ಉಳ್ಳಾಲ : ನೂತನ ಮನೆಯ ಗ್ರಹಪ್ರವೇಶದ ದಿನ ಕಳ್ಳನೊಬ್ಬ ವಾಸ್ತು ಹೋಮದ ಹೊಗೆಯ ನಡುವೆ ಕೈಚಳಕ ತೋರಿಸಿದ್ದಾನೆ. ಬಳಿಕ ನೆರೆಮನೆಯಲ್ಲೂ ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳತನ ಮಾಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ.
ಡಿಸೆಂಬರ್ 10ರಂದು ರಾತ್ರಿ ಇಲ್ಲಿನ ನಿವಾಸಿಗಳಾದ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಕಬೈಲು ಎಂಬಲ್ಲಿ ತಾವು ನಿರ್ಮಿಸಿದ ನೂತನ ಮನೆಯಲ್ಲಿ ವಾಸ್ತು ಹೋಮ ನೆರವೇರಿಸಿದ್ದರು. ವಾಸ್ತು ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ ಹೋಮದ ಹೊಗೆಯಲ್ಲಿ ಯಾರಿಗೂ ಗೊತ್ತಾಗದಂತೆ ಒಳ ನುಗ್ಗಿದ್ದ ಬರ್ಮುಡ ಧಾರಿ ಯುವಕನೋರ್ವ ಕೋಣೆಯೊಳಗೆ ನುಗ್ಗಿ ಬ್ಯಾಗಲ್ಲಿದ್ದ 15 ರೂಪಾಯಿ ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಕಳವು ನಡೆಸಿದ್ದಾನೆ. ಕಳ್ಳ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರನಡೆಯುವ ದೃಶ್ಯ ವೃತ್ತಿಪರ ಕ್ಯಾಮೆರ ಮೆನ್ ನ ವೀಡಿಯೋದಲ್ಲಿ ದಾಖಲಾಗಿದೆ.
ಅದೇ ದಿನ ಮಧ್ಯ ರಾತ್ರಿ ಅಲ್ಲೇ ಸಮೀಪದ ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬವರ ಮನೆಗೂ ರಾತ್ರಿ ಕನ್ನ ಹಾಕಿದ್ದ ಕಳ್ಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲನ್ನ ಒಡೆದು ಕೋಣೆಯೊಳಗಿನ ಕಪಾಟಲ್ಲಿದ್ದ 11 ಸಾವಿರ ರೂಪಾಯಿ ನಗದು,32 ಗ್ರಾಂ ಚಿನ್ನ ,8 ಬೆಳ್ಳಿಯ ನಾಣ್ಯ,ಮತ್ತು 3 ರೇಡೋ ವಾಚ್ ಗಳು ಸೇರಿ ಒಟ್ಟು 1 ಲಕ್ಷದ 49 ಸಾವಿರ ರೂಪಾಯಿ ಮೌಲ್ಯದ ನಗ,ನಗದನ್ನ ಕದ್ದೊಯ್ದಿದ್ದಾನೆ. ಬರ್ಮುಡ ಧಾರಿ ಕಳ್ಳನ ಜತೆ ಇನ್ನೋರ್ವನು ಇದ್ದು ಇವರಿಬ್ಬರು ಡಿಸೆಂಬರ್ 10 ರಾತ್ರಿ ಕಳ್ಳತನ ನಡೆದಿದ್ದ ಪ್ರದೇಶ ಅಡ್ಕಬೈಲಿಗೆ ದ್ವಿಚಕ್ರ ವಾಹನದಲ್ಲಿ ಬರುವ ದೃಶ್ಯ ಸಿ.ಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ವೀಡಿಯೋ ಫೂಟೇಜ್ ಆಧಾರದಲ್ಲಿ ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…