ಉಡುಪಿ : ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು, ಹತ್ತಾರು ಅಪಘಾತ, ಹಲವು ಜೀವಬಲಿ, ವಿವಿಧ ಸಂಘಟನೆಗಳ ಪ್ರತಿಭಟನೆಗೆ ಕಾರಣವಾದ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169ಎಯ ಇಂದ್ರಾಳಿ ರೈಲ್ವೆ ಓವರ್ ಬ್ರಿಡ್ಜ್‌ಗೆ ಕೊನೆಗೂ ಉದ್ಘಾಟನೆಯ ಮುಹೂರ್ತ ಫಿಕ್ಸ್ ಆಗಿದೆ.
ಸೆ.21ರ ಬೆಳಗ್ಗೆ 11:15ಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಈ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ ಎಂದು ಸಚಿವರ ಅಧಿಕೃತ ಪ್ರವಾಸ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿದೆ.
ಸೆ.21ರಂದು ಬೆಳಗ್ಗೆ 9ಗಂಟೆಗೆ ಬೆಂಗಳೂರಿನಿಂದ ಹೊರಟು 10:15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಚಿವರು, ಅಲ್ಲಿಂದ 11:15ಕ್ಕೆ ಉಡುಪಿಗೆ ಆಗಮಿಸಿ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆಯುವ ಸಚಿವರು ಅಪರಾಹ್ನ 2:45ಕ್ಕೆ ಕುಂದಾಪುರಕ್ಕೆ ತೆರಳಲಿದ್ದಾರೆ.
ಅಪರಾಹ್ನ 3:30ಕ್ಕೆ ಕುಂದಾಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸುವ ಸಚಿವ ವಿ.ಸೋಮಣ್ಣ, ಸಂಜೆ 4:15ಕ್ಕೆ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೀಕೆಂಡ್‌ನಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆಗೆ ಹೋಗುವವರಿಗೆ ಗುಡ್‌ನ್ಯೂಸ್: ವಿಶೇಷ ದರ್ಶನದೊಂದಿಗೆ KSTDC ಹೊಸ ಟೂರ್ ಪ್ಯಾಕೇಜ್ ಬೆಂಗಳೂರು: ಕರಾವಳಿ ಕರ್ನಾಟಕದ…
ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಕಾರವಾರ: ಕಾಲೇಜು ಶುಲ್ಕ ಕಟ್ಟಲು ತಂದೆ…
ಉಡುಪಿ: ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭವನ ನಿರ್ಮಾಣಕ್ಕೆ ಸಿಎಂಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ ಉಡುಪಿ: ಪಂಚ ದ್ರಾವಿಡ…
ಒಟ್ಟಾಗಿ ನಿಂತು ವಿರೋಧಿಸಿದರೆ ಬಿಜೆಪಿಯನ್ನು ಸೋಲಿಸುವುದು ಸುಲಭ .. ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ಪಕ್ಷದ ನಾಯಕರು ಬಲಿಯಾಗಬಾರದು :ರಾಹುಲ್ ಗಾಂಧಿ…
ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ ; ಖಾತೆ ವಿಚಾರಕ್ಕೆ ಸ್ಪಷ್ಟತೆ ಬೇಕು ಎಂದ ಸಚಿವ ಬೆಂಗಳೂರು: ಪ್ರಮಾಣವಚನ…
ಪೆಟ್ರೋಲ್, ಗ್ಯಾಸ್ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ : ಗಗನಕ್ಕೇರಿದ ಅಕ್ಕಿ ಬೆಲೆ ; ಕೆಜಿಗೆ 10 ರಿಂದ 20…