ಉಡುಪಿ: ಸ್ಕಾರ್ಫ್ ಧರಿಸಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಬೇಕು ಎಂದು ಸರಕಾರದ ಬಳಿ ಬೇಡಿಕೆ ಇಟ್ಟು ಶಾಸಕರಿಗೆ ಮಂತ್ರಿಗಳಿಗೆ ಒತ್ತಡ ಹಾಕುವುದು ಸೂಕ್ತ ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದು ಒಳಿತು ಎಂಬ ಅಭಿಪ್ರಾಯವನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ಸಹಬಾಳ್ವೆ ತಂಡದ ಅಧ್ಯಕ್ಷನ ನೆಲೆಯಲ್ಲಿ ನೀಡಿದ್ದೇನೆ ಎಂದು ಸಹಬಾಳ್ವೆ ಉಡುಪಿ ತಂಡದ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.
ಉಡುಪಿ ಶಾಸಕ ರಘುಪತಿ ಭಟ್ ರಿಗೂ ಭೇಟಿ ಆಗಿ ಈ ಮನವಿ ಮಾಡಿದ್ದೇವೆ ,ಅವರು ಸರಕಾರಕ್ಕೆ ಬರೆಯತ್ತೇನೆ ಹಾಗೂ ಸಂಬಂಧ ಪಟ್ಟ ಸಚಿವರ ಅಭಿಪ್ರಾಯ ಪಡೆಯುತ್ತೇನೆ ಸದ್ಯಕ್ಕೆ ಇದನ್ನು ಒಪ್ಪಿದರೆ ,ಅನ್ಯ ಸಂಘಟನೆಗಳು ಹೊಸ ಹೊಸಬೇಡಿಕೆಯೊಂದಿಗೆ ಬಂದು ಘರ್ಷಣೆಯ ವಾತಾವರಣ ಉಂಟಾದರೆ ಉಡುಪಿಯ ಶಾಂತಿ ಕದಡುವುದು ಎಂಬ ಭಯವನ್ನೂ ವ್ಯಕ್ತ ಪಡಿಸಿದ್ದಾರೆ.
ಈ ವಿದ್ಯಾರ್ಥಿನಿಯರ ಅಕೆಡೆಮಿಕ್ ಕರಿಯರ್ ಹಾಳಾಗಬಾರದು, ಈ ವಿಚಾರದ ಬೇಡಿಕೆ ಯನ್ನು ದೊಡ್ಡ ಮಟ್ಟದಲ್ಲಿ ಸಂಬಂಧ ಪಟ್ಟವರ ಬಳಿ ಸಂಬಂಧಪಟ್ಟವರ ಮುಖೇನ ಇಟ್ಟು ಮನವರಿಕೆ ಮಾಡಬೇಕು ವಿನಹ ,ಈ ರೀತಿ ತರಗತಿ ಬಹಿಷ್ಕಾರ ಮಾಡಿದರೆ ಇದು ಒಂದು ಐಸೋಲೇಟೆಡ್ ಮ್ಯಾಟರ್ ಆಗಿಬಿಡುತ್ತದೆ ಎಂದು ಮನವರಿಕೆ ಮಾಡಿದಾಗ ಕೊನೆಗೆ ವಿದ್ಯಾರ್ಥಿನಿಯರು ಸಮವಸ್ತ್ರದ ಭಾಗವಾದ ಶಾಲನ್ನೇ ಇತರ ಹುಡುಗಿಯರು ಹೆಗಲಿಗೆ ಹಾಕಿದರೆ ನಾವು ತಲೆಗೆ ಮಾತ್ರ ಹಾಕುತ್ತೇವೆ ,ಮುಖ ತೋರಿಸುತ್ತೇವೆ ಪರವಾಗಿಲ್ಲ ನಮ್ಮ ಧಾರ್ಮಿಕ ಆಚರಣೆಗೆ ಅವಕಾಶ ನೀಡಿ ಎಂಬ ಬೇಡಿಕೆ ಯನ್ನು ಇಟ್ಟಿದ್ದು ಅದನ್ನೂ ಸರಕಾರಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಖೇನ ನೀಡಲಾಗಿದೆ ,ಅದಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ , ವಿದ್ಯಾರ್ಥಿನಿಯರು ಹಟ ಹಿಡಿದು ತರಗತಿ ಬಹಿಷ್ಕಾರ ಮಾಡಿ ತಿಂಗಳಾಗುತ್ತಾ ಬಂತು, ಉಡುಪಿಯಲ್ಲಿ ಇದೊಂದು ಅನಪೇಕ್ಷಿತ ವಿವಾದ , ಈಗಾಗಲೇ ರಾಜ್ಯ ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಕಟ ಆಗುತ್ತಿರುವ ಈ ಸುಧ್ದಿ ಬಗ್ಗೆ ಒಂದಿಷ್ಟು ತನಗೆ ತಿಳಿದ ಸತ್ಯಾಂಶ ತಮಗೆಲ್ಲರಿಗೂ ತಿಳಿಯಲಿ ಎಂದು ಅಮೃತ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…