Featured

ಉಳ್ಳಾಲ : ಗ್ರಹಪ್ರವೇಶದ ದಿನ ವಾಸ್ತು ಹೋಮದ ಹೊಗೆಯ ನಡುವೆ  ಕಳ್ಳನ ಕೈಚಳಕ ; ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳತನ – Vishwanews24

ಉಳ್ಳಾಲ : ಗ್ರಹಪ್ರವೇಶದ ದಿನ ವಾಸ್ತು ಹೋಮದ ಹೊಗೆಯ ನಡುವೆ  ಕಳ್ಳನ ಕೈಚಳಕ ; ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳತನ

ಉಳ್ಳಾಲ :  ನೂತನ ಮನೆಯ ಗ್ರಹಪ್ರವೇಶದ ದಿನ ಕಳ್ಳನೊಬ್ಬ ವಾಸ್ತು ಹೋಮದ ಹೊಗೆಯ ನಡುವೆ ಕೈಚಳಕ ತೋರಿಸಿದ್ದಾನೆ. ಬಳಿಕ ನೆರೆಮನೆಯಲ್ಲೂ ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳತನ ಮಾಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ.

ಡಿಸೆಂಬರ್ 10ರಂದು ರಾತ್ರಿ ಇಲ್ಲಿನ ನಿವಾಸಿಗಳಾದ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಕಬೈಲು ಎಂಬಲ್ಲಿ ತಾವು ನಿರ್ಮಿಸಿದ ನೂತನ ಮನೆಯಲ್ಲಿ ವಾಸ್ತು ಹೋಮ ನೆರವೇರಿಸಿದ್ದರು. ವಾಸ್ತು ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ ಹೋಮದ ಹೊಗೆಯಲ್ಲಿ ಯಾರಿಗೂ ಗೊತ್ತಾಗದಂತೆ ಒಳ ನುಗ್ಗಿದ್ದ ಬರ್ಮುಡ ಧಾರಿ ಯುವಕನೋರ್ವ ಕೋಣೆಯೊಳಗೆ ನುಗ್ಗಿ ಬ್ಯಾಗಲ್ಲಿದ್ದ 15 ರೂಪಾಯಿ ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಕಳವು ನಡೆಸಿದ್ದಾನೆ. ಕಳ್ಳ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರನಡೆಯುವ ದೃಶ್ಯ ವೃತ್ತಿಪರ ಕ್ಯಾಮೆರ ಮೆನ್ ನ ವೀಡಿಯೋದಲ್ಲಿ ದಾಖಲಾಗಿದೆ.

 

ಅದೇ ದಿನ ಮಧ್ಯ ರಾತ್ರಿ ಅಲ್ಲೇ ಸಮೀಪದ ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬವರ ಮನೆಗೂ ರಾತ್ರಿ ಕನ್ನ ಹಾಕಿದ್ದ ಕಳ್ಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲನ್ನ ಒಡೆದು ಕೋಣೆಯೊಳಗಿನ ಕಪಾಟಲ್ಲಿದ್ದ 11 ಸಾವಿರ ರೂಪಾಯಿ ನಗದು,32 ಗ್ರಾಂ ಚಿನ್ನ ,8 ಬೆಳ್ಳಿಯ ನಾಣ್ಯ,ಮತ್ತು 3 ರೇಡೋ ವಾಚ್ ಗಳು ಸೇರಿ ಒಟ್ಟು 1 ಲಕ್ಷದ 49 ಸಾವಿರ ರೂಪಾಯಿ ಮೌಲ್ಯದ ನಗ,ನಗದನ್ನ ಕದ್ದೊಯ್ದಿದ್ದಾನೆ. ಬರ್ಮುಡ ಧಾರಿ ಕಳ್ಳನ ಜತೆ ಇನ್ನೋರ್ವನು ಇದ್ದು ಇವರಿಬ್ಬರು ಡಿಸೆಂಬರ್ 10 ರಾತ್ರಿ ಕಳ್ಳತನ ನಡೆದಿದ್ದ ಪ್ರದೇಶ ಅಡ್ಕಬೈಲಿಗೆ ದ್ವಿಚಕ್ರ ವಾಹನದಲ್ಲಿ ಬರುವ ದೃಶ್ಯ ಸಿ.ಸಿಟಿವಿಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ವೀಡಿಯೋ ಫೂಟೇಜ್ ಆಧಾರದಲ್ಲಿ ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago