ಉಡುಪಿ: ಸಾಮಾನ್ಯವಾಗಿ ಆನ್‌ಲೈನ್ ವಂಚಕರು ಹಿಂದಿ, ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಆದ್ದರಿಂದ ಅಂತಹ ಕರೆ ಬಂದರೆ ಕನ್ನಡದಲ್ಲಿ ಉತ್ತರಿಸಿದರೆ ವಂಚನೆಯಿಂದ ಪಾರಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಆ ನಂಬಿಕೆ ಈಗ ಸುಳ್ಳಾಗಿದ್ದು, ಕಟಪಾಡಿಯ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದಾನೆ.
ಕಟಪಾಡಿಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ವಕೀಲನೆಂದು ಪರಿಚಯಿಸಿಕೊಂಡಿದ್ದಾನೆ. ಕರೆ ಮಾಡಿದ ಆತ ‘ನಿಮ್ಮ ಸಾಲದ ಕಂತು ಬಾಕಿ ಇದ್ದು, ಕೇಸ್ ಆಗಿದೆ. ಕೋರ್ಟ್ ಗೆ ಹಾಜರಾಗಬೇಕು’ ಎಂದಿದ್ದಾನೆ. ಜೊತೆಗೆ ಸಾಲದ ಕಂತನ್ನು ಗೂಗಲ್ ಪೇ ಮಾಡುವಂತೆ ಒತ್ತಡ ಹಾಕಿದ್ದಾನೆ. ಕರೆ ಬಂದಿರುವ ನಂಬರ್ 8792701216 ಆಗಿದ್ದು ಟ್ರೂ ಕಾಲರ್‌ನಲ್ಲಿ ನಾಗ ಆರ್. ಎಂದು ಹೆಸರು ತೋರಿಸುತ್ತಿದೆ.
ಬಳಿಕ ಆ ವ್ಯಕ್ತಿಯು ‘ಏ ಚಂದ್ರ ಕೂಡಲೇ ಕೋರ್ಟ್ ಗೆ ಬಾ. ಎಷ್ಟು ಹೊತ್ತಿನಲ್ಲಿ ಬರುತ್ತೀ..’ ಎಂದು ಪ್ರಶ್ನಿಸಿದ್ದು, ನಂತರ ಸಾಲ ನೀಡಿದ ಮ್ಯಾನೇಜರ್ ಅವರೊಂದಿಗೂ ಮಾತನಾಡುವಂತೆ ಹೇಳಿ ಇನ್ನೊಬ್ಬನಿಗೆ ಮೊಬೈಲ್ ಹಸ್ತಾಂತರಿದ್ದಾನೆ. ನಂತರ ಮ್ಯಾನೇಜರ್ ಎಂಬ ವ್ಯಕ್ತಿ ಮಾತನಾಡಿ, ತಾಂತ್ರಿಕ ಸಮಸ್ಯೆ ಇರುವುದರಿಂದ ಸಾಲದ ಕಂತು ಅಟೋ ಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ ಪಾವತಿ ಆಗುತ್ತಿಲ್ಲ. ಕೂಡಲೇ ಗೂಗಲ್ ಪೇ ಮೂಲಕ ಪಾವತಿ ಮಾಡಿ’ ಎಂದು ಆತನೂ ಒತ್ತಡ ಹೇರಿದ್ದಾನೆ.
ಇದು ವಂಚಕರ ಕರೆಯೆಂದು ಅರಿತ ಚಂದ್ರ ಪೂಜಾರಿ ಅವರು, ನನ್ನ ಸಾಲದ ಕಂತು ಬಾಕಿ ಇಲ್ಲ. ಹಾಗೂ ಬಾಕಿ ಇದ್ದಲ್ಲಿ ಕಚೇರಿಗೇ ಬಂದು ಪಾವತಿಸುತ್ತೇನೆ. ನಿಮ್ಮ ಕಚೇರಿ ಉಡುಪಿಯಲ್ಲಿ ಎಲ್ಲಿದೆ?’ ಎಂದು ಕೇಳಿದಾಗ ತಡವರಿಸಿದ ವ್ಯಕ್ತಿಯು ಲೊಕೇಷನ್ ಕಳಿಸುತ್ತೇನೆ’ ಎಂದು ಹೇಳಿ ಕರೆ ಕಡಿತ ಮಾಡಿದ್ದಾನೆ. ನಂತರ ಚಂದ್ರು ತನ್ನ ವಾಹನಕ್ಕೆ ಸಾಲ ನೀಡಿದ ಕಂಪನಿಗೆ ಕರೆ ಮಾಡಿ ವಿಚಾರಿಸಿದಾಗ, ತಮ್ಮ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ ಮತ್ತು ಅವರ ಸಾಲದ ಯಾವುದೇ ಕಂತು ಬಾಕಿ ಉಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…
ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…
"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…