Featured

ಉಡುಪಿ : ಸಚಿವ ಕೋಟ ದಲಿತರಿಗೆ ನ್ಯಾಯ ಒದಗಿಸಿದ್ದಾರೆ – ಇಲ್ಲ ಸಲ್ಲದ ಆರೋಪ ಸಹಿಸಲಾಗದು : ದಿನಕರ ಬಾಬು ಸಮರ್ಥನೆ – Vishwanews24

ಸಚಿವ ಕೋಟ ದಲಿತರಿಗೆ ನ್ಯಾಯ ಒದಗಿಸಿದ್ದಾರೆ – ವಿನಃಕಾರಣ ಸಚಿವರನ್ನು ಟೀಕಿಸುವುದು ಸರಿಯಲ್ಲ..

ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ- ಬಿಜೆಪಿ ಎಸ್ ಸಿ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಲಿತ ಮುಖಂಡ  ದಿನಕರ ಬಾಬು ಸಮರ್ಥನೆ

ಉಡುಪಿ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಸುಂದರ ಮಾಸ್ಟರ್ ಹೆಸರಿನಲ್ಲಿ ಸತ್ಯಕ್ಕೆ ದೂರವಾದ ಆಪಾದನೆಗಳು ಪ್ರಕಟವಾಗುತ್ತಿದ್ದು ಸಚಿವ ಕೋಟ ಸಮಾಜ ಕಲ್ಯಾಣ ಸಚಿವರಾದ ನಂತರ ಇಲಾಖೆಯಲ್ಲಿ ಒಂದೊಂದು ರೂಪಾಯಿಯೂ ದಲಿತರ ಪರವಾಗಿ ಸದ್ವಿನಿಯೋಗವಾಗುತ್ತಿದೆ.

ಬಡವರ ಮಕ್ಕಳು ಕಲಿಯುವ ಹಾಸ್ಟೆಲ್ ಗಳಲ್ಲಿ ಪಾರದರ್ಶಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ರಸ್ತೆ, ಚರಂಡಿಗೆ ವಿನಿಯೋಗವಾಗು ತ್ತಿದ್ದ ಅನುದಾನಗಳು ದಲಿತರ ಮಕ್ಕಳು ಕಲಿಯುವ ಅಂಬೇಡ್ಕರ್ ವಸತಿ ನಿಲಯ ಮತ್ತು ಕ್ರೈಸ್ ಶಾಲೆಗೆ ಮಂಜೂರು ಮಾಡಲಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದೆಲ್ಲೆಡೆ ಅಂಬೇಡ್ಕರ್ ಭವನಗಳು ಸುಸಜ್ಜಿತಗೊಳ್ಳುತ್ತಿದ್ದು ಪ್ರಥಮ ಬಾರಿಗೆ ಬಡ ದಲಿತ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಜಾರಿಯಾಗಿದೆ. ಇದರಿಂದ ವಾರ್ಷಿಕ ಸುಮಾರು 800 ಕೋಟಿ ರೂಪಾಯಿ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ಚಾಗುತ್ತಿದೆ ಸ್ವಾತಂತ್ಯದಿಂದ ಇಂದಿನವರೆಗೂ ದಲಿತೋದ್ದಾರದ ಮಾತುಗಳು ಕೇಳಿಬರುತ್ತಿವೆ ಹೊರತು ದಲಿತರಿಗೆ ಉದ್ಯೋಗವೂ ಸೇರಿದಂತೆ ಒಟ್ಟಾರೆ ಮೀಸಲಾತಿಯ ಹೆಚ್ಚಳ ಮಾಡಿದ್ದು ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾದ ಮೇಲೆ ಎನ್ನುವುದು ಮರೆಯಲಾಗದು. ಖಾಸಗಿ ದೇವಸ್ಥಾನಗಳಿಗೆ ಹಣ ಕೊಟ್ಟಿದ್ದಾರೆ ಎಂದು ಆರೋಪಿಸುವವರು ಅದನ್ನು ಪರಿಶಿಷ್ಟ ಜಾತಿಗೆ ಕರ್ಚು ಮಾಡಿದ್ದಾರೆ ಎನ್ನುವುದು ಮರೆಯಬಾರದು.

ಪರಿಶಿಷ್ಟ ಜಾತಿಯ ರಸ್ತೆಗಳೂ ಸೇರಿದಂತೆ ಇಲಾಖಾ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಚಿವರೇ ನಿಂತು ದಲಿತರಿಗೆ ನ್ಯಾಯ ಒದ ಗಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಇಂದು ಭ್ರಷ್ಟಾಚಾರ ರಹಿಕ ಇಲಾಕೆಯೆಂದು ಗೌರವಕ್ಕೆ ಪಾತ್ರವಾಗಿದೆ. ಯಾವುದೇ ಸರ್ಕಾರ ಅಥವಾ ಮಂತ್ರಿಗಳು ಬಡವರ ಪರವಾಗಿ ಯಾವುದೇ ಘೋಷಣೆ ಮಾಡಿದರೂ ಸ್ವಲ್ಪ ವಿಳಂಬವಾದರೂ ಅನುಷ್ಠಾನವಾಗುವುದರಲ್ಲಿ ಎರಡು ಮಾತಿಲ್ಲ. ಅದನ್ನೆಲ್ಲ ಒಟ್ಟು ಸುಂದರ ಮಾಸ್ಟರ್ ನಂತಹ ಮುಖಂಡರು ಸಚಿವರ ಬಗ್ಗೆ ವ್ಯಕ್ತಿಗತವಾಗಿ ಟೀಕಿಸಿದ್ದು, ಟೀಕಿಸುವವರ ಗೌರವ ಹೆಚ್ಚುವುದಿಲ್ಲ. ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು,ಉಚಿತ ವಿದ್ಯುತ್ ನೀಡಿದ್ದು, ಬ್ಯಾಕ್ ಲಾಗ್ ಹುದ್ದೆಯನ್ನು ಭರ್ತಿಮಾಡಿದ್ದು ಸೇರಿದಂತೆ ಅನೇಕ ದಲಿತಪರ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗ ಮೆಚ್ಚುವಂತಹದ್ದು.

ಈ ಹಿನ್ನಲೆಯಲ್ಲಿ ವಿನಃಕಾರಣ ಸಚಿವರನ್ನು ಟೀಕಿಸುವುದು ಸರಿಯಲ್ಲ ಇಲಾಖೆಯ ಕಾರ್ಯಕ್ರಮಗಳನ್ನು ಅತ್ಯಂತ ಅಭಿಮಾನದಿಂದ ಸಮರ್ತನೆ ಮಾಡಬೇಕಾದ ಅವಶ್ಯಕತೆ ಇದೆ ಯೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜ್ಯ SC ಮೋರ್ಚಾ ಪ್ರಧಾನ ಕಾರ್ಯದರ್ಶಿ ದಲಿತ ಮುಖಂಡ ದಿನಕರ ಬಾಬು ತಿಳಿಸಿದ್ದಾರೆ.

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

11 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

17 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

17 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

19 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

19 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

19 hours ago