Featured

ಉಡುಪಿ :ಸಿಟಿ ಸೆಂಟರ್ ಮಾಲ್‌ಗೆ ‘ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ಎಂದು ಮರುನಾಮಕರಣ – vishwanews24

ಉಡುಪಿ : ಸಿಟಿ ಸೆಂಟರ್ ಮಾಲ್‌ಗೆ ‘ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ಎಂದು ಮರುನಾಮಕರಣ

ಉಡುಪಿ: ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್ ಅವರ ಪೂರ್ಣಪ್ರಮಾಣದ ಬೆಂಬಲದೊಂದಿಗೆ ಉಡುಪಿ ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಸಿಟಿ ಸೆಂಟರ್ ಮಾಲ್ ಅನ್ನು `ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ ಎಂಬುದಾಗಿ ಮರು ನಾಮಕರಣ ಮಾಡಲಾಗಿದೆ ಎಂದು ಸಿಟಿ ಸೆಂಟರ್ ಮಾಲಕ ಜಮಾಲುದ್ದೀನ್ ತಿಳಿಸಿದ್ದಾರೆ.

ಉಡುಪಿ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿ ಕೋಡಿ ಇಬ್ರಾಹಿಂ ಮೊಹಮ್ಮದ್ ಸಿಟಿ ಸೆಂಟರ್ ಮಾಲ್‌ಗೆ ಬೃಹತ್ ಮೊತ್ತದ ಹೂಡಿಕೆ ಮಾಡಿದ್ದು, ಇದೀಗ ಈ ಮಾಲ್‌ನಲ್ಲಿ ಪೂರ್ಣಪ್ರಮಾಣದ ಬೆಂಬಲವನ್ನು ನೀಡಿ ಅಭಯ ಹಸ್ತವನ್ನು ನೀಡಿದ್ದಾರೆ. ಈ ಮೂಲಕ ಸಿಟಿ ಸೆಂಟರ್ ಮಾಲ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದರು.

ಟಿಪ್‌ಟಾಪ್ ಸಿಟಿ ಸೆಂಟರ್ ಮಾಲ್‌ನ್ನು ಅತ್ಯುತ್ತಮ ವ್ಯಾಪಾರ ವಹಿವಾಟಿನ ಕೇಂದ್ರವಾಗಿ ಬೆಳೆಸಲು ಕಟ್ಟಿಬದ್ಧರಾಗಿದ್ದು, ಕೋಡಿ ಇಬ್ರಾಹಿಂ ಮೊಹಮ್ಮದ್ ಮಾಲ್‌ನ್ನು ಪ್ರಗತಿ ಪಥದಲ್ಲಿ ದೀರ್ಘ ಕಾಲ ನಡೆಸಿಕೊಂಡು ಹೋಗಲು ನಾವು ಜೊತೆಯಾಗಿ ಸಾಗಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಕೋಡಿ ಇಬ್ರಾಹಿಂ ಮೊಹಮ್ಮದ್ ನಮ್ಮೊಂದಿಗೆ ಕೈಜೋಡಿಸಿದ ಕಾರಣ ಈ ಮಾಲ್ ಸರ್ವತೋಮುಖ ಬೆಳವಣಿಗೆ ಕಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್ ಮಾತನಾಡಿ, ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವು ಒಂದಾಗಿ ಈ ಮಾಲ್‌ನ್ನು ಹೊಸ ರೀತಿಯಲ್ಲಿ ಮುನ್ನಡೆಸಲಿದ್ದೇವೆ. ಆ ಮೂಲಕ ಈ ಮಾಲ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಸಿಟಿ ಸೆಂಟರ್ ಮಾಲ್‌ನ ಮೆನೇಜರ್ ರಾಧಾಕೃಷ್ಣ ಪ್ರಭು, ಬ್ಯುಸಿನೆಸ್ ಹೆಡ್ ಹನೀಫ್ ಮುಹಮ್ಮದ್, ಉದ್ಯಮಿ ಮುಸ್ತಕ್ ಉಪಸ್ಥಿತರಿದ್ದರು

Vishwa News 24

Recent Posts

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆಎಸ್‌ಟಿಡಿಸಿ ವೀಕೆಂಡ್ ಟೂರ್ ಪ್ಯಾಕೇಜ್, ವಿಶೇಷ ಶೀಘ್ರ ದರ್ಶನ – vishwanews24

ವೀಕೆಂಡ್‌ನಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆಗೆ ಹೋಗುವವರಿಗೆ ಗುಡ್‌ನ್ಯೂಸ್: ವಿಶೇಷ ದರ್ಶನದೊಂದಿಗೆ KSTDC ಹೊಸ ಟೂರ್ ಪ್ಯಾಕೇಜ್ ಬೆಂಗಳೂರು: ಕರಾವಳಿ ಕರ್ನಾಟಕದ…

1 day ago

ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ , ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ – vishwanews24

ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಕಾರವಾರ: ಕಾಲೇಜು ಶುಲ್ಕ ಕಟ್ಟಲು ತಂದೆ…

1 day ago

ಉಡುಪಿ: ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭವನ ನಿರ್ಮಾಣಕ್ಕೆ ಸಿಎಂಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ – vishwanews24

ಉಡುಪಿ: ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭವನ ನಿರ್ಮಾಣಕ್ಕೆ ಸಿಎಂಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ ಉಡುಪಿ: ಪಂಚ ದ್ರಾವಿಡ…

1 day ago

ಜನರ ಕೋಪ ನೋಡಿದರೆ ಮುಂದಿನ ಚುನಾವಣೆಯನ್ನು ನಾವು ಈಗಾಗಲೇ ಗೆದ್ದಿದ್ದೇವೆ: ರಾಹುಲ್ ಗಾಂಧಿ – vishwanews24

ಒಟ್ಟಾಗಿ ನಿಂತು ವಿರೋಧಿಸಿದರೆ ಬಿಜೆಪಿಯನ್ನು ಸೋಲಿಸುವುದು ಸುಲಭ .. ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ಪಕ್ಷದ ನಾಯಕರು ಬಲಿಯಾಗಬಾರದು :ರಾಹುಲ್ ಗಾಂಧಿ…

1 day ago

ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ ; ಖಾತೆ ವಿಚಾರಕ್ಕೆ ಸ್ಪಷ್ಟತೆ ಬೇಕು ಎಂದ ಸಚಿವ – vishwanews24

ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ ; ಖಾತೆ ವಿಚಾರಕ್ಕೆ ಸ್ಪಷ್ಟತೆ ಬೇಕು ಎಂದ ಸಚಿವ ಬೆಂಗಳೂರು: ಪ್ರಮಾಣವಚನ…

1 day ago

ಪೆಟ್ರೋಲ್, ಗ್ಯಾಸ್‌ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ : ಗಗನಕ್ಕೇರಿದ ಅಕ್ಕಿ ಬೆಲೆ ; ಕೆಜಿಗೆ 10 ರಿಂದ 20 ರೂ. ಹೆಚ್ಚಳ – vishwanews24

ಪೆಟ್ರೋಲ್, ಗ್ಯಾಸ್‌ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ : ಗಗನಕ್ಕೇರಿದ ಅಕ್ಕಿ ಬೆಲೆ ; ಕೆಜಿಗೆ 10 ರಿಂದ 20…

1 day ago