Featured

ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವೇ ರಾಜಕೀಯ ಪ್ರವೇಶ : ರಾಬರ್ಟ್‌ ವಾದ್ರಾ – Vishwanews24

ನವದೆಹಲಿ:ನನ್ನ ವಿರುದ್ಧದ ಹಣ ಅಕ್ರಮಗಳ ಕೇಸುಗಳಲ್ಲಿ ಪರಿಶುದ್ಧನಾಗಿ ಮೂಡಿ ಬಂದ ಬಳಿಕವೇ ನಾನು ಸಕ್ರಿಯ ರಾಜಕಾರಣ ಪ್ರವೇಶಿಸುವೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪತಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ, ರಾಬರ್ಟ್‌ ವಾದ್ರಾ ಹೇಳಿದ್ದಾರೆ.

“ನಾನು ಏನನ್ನೂ ಮುಚ್ಚಿಡಲು ಬಯಸುವುದಿಲ್ಲ; ನನ್ನ ಎಲ್ಲ ಕೆಲಸ ಕಾರ್ಯಗಳು ಕಾನೂನಿನ ಚೌಕಟ್ಟಿನೊಳಗೇ ಇವೆ; ನಾನು ಕಾನೂನಿನ ಪ್ರಕಾರ ನಡೆದುಕೊಳ್ಳುವವನು ಮತ್ತು ಏನನ್ನೂ ಅಡಗಿಸಿಡದವನು; ನನ್ನ ವಿರುದ್ಧದ ಸುಳ್ಳು ಕೇಸುಗಳಲ್ಲಿ ನಾನು ಪರಿಶುದ್ಧನಾಗಿ ಮೂಡಿ ಬರುವ ತನಕ ನಾನು ರಾಜಕಾರಣ ಪ್ರವೇಶಿಸುವುದಿಲ್ಲ; ಇದು ನನ್ನ ಆಶ್ವಾಸನೆ’ ಎಂದು ವಾದ್ರಾ ಹೇಳಿದರು.

ಇನ್ನು ಕಳೆದ ಡಿಸೆಂಬರ್ 7 ರಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಅವರ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿತ್ತು. ತನಿಖೆ ನಂತರ ಇಡಿಯು ವಾದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ರಾಬರ್ಟ್‌ ವಾದ್ರಾ ಲಂಡನ್‌ನಲ್ಲಿ ಮಿಲಿಯನ್ ಪೌಂಡ್ ಮೌಲ್ಯದ ಎಂಟು ಆಸ್ತಿಗಳ ಒಡೆತನ ಹೊಂದಿದ್ದಾರೆ ಎಂದು ಇಡಿ ಹೇಳಿದೆ. ಇದಕ್ಕೆ ಪ್ರತ್ಯುತ್ತರವಾಗಿ ವಾದ್ರಾ ತಮ್ಮ ಪತ್ನಿ ಮತ್ತು ತಮ್ಮ ಬಗ್ಗೆ, “ಪ್ರತಿಕಾರದ ಹಾಗೂ ಕ್ರೂರ ರಾಜಕೀಯ ವಾತಾವರಣವಿದೆ. ಆದರೆ ನನಗೆ ಗೊತ್ತು, ಜನರ ಸೇವೆ ಮಾಡಬೇಕಾಗಿರುವುದು ಆಕೆಯ ಕರ್ತ್ಯವ್ಯ, ಈಗ ಆಕೆಯನ್ನು ನಾವು ಜನರ ಕೈಗೆ ನೀಡುತ್ತಿದ್ದೇವೆ. ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿಡಿ” ಎಂದು ಪತ್ನಿ ಪ್ರಿಯಾಂಕ ಗಾಂಧಿಯವರ ಕುರಿತು ಭಾವನಾತ್ಮಕ ಪತ್ರ ಬರದಿದ್ದ ರಾಬರ್ಟ್ ವಾದ್ರಾ, ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯ ಪ್ರವೇಶಿಸುತ್ತೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರಕ್ಕೆ ನೇರ ನುಡಿಯಲ್ಲಿ ಪ್ರಶ್ನಿಸಿದ ಇವರು, ನಾನು ದೇಶದಲ್ಲೇ ಇದ್ದೇನೆ. ಈ ದೇಶದಲ್ಲಿ ಅದೆಷ್ಟೋ ವಾಣಿಜ್ಯೋದ್ಯಮಿಗಳು ಲೂಟಿ ಮಾಡಿ ಪಲಾಯನಗೈದಿದ್ದಾರೆ. ಅವರನ್ನು ದೇಶಕ್ಕೆ ವಾಪಸ್ ಕರೆತರುವ ಕೆಲಸ ಎಲ್ಲಿಯ ತನಕ ಬಂತು ಎಂದು ಕೇಳಿದ್ದಾರೆ.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

23 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

2 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago