ಕಿ.ಮೀ. ದೂರದ ರಸ್ತೆಯಲ್ಲಿ ಅಂಡರ್‌ಪಾಸ್ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ ಈ ಕಾಮಗಾರಿಯು ಮಳೆ ಹಾಗೂ ಬಂಡೆ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಯಿಂದ ನಿಗದಿತ ಸಮಯಕ್ಕೆ ಪೂರ್ಣ ಗೊಳ್ಳದೆ ವಿಳಂಬವಾಗಿತ್ತು.
ಈ ಮಧ್ಯೆ ಅಂಡರ್ ಪಾಸ್‌ನ ಒಂದು ಬದಿಯ ಮಣ್ಣು ಹಾಗೂ ಸರ್ವಿಸ್ ರಸ್ತೆ ಕೂಡ ಕುಸಿದಿದ್ದವು. ಇದರಿಂದ ಸಂತೆಕಟ್ಟೆ ಸಂಚಾರ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ಸಾರ್ವ ಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೂಡ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಚುನಾವಣಾ ತರಾತುರಿಯಲ್ಲಿ ಭಾಗಶಃ ಪೂರ್ಣ ಗೊಂಡಿರುವ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕಾಮಗಾರಿ ಪೂರ್ಣಗೊಂಡ ಅಂಡರ್ ಪಾಸ್‌ನ 60ಮೀಟರ್ ಅಗಲದ ರಸ್ತೆಯ ಒಂದು ಬದಿಯಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಸಂಚಾರ ಆರಂಭಿಸಿವೆ. ಇತ್ತ ಅಂಡರ್‌ಪಾಸ್‌ನಲ್ಲಿ ವಾಹನ ಸಂಚಾರ ಆರಂಭವಾಗುತ್ತಿದ್ದಂತೆ ಇನ್ನೊಂದು ಬದಿಯ ಅಂಡರ್‌ಪಾಸ್ ಕಾಮಗಾರಿಗಾಗಿ ರಸ್ತೆ ಅಗೆಯುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಅದೇ ರೀತಿ ಹೂಡೆ, ನೇಜಾರು ಕಡೆಗಳಿಂದ ಬರುವ ವಾಹನಗಳು ಸಂತೆಕಟ್ಟೆ ಜಂಕ್ಷನ್‌ನಲ್ಲಿ ಕುಂದಾಪುರ ಕಡೆ ತೆರಳಿ ಸುಮಾರು 200-300ಮೀಟರ್ ದೂರ ಸಾಗಿ ಅಂಡರ್ ಪಾಸ್ ಮೂಲಕ ಉಡುಪಿ ಕಡೆ ತೆರಳುತ್ತಿವೆ. ಉಡುಪಿ ಕಡೆಯಿಂದ ಕುಂದಾಪುರ ಕಡೆ ತೆರಳುವ ವಾಹನಗಳು ಸಂತೆಕಟ್ಟೆ ಯಲ್ಲಿ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದೆ ಎಂದು ಉಡುಪಿ ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ ಕೊಪ್ಪಳ: ಗೂಡ್ಸ್ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…
ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…
ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…
ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಪಲ್ಟಿ: ತಪ್ಪಿದ ದುರಂತ ಮಣಿಪಾಲ: ಪರ್ಕಳದ ಕೆಳಪರ್ಕಕಳ ಹೆದ್ದಾರಿಯಲ್ಲಿ ಕೆನರಾ ಬ್ಯಾಂಕಿನ ತಿರುವಿನಲ್ಲಿ ಕಂಟೇನರ್…
ಉಡುಪಿ: ಮೂವರು ರೌಡಿ ಶೀಟರ್‌ಗಳ ಗಡಿಪಾರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್…