Featured

ಎಟಿಎಂನಿಂದ ಒಂದು ಬಾರಿ ಹಣ ತೆಗೆದರೆ ಪುನಃ 6 ರಿಂದ 12 ಗಂಟೆವರೆಗೆ ಅದೇ ಕಾರ್ಡ್ ನಿಂದ ಡ್ರಾ ಮಾಡಲು ಸಾಧ್ಯವಾಗಲ್ಲ…ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ !! ಓದಿ ಈ ವರದಿ -Vishwanews24

ಹೊಸದಿಲ್ಲಿ: ಎಟಿಎಂ ವಂಚನೆ ತಡೆಯಲು ದೆಹಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಹಲವು ಮಾರ್ಗೋಪಾಯಗಳನ್ನು ಸಲಹೆ ಮಾಡಿದ್ದು, ಒಂದು ಬಾರಿ ಎಟಿಎಂನಿಂದ ಹಣ ಪಡೆದು ಮತ್ತೊಂದು ಬಾರಿ ಹಣ ಪಡೆಯಲು ಕನಿಷ್ಠ ಆರರಿಂದ ಹನ್ನೆರಡು ಗಂಟೆ ಅಂತರ ನಿಗದಿಪಡಿಸುವುದು ಇವುಗಳಲ್ಲಿ ಪ್ರಮುಖ.

“ಹಲವು ವಂಚನೆಗಳು ರಾತ್ರಿ ಅಂದರೆ ಮಧ್ಯರಾತ್ರಿಯಿಂದ ಮುಂಜಾನೆವರೆಗೆ ನಡೆಯುತ್ತವೆ. ನಿರ್ದಿಷ್ಟ ಅವಧಿಯಲ್ಲಿ ವಹಿವಾಟು ಸ್ಥಗಿತಗೊಳಿಸುವುದು ವಂಚನೆ ತಡೆಯಲು ನೆರವಾಗಬಹುದು” ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಎಂಡಿ ಹಾಗೂ ಸಿಇಒ, ಎಸ್‌ಎಲ್‌ಬಿಸಿ ಸಂಯೋಜಕ ಮುಖೇಶ್ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಹದಿನೆಂಟು ಮಂದಿ ಉನ್ನತ ಬ್ಯಾಂಕ್ ಅಧಿಕಾರಿಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಪ್ರಸ್ತಾವನೆ ಸ್ವೀಕರಿಸಿದಲ್ಲಿ, ನಿರ್ದಿಷ್ಟ ಅವಧಿಯಲ್ಲಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ.ಈ ಬಗ್ಗೆ ಕೇವಲ ಚರ್ಚೆಗಳು ನಡೆದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ.

2018-19ರ ಅವಧಿಯಲ್ಲಿ ದೆಹಲಿಯಲ್ಲಿ 179 ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ (233) ಹೊರತುಪಡಿಸಿದರೆ ಇದು ದೇಶದಲ್ಲೇ ಅತ್ಯಧಿಕ. ಇತ್ತೀಚಿನ ತಿಂಗಳುಗಳಲ್ಲಿ ಕಾರ್ಡ್ ಕ್ಲೋನಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದೊಡ್ಡಸಂಖ್ಯೆಯಲ್ಲಿ ವಿದೇಶಿಯರೂ ಈ ದಂಧೆಯ ಹಿಂದಿದ್ದಾರೆ. 2018-19ರಲ್ಲಿ ದೇಶಾದ್ಯಂತ 980 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಹಿಂದಿನ ವರ್ಷ (911)ಕ್ಕೆ ಹೋಲಿಸಿದರೆ ಅಧಿಕ.

ಬ್ಯಾಂಕ್ ಅಧಿಕಾರಿಗಳು ಇತರ ಹಲವು ಮಾರ್ಗೋಪಾಯಗಳನ್ನು ಶಿಫಾರಸ್ಸು ಮಾಡಿದ್ದು, ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ಸಂಪರ್ಕಿಸಿ ಹಣ ಪಡೆಯಲು ಅವಕಾಶ ನೀಡುವುದು ಇದರಲ್ಲಿ ಸೇರಿದೆ. ಇದರಿಂದಾಗಿ ಅನಧಿಕೃತ ಹಣ ಪಡೆಯುವ ಪ್ರಯತ್ನ ಮಾಡಿದರೆ ಖಾತೆದಾರರಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್‌ಲೈನ್ ವಹಿವಾಟು ನಡೆಸುವ ವ್ಯವಸ್ಥೆಯಂತೆ ಇದು ಇರುತ್ತದೆ ಎಂದು ಜೈನ್ ವಿವರಿಸಿದ್ದಾರೆ. ದ್ವಿಮುಖ ಸಂವಹನಕ್ಕಾಗಿ ಎಟಿಎಂಗೆ ಸಂಬಂಧಿಸಿ ಕೇಂದ್ರೀಯ ಕಣ್ಗಾವಲು ವ್ಯವಸ್ಥೆ ಬಗ್ಗೆಯೂ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಎಟಿಎಂನಿಂದ ಹೆಚ್ಚಿನ ಹಣ ಡ್ರಾ ಮಾಡುವಾಗ ಗ್ರಾಹಕರ ಮೊಬೈಲ್ ಗೆ ಸಂದೇಶ ಕಳುಹಿಸಿ, ಓಟಿಪಿ ನಂಬರ್ ಪಡೆಯುವ ವ್ಯವಸ್ಥೆ ರೂಪಿಸಲು ಸಹ ಚಿಂತಿಸಲಾಗಿದೆ. ಈ ರೀತಿಯ ವ್ಯವಸ್ಥೆಯಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ದುರ್ಬಳಕೆ ತಡೆಯಲು ಸಾಧ್ಯವಾಗಲಿದೆ. ಬೇರೆಯವರು ನಿಮ್ಮ ಕಾರ್ಡ್ ನಿಂದ ಹಣ ಡ್ರಾ ಮಾಡುತ್ತಿದ್ದರೆ, ಮೆಸೇಜ್ ಮೂಲಕ ಎಚ್ಚೆತ್ತುಕೊಳ್ಳಬಹುದು ಎಂದು ಮುಕೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

4 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

5 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

7 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

7 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

8 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

8 hours ago