Featured

ಉಪ್ಪಿನಂಗಡಿ :ಮುಸ್ಲಿಂ ಮನೆಯಲ್ಲಿ ಹಿಂದೂ ಯುವತಿಯನ್ನು ಅಕ್ರಮವಾಗಿ ಕೂಡಿಹಾಕಿದ ಆರೋಪ; ಪೊಲೀಸರಿಂದ ಪರಿಶೀಲನೆ – Vishwanews24

ಉಪ್ಪಿನಂಗಡಿ :ಮುಸ್ಲಿಂ ಮನೆಯಲ್ಲಿ ಹಿಂದೂ ಯುವತಿಯನ್ನು ಅಕ್ರಮವಾಗಿ ಕೂಡಿಹಾಕಿದ ಆರೋಪ; ಪೊಲೀಸರಿಂದ ಪರಿಶೀಲನೆ..

ತಾನು ಸ್ವ ಇಚ್ಚೆಯಿಂದ ನನ್ನ ಗೆಳತಿ ಮನೆಗೆ ಬಂದಿರುವುದಾಗಿ ಯುವತಿ ಹೇಳಿಕೆ..

ಉಪ್ಪಿನಂಗಡಿ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಮುಸ್ಲಿಮ್‌ ಸಮುದಾಯದ ಮನೆಯಲ್ಲಿ ಹಿಂದೂ ಯುವತಿಯನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ಮಾಹಿತಿಯಿಂದಾಗಿ ಮಂಗಳವಾರ ತಡ ರಾತ್ರಿ ಪೊಲೀಸ್‌ ಕಾರ್ಯಾಚರಣೆ ನಡೆಸಿ ಯುವತಿಯನ್ನು ವಶಕ್ಕೆ ಪಡೆದು ಆಕೆಯ ಪೋಷಕರ ಮನೆಗೆ ಕಳುಹಿಸಿಕೊಟ್ಟ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಇದನ್ನೂ ಓದಿ :

ಹಿಂದೂ ಯುವತಿಯೊಬ್ಬಳು ಪಿಲಿಗೂಡಿನ ಸಂಶುದ್ದೀನ್‌ ಎಂಬಾತನ ಮನೆಯಲ್ಲಿ ಅಕ್ರಮ ವಶದಲ್ಲಿದ್ದಾಳೆ ಎಂಬ ಮಾಹಿತಿಯನ್ನು ಸ್ಥಳೀಯ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಆಕೆಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ, ತಾನು ಸ್ವ ಇಚ್ಚೆಯಿಂದ ನನ್ನ ಗೆಳತಿ ಮನೆಗೆ ಬಂದಿರುವುದಾಗಿ ತಿಳಿಸಿದ ಕಾರಣಕ್ಕೆ ಆಕೆಯಿಂದ ಹೇಳಿಕೆ ಪಡೆದು ಆಕೆಯ ಹೆತ್ತವರ ಮನೆಗೆ ಕಳುಹಿಸಿಕೊಡಲಾಗಿತ್ತು. ಯುವತಿ ಮೂಲತಃ ಚಿಕ್ಕಮಗಳೂರು ಭಾಗದವಳು ಎಂದು ತಿಳಿದು ಬಂದಿದೆ.

ಈ ವಿದ್ಯಮಾನದ ಬೆನ್ನಿಗೆಯೇ ಸಂಶುದ್ದೀನ್‌ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ರಕ್ಷಿತ್‌, ಯಶೋಧರ, ಕಾರ್ತಿಕ್‌, ಹರೀಶ್‌ , ಬಾಬು, ದೇವರಾಜ್‌ ಮತ್ತಿತರರು ತನ್ನ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ತನ್ನಲ್ಲಿ ಹಾಗೂ ತನ್ನ ದೊಡ್ಡಮ್ಮನಲ್ಲಿ ನಿಮ್ಮ ಮನೆಯಲ್ಲಿ ಯಾರಾದರೂ ಹಿಂದೂ ಯುವತಿ ಇದ್ದಾರೆಯಾ ಎಂದು ಪ್ರಶ್ನಿಸಿದ್ದು, ತಾನು ತನ್ನ ಪತ್ನಿಯ ಗೆಳತಿಯಾದ ಸುಷ್ಮಾ ಆಲಿಯಾಸ್‌ ಆಯಿಷಾಳು ಮನೆಯಲ್ಲಿ ಇರುವುದನ್ನು ತಿಳಿಸಿದಾಗ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :

Vishwa News 24

Recent Posts

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

11 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

11 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

11 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

12 hours ago

ಬಂಟ್ವಾಳ: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…

13 hours ago

ಉಡುಪಿ : ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ – vishwanews24

 ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…

13 hours ago