ಉಳ್ಳಾಲ: ಬಯಸಿದ್ದು ಎಲ್ಲರಿಗೂ ಸಿಗೋದು ಕಡಿಮೆ, ಆದರೆ ಹಲವು ವರ್ಷಗಳ ಪ್ರೀತಿ ಹರಿಪ್ರಿಯಾಳನ್ನು ಭಗವಂತ ಕೊಟ್ಟಿದ್ದಾನೆ. ಅದಕ್ಕೆ ಚಿರ ಋಣಿ . ನವದಂಪತಿಯ ಮೊದಲ ದಸರಾ ಹಬ್ಬವಾಗಿದೆ. ಕೃತಜ್ಞತಾಪೂರ್ವವಾಗಿ ಕೊರಗಜ್ಜನ ಕ್ಷೇತ್ರಕ್ಕೆ ದಂಪತಿ ಸಮೇತ ಭೇಟಿ ನೀಡಿದ್ದೇವೆ ಎಂದು ನಟ ಹಾಗೂ ಹಿನ್ನೆಲೆ ಗಾಯಕ ವಶಿಷ್ಠ ನಿರಂಜನ್ ಸಿಂಹ ಹೇಳಿದರು.
ವಶಿಷ್ಠ ಹಾಗೂ ನಟಿ ಹರಿಪ್ರಿಯ ದಂಪತಿ ಕಲ್ಲಾಪು ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗತನಿಯನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದ.ಕ ಜಿಲ್ಲೆಗೆ ಬಂದಾಗ ಕೊರಗಜ್ಜನ ದರ್ಶನ ಮಾಡದೇ ಇದ್ದಲ್ಲಿ ವಾಪಸ್ಸು ತೆರಳುವಾಗ ಹೊರೆ ಹೊತ್ತಂಥ ಅನುಭವ ಆಗುತ್ತೆ. ಮುಂದೆ ಲವ್ಲೀ ಚಿತ್ರ ಬಿಡುಗಡೆಯಾಗಲಿದ್ದು, ಬಹುತೇಕ ಶೂಟಿಂಗ್ ದ.ಕ ಜಿಲ್ಲೆಯಲ್ಲೇ ಆಗಿದೆ. ಶೂಟಿಂಗ್ ನಡೆದ ದೇವಸ್ಥಾನ ಕ್ಕೆ ಭೇಟಿ ನೀಡಲು ಬಯಸಿದ್ದೆ, ಸಾಧ್ಯವಾಗಿರಲಿಲ್ಲ. ಈಗ ಶೂಟಿಂಗ್ ನಿಂದ ಸಾಧ್ಯವಾಯಿತು ಎಂದರು .
ನಟಿ ಹರಿಪ್ರಿಯಾ ಮಾತನಾಡಿ, ತನ್ನ ಮೊದಲ ನಟನೆ ಕರಾವಳಿಯಿಂದಲೇ ಆರಂಭವಾಯಿತು. ಬದಿ ಅನ್ನುವ ತುಳು ಚಿತ್ರದಲ್ಲಿ ಪ್ರಥಮವಾಗಿ ನಟಿಸಿದ್ದೆನು. ದಸರಾ ವಾರ ವಿಶೇಷಣವಾಗಿತ್ತು. ವಶಿಷ್ಠರ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಿದ್ದು, ನಾನೇ ಅವರಿಗೆ ಹುಟ್ಟುಹಬ್ಬದ ಗಿಫ್ಟ್ ಆಗಿರುವೆ. ವಾರದುದ್ದಕ್ಕೂ ಕರಾವಳಿಯ ಎಲ್ಲಾ ದೇವಸ್ಥಾನಗಳ ಸಂದರ್ಶನ ನಡೆಸಿ ಕೃತಾರ್ಥರಾದೆವು ಎಂದರು.
ಈ ಸಂದರ್ಭದಲ್ಲಿ ಕದ್ರಿ ಕ್ರಿಕೆಟರ್ಸ್ ನ ಜಗದೀಶ್ ಕದ್ರಿ, ಕುಂಪಲ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಅಂಚನ್, ಸಾಯಿ ಪರಿವಾರ್ ಟ್ರಸ್ಟ್ ನ ಪ್ರವೀಣ್ ಎಸ್ ಕುಂಪಲ, ಬುರ್ದುಗೋಳಿ ಸಮಿತಿಯ ಕಮಲಾಕ್ಷ ವಿ ಕುಲಾಲ್, ನವೀನ್ ಕಾಯಂಗಳ, ಪುರುಷೋತ್ತಮ ಮೇಲಾಂಟ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು, ರವಿ, ಜ್ಞಾನೇಶ್ ಸಂಜಯ್, ಭವಿತ್, ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನ ಕೌಶಿಕ್ ಸೇವಂತಿಗುಡ್ಡೆ, ಶವಿತ್ ಉಚ್ಚಿಲ್, ಪ್ರಜ್ವಲ್, ಭವಿಶ್ ಕುತ್ತಾರ್, ಮುಂತಾದವರಿದ್ದರು.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…