Featured

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ – vishwanews24

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ

ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭಗೊಂಡಿದ್ದು, ನಗರದ ಆಟೋ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ. ಬುಧವಾರದಿಂದಲೇ ಚಾಲಕರು ಗ್ಯಾಸ್ ತುಂಬಿಸಲು ಎಲ್‌ಪಿಜಿ ಪಂಪ್‌ಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಕಂಡುಬಂದವು.

ಬುಧವಾರ ಸುಮಾರು 7,000 ಲೀಟರ್ ಗ್ಯಾಸ್ ಪೂರೈಕೆಯಾಗಿದ್ದು, ದೀರ್ಘಕಾಲದ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದ ಚಾಲಕರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪೂರೈಕೆಯಾಗುವ ನಿರೀಕ್ಷೆಯಿದೆ.

ಕಳೆದ ಕೆಲವು ವಾರಗಳಿಂದ ಪೂರೈಕೆ ಸ್ಥಗಿತಗೊಂಡಿದ್ದರಿಂದ, ಅನಿವಾರ್ಯವಾಗಿ ಅನೇಕ ಆಟೋ ಚಾಲಕರು ಪೆಟ್ರೋಲ್ ಬಳಸಿ ವಾಹನ ಚಲಾಯಿಸಲು ಆರಂಭಿಸಿದ್ದರು. ಇದು ಇಂಧನ ವೆಚ್ಚವನ್ನು ಹೆಚ್ಚಿಸಿ, ಅವರ ದಿನನಿತ್ಯದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಇನ್ನು ಕೆಲವು ಚಾಲಕರು ಆಟೋ ಓಡಿಸುವುದನ್ನೇ ಬಿಟ್ಟು ದಿನಕೂಲಿ ಕೆಲಸಕ್ಕೂ ಹೋಗಿದ್ದರು.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಅನಿಲ ಆಮದಿನ ಮೇಲೆ ಪರಿಣಾಮ ಬೀರಿದ್ದು, ಉಡುಪಿ ಸೇರಿದಂತೆ ಹಲವು ನಗರಗಳಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿತ್ತು.

ಗ್ಯಾಸ್ ಪೂರೈಕೆ ಪುನಾರಂಭಗೊಂಡಿರುವುದು ಚಾಲಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಇಂತಹ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಚಾಲಕರು ಮನವಿ ಮಾಡಿದ್ದಾರೆ.

ಗ್ಯಾಸ್ ತುಂಬಿಸಲು ಆಟೋ ರಿಕ್ಷಾಗಳು ರಸ್ತೆ ಬದಿಯಲ್ಲಿ ದೀರ್ಘ ಸಾಲಿನಲ್ಲಿ ನಿಂತಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Vishwa News 24

Recent Posts

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ – vishwanews24

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…

2 hours ago

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ – vishwanews24

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…

3 hours ago

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ  ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…

4 hours ago

ನಾಳೆ SSLC ಫಲಿತಾಂಶ  ಪ್ರಕಟ – vishwanews24

ನಾಳೆ SSLC ಫಲಿತಾಂಶ  ಪ್ರಕಟ ಬೆಂಗಳೂರು: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ  ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…

19 hours ago

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ ; ಬಾಲಕಿ ಸಾವು -vishwanews24

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ - ಬಾಲಕಿ ಸಾವು ಕಾಪು : ಸರ್ವಿಸ್‌ ರಸ್ತೆಯಿಂದ ರಾಷ್ಟ್ರೀಯ…

1 day ago

ತಾಂತ್ರಿಕ ದೋಷ: ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ – vishwanews24

ತಪ್ಪಿದ ಭಾರಿ ದುರಂತ: 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ ; ಹುಬ್ಬಳ್ಳಿ ತಲುಪಬೇಕಿದ್ದ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಹುಬ್ಬಳ್ಳಿ:…

3 days ago