ಕಾಪು: ಮಕ್ಕಳ ಸ್ಕಾಲರ್‌ಶಿಪ್‌ನ ಬಗ್ಗೆ ದಾಖಲಾತಿ ಪಡೆಯಲು ಸೇವಾ ಸಿಂಧು ಕೇಂದ್ರಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಉದ್ಯಾವರದಲ್ಲಿ ನಡೆದಿದೆ.
ಉದ್ಯಾವರ ನಿವಾಸಿ ಇಮಾಮ್ ಸಾಹೇಬ್ ಮುಲ್ಲಾ (40) ಹಲ್ಲೆಗೊಳಗಾದ ವ್ಯಕ್ತಿ. ಅವರು ಜ. 28ರಂದು ಸಂಜೆ ತನ್ನ ಪತ್ನಿ ಶೈನಾಜ್ ಬಾನು ಜತೆ ತಮ್ಮ ಮಕ್ಕಳ ಸ್ಕಾಲರ್‌ಶಿಪ್ ನ ಬಗ್ಗೆ ದಾಖಲಾತಿ ಪಡೆಯಲು ಉದ್ಯಾವರ ಸೇವಾ ಸಿಂಧು ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಪರಿಚಯದ ಜಾವೇದ್ ಮತ್ತು ಸಿದ್ದು ಕೂಡಾ ಅಲ್ಲಿಗೆ ಬಂದಿದ್ದ ವೇಳೆ ತಮಾಷೆಗೆಂದು ನಡೆದ ಜಗಳ ವಿಪರೀತಕ್ಕೆ ತೆರಳಿತ್ತು.
ಇಮಾಮ್ ಅವರು ಅಂಗಡಿಯ ಹೊರಗಡೆ ಬಂದಾಗ ಜಾವೆದ್ ಮತ್ತು ಸಿದ್ದು ಹೊಡೆದಿದ್ದರು. ಬಳಿಕ ಅಲ್ಲಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೋಳಾರಗುಡ್ಡೆ ತಲುಪಿದಾಗ ಜಾವೆದ್, ಸಿದ್ದು ಹಾಗೂ ಜಾವೇದ್‌ನ ಸಂಬಂಧಿಕನೋರ್ವ ಹಲ್ಲೆ ನಡೆಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಉದ್ಯಾವರದ ಸಂಪಿಗೆ ನಗರದಲ್ಲಿರುವ ಜಾವೇದ್ ಮನೆಗೆ ವಿಷಯ ತಿಳಿಸಲು ಹೋದಾಗ ಜಾವೇದ್, ಸಲೀಂ ಹಾಗೂ ಜಾವೇದ್‌ನ ಸಂಬಂಧಿಕರು ಮೂವರು ಮಹಿಳೆಯರು ಮತ್ತೆ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಗಾಯಾಳು ಇಮಾಮ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…
ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ; ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…
ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…
246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…