Featured

ಉಳ್ಳಾಲ : ಬೆಡ್ ಮೇಲೆ ಇಸ್ತ್ರೀ ಪೆಟ್ಟಿಗೆ ಇಟ್ಟು ಹೋದ ವಿದ್ಯಾರ್ಥಿನಿಯರು : ಅಪಾರ್ಟ್ ಮೆಂಟ್ ಮ್ಯಾನೆಜರ್ ಸಮಯ ಪ್ರಜ್ಞೆಯಿಂದ ತಪ್ಪಿದ ಬೆಂಕಿ ಅವಘಡ – Vishwanews24

ಉಳ್ಳಾಲ : ಬೆಡ್ ಮೇಲೆ ಇಸ್ತ್ರೀ ಪೆಟ್ಟಿಗೆ  ಇಟ್ಟು ಹೋದ ವಿದ್ಯಾರ್ಥಿನಿಯರು :: ಅಪಾರ್ಟ್ ಮೆಂಟ್ ಮ್ಯಾನೆಜರ್ ಸಮಯ ಪ್ರಜ್ಞೆಯಿಂದ ತಪ್ಪಿದ ಬೆಂಕಿ ಅವಘಡ

ಉಳ್ಳಾಲ : ಪ್ಲ್ಯಾಟ್ ಒಂದರಲ್ಲಿ ಬಟ್ಟೆಗಳಿಗೆ ಇಸ್ತ್ರೀ ಹಾಕಿದ ಬಳಿಕ ಇಸ್ತ್ರೀ ಪೆಟ್ಟಿಗೆಯನ್ನು ಬೆಡ್ ಮೇಲೆ ಆನ್ ಮಾಡಿ ವಿದ್ಯಾರ್ಥಿನಿಯರು ಇಟ್ಟು ಹೋದ ಪರಿಣಾಮ ಬೆಂಕಿ ಅವಘಡ ಸಂಭವಿಸಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

ದೇರಳಕಟ್ಟೆಯಲ್ಲಿರುವ 13 ಮಹಡಿಗಳ ಪ್ಲ್ಯಾಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ಫ್ಲ್ಯಾಟ್‌ವೊಂದರ 202 ನಂಬರಿನ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿಸೆಂಬರ್ 2೦ ರ ಬೆಳಿಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರವಿದೆಯೆಂದು ಬೇಗನೇ ತೆರಳಿದ್ದರು. ಆದರೆ ಆತುರದಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕಿರುವ ವಿದ್ಯಾರ್ಥಿನಿಯರು, ಸ್ವಿಚ್ ಆಫ್ ಮಾಡಿದರೂ, ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಬೆಡ್ ನಲ್ಲಿರಿಸಿ ಕಾಲೇಜಿಗೆ ತೆರಳಿದ್ದರು. ಆದರೆ ಬೆಳಗ್ಗಿನಿಂದ ಹೊಗೆಯ ವಾಸನೆ ಫ್ಲ್ಯಾಟ್ ತುಂಬಾ ಬರುತ್ತಿದ್ದು, ಮ್ಯಾನೇಜರ್ ಆಗಿರುವ ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಹುಡುಕಲು ಆರಂಭಿಸಿದ್ದರು.

ಒಂದು ಗಂಟೆಯ ನಂತರ ರೂಮಿನಲ್ಲಿ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ರೂಮಿಗೆ ಬೀಗ ಹಾಕಿರುವುದರಿಂದ ತೆರೆಯಲು ಸಾಧ್ಯವಾಗದೆ, ವಿದ್ಯಾರ್ಥಿನಿಯರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ. ರೂಮಿನಿಂದ ಹೊಗೆ ಬರುತ್ತಿರುವುದನ್ನು ತಿಳಿಸಿ ತಕ್ಷಣಕ್ಕೆ ವಾಪಸ್ಸು ಬರುವಂತೆ ಸೂಚಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ತಕ್ಷಣ ಫ್ಲಾಟ್ ನತ್ತ ಆಗಮಿಸಿದ್ದು, ಬೀಗ ತೆರೆಯುವ ಸಂದರ್ಭ ರೂಮಿನೊಳಕ್ಕೆ ದಟ್ಟವಾದ ಹೊಗೆ ಆವರಿಸಿತ್ತು. ಧೈರ್ಯ ಮಾಡಿದ ಮ್ಯಾನೇಜರ್ ಶಫೀಕ್ ನೇರವಾಗಿ ಒಳನುಗ್ಗಿ ಕಿಟಕಿಯನ್ನು ತೆರೆದಿದ್ದಾರೆ. ತಕ್ಷಣ ಬೆಂಕಿ ಆವರಿಸಿದ ಬೆಡ್ ಅನ್ನು ಹೊರಗೆಸೆದು ಅವಘಢವನ್ನು ತಪ್ಪಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago