ಉಡುಪಿ: ವಸತಿ ಸಮುಚ್ಚಯದ ಬಳಿ ಸ್ಕೂಟರ್ ನಿಲ್ಲಿಸಿ ಡೆಲಿವರಿ ಬಾಯ್ ಪಾರ್ಸೆಲ್ ಕೊಟ್ಟು ಹಿಂತಿರುಗುವಷ್ಟರಲ್ಲಿ ಕಳ್ಳನೋರ್ವ ಸ್ಕೂಟರ್ ಸಮೇತ ಅದರಲ್ಲಿದ್ದ ಪಾರ್ಸೆಲ್ ವಸ್ತುಗಳನ್ನು ಹೊತ್ತೊಯ್ದ ಘಟನೆ ನಗರದ ವಿದ್ಯೋದಯ ಹೈಸ್ಕೂಲ್ ಬಳಿ ಜ.31ರ ಸೋಮವಾರ ನಡೆದಿದೆ.
ಅಂಬಲಪಾಡಿಯಲ್ಲಿರುವ ಇ-ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೊಳಲಗಿರಿಯ ಗಣೇಶ (21) ತಮ್ಮ ಹೋಂಡಾ ಡಿಯೋ ಸ್ಕೂಟರ್ ನ್ನು ವಿದ್ಯೋದಯ ಹೈಸ್ಕೂಲ್ ಬಳಿ ಇರುವ ಸಾಯಿರಾಧಾ ಗೋಕುಲಧಾಮ ಅಪಾರ್ಟ್‌ಮೆಂಟ್‌ನ ಎದುರುಗಡೆ ನಿಲ್ಲಿಸಿ ಪಾರ್ಸೆಲ್ ಕೊಟ್ಟು ವಾಪಾಸು10:05 ಗಂಟೆಗೆ ಬಂದು ನೋಡಿದಾಗ ಅದರಲ್ಲಿದ್ದ ಸೊತ್ತುಗಳ ಸಮೇತ ಸ್ಕೂಟರ್ ಕಾಣೆಯಾಗಿತ್ತು. ಎಲ್ಲಾ ಕಡೆ ಹುಡುಕಿ ಪತ್ತೆಯಾಗದೆ ಇದ್ದಾಗ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿದ್ದಾರೆ.
ಇದನ್ನೂ ಓದಿ :
ಸ್ಕೂಟರ್ ನಲ್ಲಿ Infinix Hot -10 play ಕಂಪೆನಿಯ ರೂ. 8,299/- ಮೌಲ್ಯದ ಮೊಬೈಲ್, Pigeon ಕಂಪೆನಿಯ ರೂ. 2,191/- ಮೌಲ್ಯದ ಮಿಕ್ಸರ್ ಗ್ರೈಂಡರ್ ಹಾಗೂ ಇನ್ನಿತರ ಸಣ್ಣಪುಟ್ಟ ಪಾರ್ಸೆಲ್ ಒಟ್ಟು ಮೌಲ್ಯ 20,000/- ಆಗಬಹುದು. 80,000 ಮೌಲ್ಯದ ಸ್ಕೂಟರ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ.
ಇನ್ನು ಗಣೇಶ ಅವರ ಸ್ಕೂಟರ್ ನ್ನು ಕಳ್ಳನೋರ್ವ ಎಗರಿಸಿರುವ ದೃಶ್ಯಾವಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ :
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…