Featured

ಉಡುಪಿ : ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ , ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲ : ಶಾಸಕ ರಘುಪತಿ ಭಟ್‌

ಉಡುಪಿ : ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ , ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲ : ಶಾಸಕ ರಘುಪತಿ ಭಟ್‌

ಉಡುಪಿ: ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ , ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲಎಂದು ಶಾಸಕ ರಘುಪತಿ ಭಟ್‌  ಉಡುಪಿ ಶಾಸಕ ರಘುಪತಿ ಭಟ್‌ ಹೇಳಿದ್ದಾರೆ.

ಅವರು ಗುರುವಾರ ಉಡುಪಿಯಲ್ಲಿ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ತಡೆ ವಿಚಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಸಲ್ಮಾನ ಸಮಾಜ ಸ್ವಲ್ಪ ಸುಧಾರಣೆಯನ್ನು ಹೊಂದಬೇಕಾಗಿದ್ದು, ನಾವು ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ ಎಂದು ಅರಿತುಕೊಳ್ಳಬೇಕಾಗುತ್ತದೆ.

ಮುಸಲ್ಮಾನರು ಧರ್ಮಾಚರಣೆ ಮಾಡುವುದಕ್ಕೆ ಯಾವುದೇ ಆಕ್ಷೇಪಗಳು ಇಲ್ಲ, ಶಿಸ್ತು , ಸಮವಸ್ತ್ರ ಸಮಾನತೆಯನ್ನು ಎಲ್ಲರೂ ಪಾಲಿಸಬೇಕು ಅದರ ಜೊತೆಗೆ ಭಾರತದ ಪ್ರಜೆಯಾಗಿ ಅವರ ಕರ್ತವ್ಯ ಏನು ಎಂದು ಮೊದಲು ತಿಳಿದುಕೊಳ್ಳಬೇಕು. ಹಿಂದೂಧರ್ಮೀಯರು ಯಾವಾಗಲೂ ಸಹಿಷ್ಣುಗಳು ನಮ್ಮದು ವಸುದೈವ ಕುಟುಂಬಕಂ ಎಂದು ಹೇಳಿಕೊಂಡು ಬಂದಿರುವ ನಾವು ಇತ್ತೀಚೆಗೆ ಅತಿರೇಕವಾಗಿ ನಡವಳಿಕೆಗಳು ಕಂಡ ಬಂದಾಗ ಈ ತರದ ಬೆಳವಣಿಗೆಗಳಾಗಿವೆ ಎಂದರು.

ರಾಜ್ಯದಲ್ಲಿ ಹಿಜಾಬ್, ವ್ಯಾಪಾರ, ಹಲಾಲ್, ವಿಚಾರ ಚರ್ಚೆಯಾಗುತ್ತಿದೆ ನಮ್ಮ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಸಾರಿ ಸಾರಿ ಹೇಳಿದರೂ ಅವರು ಕೇಳಲಿಲ್ಲ ಇದರೊಂದಿಗೆ ಹೈಕೊರ್ಟ್‌ ತೀರ್ಪು ಬಂದ ಬಳಿಕ ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ಇದಕ್ಕೆ ಕಾರಣವಾಗಿದೆ. ಭಟ್ಕಳದಲ್ಲಿ ಹಿಂದೂಗಳ ಅಂಗಡಿಯನ್ನು ಜಬರ್ದಸ್ತ್ ಯಾಗಿ ಬಂದ್ ಮಾಡಿಸಲಾಯ್ತು ಈ ಎಲ್ಲಾ ಘಟನೆಗಳು ಹಿಂದೂಗಳ ಭಾವನೆಯನ್ನು ಕೆರಳಿಸಿವೆ ಆದ್ದರಿಂದ ಹಿಂದೂ ಗಳು ವ್ಯಾಪಾರ, ಹಲಾಲ್ ಮತ್ತಿತರ ವಿಚಾರವನ್ನು ಚರ್ಚೆಗೆ ತಂದರು.

ರಾಜ್ಯದಲ್ಲಿ ಹಲಾಲ್‌ ಚಿಕನ್‌ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಹಲಾಲ್ ಚಿಕನ್ ಅನ್ನು ಹಿಂದೂಗಳು ಬಾಯ್ಕಾಟ ಮಾಡಿದ್ದು ತಪ್ಪಲ್ಲ ಹಿಂದೂಗಳ ಈ ನಡೆಯಲ್ಲಿ ಯಾವುದೇ ತಪ್ಪಿಲ್ಲ ಆದರೆ ಎಲ್ಲಿಯೂ ಕೂಡ ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲ. ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ ಕೋಳಿಯನ್ನು ಕಟ್ ಮಾಡುವ ರೀತಿ, ಅಲ್ಲಾನಿಕೆ ಸಮರ್ಪಣೆ ಮಾಡುವುದು ಇಸ್ಲಾಂ ಪದ್ಧತಿಯಂತೆ ನಡೆಯುತ್ತದೆ ಹಿಂದೂ ಜನಜಾಗೃತಿ ಮಾಡಿಸುವುದು ತಪ್ಪಲ್ಲ ಸರಿಯಾಗಿಯೇ ಇದೆ ಎಂದರು.

 

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

8 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

10 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

11 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

11 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

11 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

11 hours ago