Featured

ಉಡುಪಿ: ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಒಪ್ಪಂದದಂತೆ ಬಿ.ಆರ್ . ಶೆಟ್ಟಯವರೇ  ಮುನ್ನಡೆಸಲಿ : ಶಾಸಕ ರಘುಪತಿ ಭಟ್ – Vishwanews24

ಉಡುಪಿ: ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಒಪ್ಪಂದದಂತೆ ಬಿ.ಆರ್ . ಶೆಟ್ಟಯವರೇ  ಮುನ್ನಡೆಸಲಿ : ಶಾಸಕ ರಘುಪತಿ ಭಟ್ – Vishwanews24

ಉಡುಪಿ: ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಈ ಹಿಂದೆ ಆದ ಒಪ್ಪಂದದಂತೆಯೇ ಬಿ.ಆರ್. ಶೆಟ್ಟರೇ ಮುನ್ನಡೆಸಿಕೊಂಡು ಹೋಗಬೇಕು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಆಸ್ಪತ್ರೆಗೆ ನಾವು ತಡೆ ಮಾಡಿದ್ದೇವೆ ಎಂದು ಆರೋಪಿಸಿದ್ದಾರೆ. ಇದು ಅವರ ಜ್ಞಾನದ ಕೊರತೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಮಕ್ಕಳ ಆಸ್ಪತ್ರೆ ಬದಲಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಸರಕಾರ ಅನುಮತಿ ನೀಡಿತ್ತು. ಬೇಸ್ ಮೆಂಟ್ ಗೆ ಎರಡಂತಸ್ತಿನ ಅನುಮತಿ ಸರ್ಕಾರ ನೀಡಿತ್ತು. ಆದರೆ, ಮೂರು ಅಂತಸ್ತು ಕಟ್ಟಲು ಹೊರಟಾಗ ತಡೆಯಾಜ್ಞೆ ಬಿದ್ದಿದೆ. ಖಾಸಗಿಯಾಗಲಿ, ಸರಕಾರಿ ಆಗಲಿ ಬೇಸ್ ಮೆಂಟ್ ಎರಡು ಅಂತಸ್ತಿಗೆ ಮಾತ್ರ ಅವಕಾಶ ಇರುತ್ತದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಗೆ ಈ ನಿಯಮ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಕಾನೂನುಬಾಹಿರವಾಗಿ ಕಟ್ಟಲು ನಾವು ಅವಕಾಶ ಕೊಡುವುದಿಲ್ಲ ಎಂದರು.

ಆಸ್ಪತ್ರೆಯ ಇವತ್ತಿನ ಸಮಸ್ಯೆಗೆ ಹಿಂದಿನ ಸರಕಾರವೇ ಕಾರಣ. ಕೇವಲ ಒಂದು ವರ್ಷದ ಎಂಒಯು ಮಾಡಿ ಆಸ್ಪತ್ರೆಯನ್ನು ಬಿ.ಆರ್ .ಶೆಟ್ಟಿಗೆ ವಹಿಸಿದ್ದಾರೆ. ಕಾಯಂ ಒಪ್ಪಂದ ಇನ್ನೂ ಆಗಿಲ್ಲ. ಈ ಬಗ್ಗೆ ನಾನು ಮೊದಲೇ ಆಕ್ಷೇಪ ವ್ಯಕ್ತಪಡಿಸಿದ್ದೆ. ಈಗ ಬಿ.ಆರ್. ಶೆಟ್ಟಿ ಆರ್ಥಿಕ ಅಡಚಣೆಯಲ್ಲಿದ್ದಾರೆ. ಅದು ಅವರ ಸಮಸ್ಯೆ ಹೊರತು ನಮ್ಮ ಸಮಸ್ಯೆ ಅಲ್ಲ. ಈ ಹಂತದಲ್ಲಿ ಕಟ್ಟಡದ ವಿನ್ಯಾಸ ಮತ್ತಿತರ ಖರ್ಚು ವಿಷಯ ನೋಡಿದಾಗ ಸರಕಾರ ನಡೆಸುವುದು ಕಷ್ಟ. ಹಿಂದೆ ಆದ ಒಪ್ಪಂದದಂತೆ ಬಿ.ಆರ್. ಶೆಟ್ಟರೇ ಆಸ್ಪತ್ರೆ ಮುನ್ನಡೆಸಿಕೊಂಡು ಹೋಗಬೇಕು ಎಂದು ರಘುಪತಿ ಭಟ್ ಹೇಳಿದ್ದಾರೆ.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

5 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

7 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

7 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

7 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

7 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

8 hours ago