ಉಳ್ಳಾಲ : ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ತಾಲೂಕಿನ ಪಂಡಿತ್ ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಯನ್ವಿ ಎಂಬ ಹೆಸರಿನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆಯ ಕಿಂಗ್ ಪಿನ್ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತಳನ್ನು ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ,ವಿಟ್ಲಕೋಡಿ ನಿವಾಸಿ ರುಕಿಯಾ (50) ಎಂದು ಗುರುತಿಸಲಾಗಿದ್ದು. ಈಕೆ ವಿಜೇತ ನಗರದ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನಿಟ್ಟು ವೇಶ್ಯಾ ವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್ ನೇತೃತ್ವದಲ್ಲಿ ನಿನ್ನೆ ರಾತ್ರಿ ಅಡ್ಡೆಗೆ ದಾಳಿ ನಡೆಸಿದ್ದಾರೆ.ಈ ವೇಳೆ ಮನೆಯಲ್ಲಿದ್ದ ಮೂವರು ಗಿರಾಕಿಗಳನ್ನ ವಶಕ್ಕೆ ಪಡೆದ ಪೊಲೀಸರು ನಾಲ್ವರು ನೊಂದ ಯುವತಿಯರನ್ನ ರಕ್ಷಿಸಿದ್ದಾರೆ.ಪ್ರಮುಖ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 3 ದ್ವಿಚಕ್ರ ವಾಹನಗಳು,9 ಮೊಬೈಲ್ ಫೋನ್ ಗಳು, 5,000 ನಗದು ಸೇರಿದಂತೆ ಒಟ್ಟು 1,76,580 ರೂಪಾಯಿ ಮೌಲ್ಯದ ಸೊತ್ತನ್ನ ವಶ ಪಡಿಸಲಾಗಿದೆ.
ಅರೆಂಜ್ ಅಲರ್ಟ್ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ ಬೆಂಗಳೂರು: ರಾಜ್ಯ ರೈತ…
ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…
ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…