Featured

ಉಡುಪಿ: ಸಾರ್ವಜನಿಕವಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ: ಜಿ. ಜಗದೀಶ್ -Vishwanews24

ಉಡುಪಿ: ಸಾರ್ವಜನಿಕವಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ: ಜಿ. ಜಗದೀಶ್

ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ..

ಉಡುಪಿ: “ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ” ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಈ ಕುರಿತು ವೀಡಿಯೊವೊಂದರಲ್ಲಿ ಮಾಹಿತಿ ನೀಡಿದ ಅವರು “ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ” ಎಂದರು.

ಇನ್ನು “ಈ ಸಮಯದಲ್ಲಿ ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು ಯಾವುದೇ ವಿಶೇಷ ಕೊಡುಗೆಗಳನ್ನು ಸಾರ್ವಜನಿಕರಿಗೆ ನೀಡಲು ಅನುಮತಿಸಲಾಗುವುದಿಲ್ಲ. ಇತರ ದಿನಗಳಲ್ಲಿ ಹೇಗೆ ಸೇವೆ ಸಲ್ಲಿಸುತ್ತಾರೋ ಹಾಗೆ ಮಾತ್ರ ಅವರಿಗೆ ಸೇವೆ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷವನ್ನು ಆಚರಿಸುವುದನ್ನು ಕೂಡ ಈ ಸಮಯದಲ್ಲಿ ನಿಷೇಢಿಸಲಾಗಿದೆ. ಹೊಸ ವರ್ಷದ ಆಚರಣೆಯನ್ನು ಸಾರ್ವಜನಿಕರು ತಮ್ಮ ಮನೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಯಾರಾದರೂ ಪಟಾಕಿಗಳನ್ನು ಬಳಸಲು ಬಯಸಿದರೆ ಅವರು ಹಸಿರು ಪಟಾಕಿಗಳನ್ನು ಮಾತ್ರ ಬಳಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಆಚರಣೆಯ ಸಮಯದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವು ಬಹಳ ಮುಖ್ಯವಾಗಿದೆ” ಎಂದು ಹೇಳಿದ್ದಾರೆ

Vishwa News 24

Recent Posts

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

57 seconds ago

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…

2 hours ago

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ – vishwanews24

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ ಮಂಗಳೂರು: ಬದುಕಿನಲ್ಲಿ ಅನೇಕ ಏಳು…

2 hours ago

ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟಕ್ಕೆ ಲೈಸನ್ಸ್ : ಅರ್ಜಿ ಸಲ್ಲಿಸಲು ಅ.26 ಕೊನೆಯ ದಿನ – vishwanews24

ಉಡುಪಿ :ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ; ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಲು ಅ. 26 ಕೊನೆಯ ದಿನ ಉಡುಪಿ: ದೀಪಾವಳಿ…

3 hours ago

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ – vishwanews24

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ ಉಡುಪಿ…

3 hours ago

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ – vishwanews24

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಸಿಎಂ…

3 hours ago