ಉಳ್ಳಾಲ : ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ವಾಹನ ತಡೆದಿರುವ ಬಜರಂಗದಳ ಕಾರ್ಯಕರ್ತರು ಐದು ಜಾನುವಾರುಗಳನ್ನು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಕುತ್ತಾರು ಸಮೀಪದ ಭಂಡಾರಬೈಲು ಎಂಬಲ್ಲಿ ಸಂಭವಿಸಿದೆ.
ಕೇರಳ ನೋಂದಣಿಯ ಏಸ್ ವಾಹನವು ಮುಡಿಪು, ಕೊಣಾಜೆ,ಮದಕ ಮಾರ್ಗವಾಗಿ 5 ಜಾನುವಾರುಗಳನ್ನ ಅಕ್ರಮವಾಗಿ ತುಂಬಿಸಿ ಸಾಗುತ್ತಿದ್ದ ವೇಳೆ ಭಂಡಾರ ಬೈಲು ರಸ್ತೆಯ ಕಡಿದಾದ ಎತ್ತರದ ತಿರುವು ಏರಲಾರದೆ ನಿಂತು ಬಿಟ್ಟಿತ್ತು. ಈ ವೇಳೆ ಸ್ಥಳದಲ್ಲಿದ್ದ ಬಜರಂಗದಳದ ಕಾರ್ಯಕರ್ತರು ವಾಹನವನ್ನು ತಳ್ಳಿ ಚಾಲಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ವಾಹನದ ಹಿಂದುಗಡೆ ಮೀನಿನ ಪ್ಲಾಸ್ಟಿಕ್ ಟ್ರೇಗಳನ್ನ ರಾಶಿ ಹಾಕಲಾಗಿದ್ದು ಅದರೊಳಗಡೆ ಸದ್ದು ಕೇಳಿಸಿದಾಗ ಒಳಗಡೆ 5 ಜಾನುವಾರುಗಳನ್ನು ಉಸಿರುಗಟ್ಟಿಸಿ ಕಟ್ಟಿ ಹಾಕಿರುವುದನ್ನು ಸಹಾಯಕ್ಕೆ ಬಂದವರು ಕಂಡಿದ್ದಾರೆ. ತಕ್ಷಣ ವಾಹನದಲ್ಲಿದ್ದ ಚಾಲಕ ಸೇರಿ ಇಬ್ಬರು ಪರಾರಿಯಾಗಿದ್ದು,ಎಸ್ಕಾರ್ಟ್ ನೀಡುತ್ತಿದ್ದ ಇಬ್ಬರು ಬೈಕುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ವಾಹನದಲ್ಲಿದ್ದ ಒಂದು ಕರು ತಪ್ಪಿಸಿದ್ದು,ಮತ್ತೊಂದು ಕರು,ಎರಡು ಹೋರಿ,ಒಂದು ಹಸುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿ ಉಳ್ಳಾಲ ಠಾಣೆಗೆ ಒಪ್ಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…