ಉಳ್ಳಾಲ : ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ಉಳ್ಳಾಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಅಬ್ದುಲ್ ರವೂಫ್ (30), ಶರೀಫ್ ಯಾನೆ ಅಮಿನ್ (34), ನಿಯಾಝ್ ( 23) ಎಂದು ಗುರುತಿಸಲಾಗಿದೆ.
ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ನಿಷೇದಿತ ಮಾಧಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 42 ಗ್ರಾಂ ತೂಕದ ಎಂಡಿಎಂಎ, ಟೊಯೋಟಾ ಕಾರು, ಮೂರು ಮೊಬೈಲ್, 2500 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪೈಕಿ ನಿಯಾಝ್ ಎಂಡಿಎಂಎ ಖರೀದಿ ಮಾಡಲು ಬಂದಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ದಾಳಿ ಸಂದರ್ಭದಲ್ಲಿ ಆರೋಪಿ ಸಲಾಮ್ ಎಂಬಾತ ಪರಾರಿ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…