Featured

ಉಡುಪಿ : 4 ವರ್ಷದ ಮಗುವಿಗೆ ಲೈಂಗಿಕ ಹಲ್ಲೆ : 70 ವರ್ಷದ ವೃದ್ದನ ಆರೋಪ ಸಾಬೀತು -Vishwanews24

ಉಡುಪಿ : ನಾಲ್ಕು ವರ್ಷದ ಮಗುವಿನ ಮೇಲೆ ಘೋರ ಲೈಂಗಿಕ ಹಲ್ಲೆ ನಡೆಸಿದ 70 ವರ್ಷದ ವೃದ್ದನ ಆರೋಪ ಸಾಬೀತಾಗಿದೆ ಎಂದು ಉಡುಪಿ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಧೀಶ ಸಿ,ಎಂ ಜೋಶಿ ಅವರು ಸೆ. 25 ಕ್ಕೆ ಶಿಕ್ಷೆ ಪ್ರಮಾಣ ಕಾಯ್ದಿರಿಸಿ ಸೋಮವಾರ ತೀರ್ಪು ನೀಡಿದ್ದಾರೆ.

2018ರ ಫೆಬ್ರವರಿಯಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯ ನಾಲ್ಕು ವರ್ಷದ, ಅಂಗನವಾಡಿಗೆ ಹೋಗುವ ಮಗುವನ್ನು ಅದೇ ಊರಿನ ಬಸವ(70) ಎಂಬಾತ ಕರೆದೊಯ್ದು ಘೋರ ಲೈಂಗಿಕ ಅಪರಾಧ ಎಸಗಿದ್ದ. ಅಂದು ಸಾಯಾಂಕಾಲ ಮಗು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ವಿಚಾರಿಸಿದಾಗ ಘಟನೆಯ ಬಗ್ಗೆ ಮಗು ವಿವರಿಸಿತ್ತು. ಆ ಬಳಿಕ ಈ ಕುರಿತಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೆ. 8 ರಂದು ಆರೋಪಿ ಬಸಪ್ಪನನ್ನು ಪೊಲೀಸರು ಬಂಧಿಸಿದ್ದರು.

ಈತನಿಗೆ ಈ ಹಿಂದೆ ಜಾಮೀನು ಸಿಕ್ಕಿತ್ತಾದರೂ ಮನೆಯವರು ಜಾಮೀನಿಗೆ ಭದ್ರತೆ ನೀಡಲು ನಿರಾಕರಿಸಿದ್ದರು.‌ ಹಾಗಾಗಿ ನ್ಯಾಯಾಂಗ ಬಂಧನದಲ್ಲೇ ಇದ್ದ. ಪೊಕ್ಸೋ ಕಾಯಿದೆಯಡಿ 70 ವರ್ಷದ ವ್ಯಕ್ತಿ ವಿರುದ್ಧ ಆರೋಪ ಸಾಬೀತಾಗಿರುವುದು ಉಡುಪಿಯಲ್ಲಿ ಇದೇ ಮೊದಲು.

Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

3 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

3 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

4 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

5 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

5 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

5 hours ago