ಉಡುಪಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಆಡಳಿತಾವಧಿಯ ಯು.ಪಿ.ಎ. ಸರಕಾರದ ಕಾಂಗ್ರೇಸ್ ಪಕ್ಷದ ಸಾಧನೆ ಹೊರತು ಬಿಜೆಪಿಯದ್ದಲ್ಲ. ಯುಪಿಎ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿಯವರ ವಿಶೇಷ ಕಾಳಜಿಯೊಂದಿಗೆ 2009ರಲ್ಲಿ ಪ್ರಸ್ತಾವನೆಗೊಂಡ ಈ ಯೋಜನೆಯನ್ನು 2011 ಮತ್ತು 2012 ರಲ್ಲಿ ಬಹಳಷ್ಟು ತಿದ್ದುಪಡಿಯೊಂದಿಗೆ ಲೋಕಸಭೆಯಲ್ಲಿ ಮಂಡಿಸಿದಾಗಲೂ ಆಗ ವಿರೋಧ ಪಕ್ಷವಾಗಿದ್ದ ಈ ಬಿಜೆಪಿ ಈ ಮಸೂದೆ ಜ್ಯಾರಿಯಾಗದಂತೆ ನೋಡಿಕೊಂಡಿತ್ತು. ಮತ್ತೆ 2013ರ ಜುಲೈ ತಿಂಗಳಲ್ಲಿ ಅನ್ಯಪಕ್ಷಗಳ ಸಹಕಾರದೊಂದಿಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ಈ ಮಸೂದೆಯನ್ನು ಜ್ಯಾರಿಗೆ ತಂದಿತ್ತು. ಬಹುಶ: ಬಿಜೆಪಿಯ ಜಿಲ್ಲಾ ಅಧ್ಯಕ್ಷರನ್ನು ಈ ಬಗ್ಗೆ ಮಾಹಿತಿಯ ಕೊರತೆ ಕಾಡುತ್ತಿದೆ ಎಂದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
2013 ರಲ್ಲಿ ದೇಶದ ಶೇ. 78 ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ಗುರಿಯೊಂದಿಗೆ ಜ್ಯಾರಿಗೆ ಬಂದ ಈ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿಯೇ ರಾಜ್ಯದ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನ್ನಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟಿನ್, ಕ್ಷೀರಭಾಗ್ಯವೇ ಮೊದಲಾದ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಆಗಲೂ ಉಚಿತ ಆಹಾರ ಜನರನ್ನು ಉದಾಸೀನತೆಯೆಡೆಗೆ ದೂಡುತ್ತದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಬಿಜೆಪಿ ಸರಕಾರ ಪ್ರಾಯೋಜಿತ ಯೋಜನೆಯಲ್ಲ. ಸುಳ್ಳು ಹೇಳಿ ಜನರನ್ನು ದಿಕ್ಕುತಪ್ಪಿಸುವುದು ಬಿಜೆಪಿಯ ಸಂಸ್ಕಾರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶನಿವಾರದಿಂದ ಲಸಿಕೆಗಾಗಿ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ -Vishwanews24
ಇದು ಹೊರತುಪಡಿಸಿ ಆ ಅವಧಿಯಲ್ಲಿ ಯು.ಪಿ.ಎ. ಸರಕಾರ ಜ್ಯಾರಿಗೆ ತಂದ ಆಧಾರ್ ಕಾರ್ಡು, ಉದ್ಯೋಗ ಖಾತ್ರಿ ಯೋಜನೆಯೇ ಮೊದಲಾದ ಹತ್ತು ಹಲವು ಯೋಜನೆಗಳನ್ನು ಟೀಕಿಸುತ್ತಲೇ ಬಂದ ಬಿಜೆಪಿ ಇದೀಗ ಆ ಯೋಜನೆಗಳ ಹೆಸರು ಬದಲಿಸಿ, ತಮ್ಮದ್ದೇ ಯೋಜನೆಗಳೆಂದು ಹೇಳುತ್ತಿರುವುದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಭೂಷಣ ಅಲ್ಲ. ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಇದಕ್ಕೊಂದು ಉದಾಹರಣೆ ಎಂದು ಅವರು ಹೇಳಿದ್ದಾರೆ.
ಕೋರೋನಾ ಆರ್ಥಿಕ ಸಂಕಷ್ಟವನ್ನು ಮುಂದಿರಿಸಿಕೊಂಡು, ಅನ್ನಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ 7 ಕೆಜಿ ಇದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದು, ಈಗ ಅದನ್ನು ಸತ್ವಯುತ ಆಹಾರ ನೀಡಿಕೆಯ ಅಪರಗುರಿಯೊಂದಿಗೆ ಅಕ್ಕಿಯನ್ನು 2 ಕೆಜಿಗೆ ಇಳಿಸಿ, ಅದರೊಂದಿಗೆ ರಾಗಿ ಮತ್ತು ಗೋಧಿಯನ್ನು ಕೊಡುವ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಇದರ ಹೊರತಾಗಿಯೂ ದೇಶಾದ್ಯಂತ ಕೋವಿಡ್ ಲಸಿಕೆಗಳ ಅಲಭ್ಯತೆ, ಆಕ್ಸಿಜನ್ ಮತ್ತು ರೇಂಡಮ್ಸಿವಿರ್ ಮಾತ್ರೆಗಳ ಕೊರತೆ ದೇಶದ ಕೊರೊನಾ ಭಾದಿತರನ್ನು ಆತಂಕದಲ್ಲಿರಿಸಿದೆ. ತನ್ನದ್ದೇ ಪಕ್ಷದ ಆಂತರಿಕ ವ್ಯವಹಾರ, ಅದೇ ಪಕ್ಷದ ಅಧ್ಯಕ್ಷರೊಬ್ಬರ ಗಮನಕ್ಕೆ ಬಾರದಿರುವುದು ವಿಷಾದನೀಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಮೂರ್ಖ ಸರ್ಕಾರ, ಇನ್ನೂ ಕೂಡಾ ಇವರಿಗೆ ಬುದ್ದಿ ಬಂದಿಲ್ಲ : ಕುಮಾರಸ್ವಾಮಿ -Vishwanews24
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…
ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…
`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…