ತುಂಬಾ ಸುಲಭವಾಗಿ ನಿಮ್ಮ ಮನೆಯಲ್ಲಿ ಸಿಂಪಲ್ಲಾಗಿ ಸ್ಪೆಷಲ್ ಎಗ್ ರೋಲ್ ಮಾಡುವ ವಿಧಾನ ಇಲ್ಲಿದೆ. ಸಾಮಾನ್ಯವಾಗಿ ಎಗ್ ಆಹಾರಗಳನ್ನು ಎಲ್ಲರು ಸೇವಿಸುತ್ತಾರೆ ಮತ್ತು ಇದು ಒಳ್ಳೆಯ ಪ್ರೊಟೀನ್ ಇರುವ ಆಹಾರ ಕೂಡ ಆಗಿದೆ ಹಾಗಾಗಿ ನೀವು ಸಹ ಸಿಂಪಲ್ಲಾಗಿ ಸ್ಪೆಷಲ್ ಎಗ್ ರೋಲ್ ಮಾಡಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 4 ಈರುಳ್ಳಿ -1 ಹಸಿಮೆಣಸಿನಕಾಯಿ -4-5 ,ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸ್ವಲ್ಪ, ಮೈದಾ 2 ಚಮಚ, ಕಾರ್ನ್ ಫ್ಲೋರ್ 2 ಚಮಚ, ಎಣ್ಣೆ ಕರಿಯಲು
ನೀರು ಬ್ರೆಡ್ ಕ್ರಮ್ಸ್ – ಒಂದು ಬಟ್ಟಲು.
ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಬೌಲ್‍ಗೆ ಮೊಟ್ಟೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೇರಿಸಿ ಬೀಟ್ ಮಾಡಿ. ಒಂದು ಕೇಕ್ ಪ್ಯಾನ್‍ಗೆ ಎಣ್ಣೆ ಸವರಿ ಬೀಟ್ ಮಾಡಿದ ಮೊಟ್ಟೆ ಹಾಕಿ ಬೇಯಿಸಿ.
ಕೇಕ್ ಪ್ಯಾನ್ ಇಲ್ಲದಿದ್ದಲ್ಲಿ ಒಂದು ಸ್ಟೀಲ್ ಕುಕ್ಕರ್ ಪ್ಯಾನ್‍ಗೆ ಎಣ್ಣೆ ಸವರಿ ಬೇಯಿಸಬಹುದು. ಈಗ ಬೇಯಿಸಿದ ಮೊಟ್ಟೆಯನ್ನು ಪ್ಯಾನ್‍ನಿಂದ ಬೇರ್ಪಡಿಸಿ, ಸಣ್ಣಗೆ ಕಟ್ ಮಾಡಿಕೊಳ್ಳಿ. ಈಗ ಒಂದು ಬೌಲ್‍ಗೆ ಮೈದಾ, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಸೇರಿಸಿ ತೆಳ್ಳಗೆ ಕಲಸಿಕೊಳ್ಳಿ.
ಒಂದು ತಟ್ಟೆಗೆ ಬ್ರೆಡ್ ಕ್ರಮ್ಸ್ ಹಾಕಿ ಈಗ ಸ್ಲೈಸ್ ಕಟ್ ಮಾಡಿದ ಮೊಟ್ಟೆಯನ್ನು ಮೈದಾ ಬ್ಯಾಟರ್ ನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ನಲ್ಲಿ ಹೊರಳಿಸಿ. ಈಗ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರೋವರೆಗೆ ಫ್ರೈ ಮಾಡಿದರೆ ಸವಿಯಲು ಸ್ಪೆಷಲ್ ಎಗ್ ರೋಲ್ ರೆಡಿ.
‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…
ವೋಟರ್ ಲಿಸ್ಟ್ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ…
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…
ಉಡುಪಿ: ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…
ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…