Featured

ಉಳ್ಳಾಲ : ವಿಷಕಾರಿ ಸೊಪ್ಪು ತಿಂದು ಒಂದು ದನ ಸಾವು , ನಾಲ್ಕು ಗಂಭೀರ- Vishwanews24

ಉಳ್ಳಾಲ : ವಿಷಕಾರಿ ಸೊಪ್ಪು ತಿಂದು ನಾಲ್ಕು ಜಾನುವಾರು ಗಂಭೀರ, ಒಂದು ಸಾವು..

ಉಳ್ಳಾಲ : ಸೊಪ್ಪನ್ನು ತಿಂದು ಒಂದು ದನ ಸಾವನಪ್ಪಿ ಎರಡು ದನ ಹಾಗೂ ಮೂರು ಕರುಗಳು ಗಂಭೀರ ಸ್ಥಿತಿದೆ ತಲುಪಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ.

ಕೃಷಿಕ ಸಂಜೀವ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಮಾರ್ಚ್ 8 ರ ಮಧ್ಯಾಹ್ನ ಮನೆಯವರು ಕರಿ ಬಸ್ರಿ ತಳಿಯ ಸೊಪ್ಪು ಜಾನುವಾರುಗಳು ಮಲಗುವ ಬೆಡ್ಡಿಂಗ್ ಗೆಂದು ಹಾಕಲಾಗಿದೆ. ಆದರೆ ಹಸುಗಳೆಲ್ಲಾ ಅದನ್ನೇ ತಿಂದ ನಂತರ ಅಸ್ವಸ್ಥತೆಗೆ ಒಳಗಾಗಿದೆ. ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದ ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು. ಕೂಡಲೇ ಪಶುವೈದ್ಯಾಧಿಕಾರಿಗಳು ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ಇಂದು ಮುಂಜಾನೆ ವೇಳೆಗೆ ತಿಂದ ಎಲೆಗಳ ವಿಷಾಹಾರ ಹಸುವಿನ ಇಡಿ ದೇಹಕ್ಕೆ ಪಸರಿ ನಸುಕಿನ ಜಾವ ಒಂದು ಹಸು ಸಾವನ್ನಪ್ಪಿತ್ತು. ಇನ್ನುಳಿದ ಹಸುಗಳು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮನೆಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಚಂದ್ರಹಾಸ್ ನೇತೃತ್ವದಲ್ಲಿ ಚಿಕಿತ್ಸೆಯನ್ನು ಆರಂಭಿಸಲಾಯಿತು. ತಲಪಾಡಿ ಪಶು ವೈದ್ಯಾಧಿಕಾರಿ ಡಾ. ರಚನಾ ಅವರೂ ಸ್ಥಳಕ್ಕಾಗಮಿಸಿ ಗಂಭೀರ ಸ್ಥಿತಿಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ. ಜಾನುವಾರು ಮಲಗುವ ಹಟ್ಟಿಗೆ ಗೋಳಿ ಸೊಪ್ಪು (ಕರಿ ಬಸ್ರಿ) ಬೆಡಿಂಗ್ ಹಾಕಲಾಗಿದೆ. ಜಾನುವಾರುಗಳು ಆಕಸ್ಮಿಕವಾಗಿ ಅದೇ ಸೊಪ್ಪುಗಳನ್ನು ತಿಂದಿವೆ. ಅಧಿಕವಾಗಿ ತಿಂದಿರುವುದರಿಂದ ಪಾಯಿಸನಿಂಗ್ ಆಗಿದೆ. ರಕ್ತದ ಜೊತೆಗೆ ಸೇರಿಕೊಂಡು ಎಲೆಯಲ್ಲಿರುವ ಸೊನೆ ( ಸಿಸರ್ಸ್) ದೇಹದೊಳಕ್ಕೆ ಸ್ಟಿಕನಿಂಗ್ ಉಂಟಾಗಿದೆ. ಇದರಿಂದ ಒಂದು ಜಾನುವಾರು ಗಂಭೀರವಾಗಿ ಸಾವನ್ನಪ್ಪಿ, ಉಳಿದವುಗಳಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

Vishwa News 24

Recent Posts

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ – vishwanews24

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…

28 minutes ago

ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ  ಅಸ್ತವ್ಯಸ್ತ: ಆರೆಂಜ್‌ ಅಲರ್ಟ್‌ ಘೋಷಣೆ – vishwanews24

ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ  ಅಸ್ತವ್ಯಸ್ತ: ಆರೆಂಜ್‌ ಅಲರ್ಟ್‌ ಘೋಷಣೆ ಮುಂಬಯಿ: ಮುಂಬಯಿಯಲ್ಲಿ ಮುಂಗಾರು ಮಳೆಯ ಅಬ್ಬರ…

50 minutes ago

ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ – vishwanews24

ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ ಉಡುಪಿ: ಕಥೊಲಿಕ್ ಸಭಾ ಉಡುಪಿ ಹಾಗೂ…

1 hour ago

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ – vishwanews24

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ ಉಡುಪಿ:…

1 hour ago

ಬೆಳ್ತಂಗಡಿ:  ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ – vishwanews24

ಬೆಳ್ತಂಗಡಿ:  ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಂಗಳೂರು: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮನೆ…

1 hour ago

ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ – vishwanews24

ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ…

2 hours ago