ಉಡುಪಿ: ಹಿಜಾಬ್ ಕಾರಣಕ್ಕೆ ಯಾರಾದರೂ ಶಿಕ್ಷಣ ವಂಚಿತರಾಗಿದ್ದರೆ, ನೇರವಾಗಿ ಸಿಎಫ್‌ಐ ಕಾರಣ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.
ಹಿಜಾಬ್ ಗದ್ದಲದಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ವಂಚನೆ ವಿಚಾರದ ಕುರಿತು ಮಾತನಾಡಿದ ಅವರು, ಹಿಜಾಬ್ ಹೋರಾಟವನ್ನು ಪ್ರಾರಂಭ ಮಾಡಿದ್ದು ನಾವಲ್ಲ. ಹೋರಾಟವನ್ನು ಪ್ರಾರಂಭ ಮಾಡಿದ್ದು ಸಿಎಫ್ಐ. ನಮ್ಮ ಕಾಲೇಜಿನಲ್ಲಿ ಹಿಂದಿನಿಂದಲೂ ಯೂನಿಫಾರ್ಮ್ ಕೋಡ್ ಪಾಲನೆ ಆಗುತ್ತಿತ್ತು. ಕಳೆದ 20 ವರ್ಷದಿಂದ ಯೂನಿಫಾರ್ಮ್ ಕೋಡ್ ಇದ್ದ ಬಗ್ಗೆ ದಾಖಲೆ ಕೋರ್ಟಿಗೆ ಸಲ್ಲಿಸಿದ್ದೆವು. ಅದೇ ಕಾರಣಕ್ಕೆ ನಮಗೆ ಹೈಕೋರ್ಟಿನಲ್ಲಿ ಜಯ ಸಿಕ್ಕಿದೆ ಎಂದರು.
ತರಗತಿಯವರೆಗೆ ಹಿಜಾಬ್ ಧರಿಸಿ ಬಂದು ನಂತರ ಹಿಜಾದ್ ತೆಗೆದಿಟ್ಟು ಪಾಠ ಕೇಳುತ್ತಿದ್ದರು. ಸಿಎಫ್‌ಐಯವರು ಬಂದು ಹಿಜಾಬ್ ವಿವಾದ ಪ್ರಾರಂಭಿಸಿದರು. ಇವರಿಂದ ಹಿಜಾಬ್ ಧರಿಸಿ ಹೋಗುತ್ತಿದ್ದ ಕಾಲೇಜುಗಳಲ್ಲೂ ಸಮಸ್ಯೆ ಉಂಟಾಯ್ತು. ಆ ಕಾಲೇಜುಗಳಲ್ಲೂ ಈಗ ಹಿಜಾಬ್ ಧರಿಸಲು ಅವಕಾಶ ವಿಲ್ಲದಂತಾಗಿದ್ದು, ಹಿಜಾಬ್ ಕಾರಣಕ್ಕೆ ಯಾರಾದರೂ ಶಿಕ್ಷಣ ವಂಚಿತರಾಗಿದ್ದರೆ, ನೇರವಾಗಿ ಸಿ ಎಫ್‌ಐ ಕಾರಣ ಎಂದಿದ್ದಾರೆ.
ಇನ್ನು ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇವತ್ತಿಗೂ ಮುಸ್ಲಿಂ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಪ್ರತಿಭಾನ್ವಿತ ಮುಸ್ಲಿಂ ಹೆಣ್ಣು ಮಕ್ಕಳಿಗೆ ನಾವು ಸನ್ಮಾನ ಮಾಡಿದ್ದೇವೆ. ಕಳೆದ ವರ್ಷಕ್ಕಿಂತ ಜಾಸ್ತಿ ಮುಸ್ಲಿಂ ಹೆಣ್ಣು ಮಕ್ಕಳು ಈ ಬಾರಿ ಅಡ್ಮಿಶನ್ ಪಡೆದಿದ್ದಾರೆ. ಇದು ಕೇವಲ ಸಿಎಫ್ಐ ಮಾಡಿರುವ ಸೃಷ್ಟಿ. ವಿದ್ಯಾಭ್ಯಾಸ ಬೇಕು ಎನ್ನುವ ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ. ಧರ್ಮದ ಅಂದತೆ ಸೃಷ್ಟಿಸುವವರು ಸೃಷ್ಟಿಸ್ತಾ ಇದ್ದಾರೆ. ವಿದ್ಯಾಭ್ಯಾಸ ಬೇಕು ಎನ್ನುವ ಎಲ್ಲ ಹೆಣ್ಣು ಮಕ್ಕಳು ಯುನಿಫಾರ್ಮ್ ಕೋಡ್ ಪಾಲಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ನಾವು ಕಡ್ಡಾಯ ಮಾಡಿದ್ದು ಯುನಿಫಾರ್ಮ್ ಕೋಡ್, ಹಿಜಾಬ್ ವಿವಾದ ಆರಂಭಿಸಿದ್ದು ಸಿಎಫ್‌ಐ ಎಂದು ಹೇಳಿದ್ದಾರೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…