ಪಡುಬಿದ್ರಿ: ಎಲ್ಲೂರು ಗ್ರಾಮದ ಕೊಳಚೂರು ಬರ್ಪಣಿ ದಿ. ಪದ್ಮನಾಭಯ್ಯ ಅವರ ಮಕ್ಕಳು ಹಾಗೂ ಕುಟುಂಬಿಕರು ಶ್ರೀ ಪಲಿಮಾರು ಮಠಕ್ಕೆ ದಾನವಾಗಿ ನೀಡಿದ ಸುಮಾರು 2.5 ಎಕರೆ ಜಮೀನಿನಲ್ಲಿ ಗೋವುಗಳ ರಕ್ಷಣೆ ನೆಲೆಯಲ್ಲಿ ಗೋಶಾಲೆ ಸ್ಥಾಪಿಸುವುದಾಗಿ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಕೊಳಚೂರು ಬರ್ಪಣಿ ಮನೆಯಲ್ಲಿ ಕೊಳಚೂರು ಕುಟುಂಬಿಕರ ವಿಜ್ಞಾಪನೆಯಂತೆ ಶನಿವಾರ ಆಗಮಿಸಿ, ಮಠದ ಪಟ್ಟದ ದೇವರ ಪೂಜೆ ನೆರವೇರಿಸಿ ದಾನಿಗಳನ್ನು ಆಶೀರ್ವದಿಸಿ ಮಾತನಾಡಿದರು.
ದಾನ ನೀಡುವಾಗ ಜ್ಞಾನಿಗಳಿಗೆ ನೀಡಬೇಕೆಂಬ ಮಹಾಭಾರತದಲ್ಲಿನ ಭೀಷ್ಮಾಚಾರ್ಯರ ನುಡಿಯಂತೆ ಭೂದಾನವನ್ನು ಇಂದು ಕೊಳಚೂರು ಕುಟುಂಬಿಕರು ಅರ್ಹವಾಗಿಯೇ ತಮ್ಮ ಗುರುಗಳ ಮೂಲಕ ಶ್ರೀರಾಮಚಂದ್ರ ದೇವರಿಗೆ ಸಮರ್ಪಿಸಿದ್ದಾರೆ ಎಂದು ಕಿರಿಯ ಶ್ರೀಪಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹೇಳಿದರು.
ಮಠದ ಪ್ರಬಂಧಕ ಗಿರೀಶ್ ಆಚಾರ್ಯ, ಮಧ್ವರಾಯ ಭಟ್ ನಂದಿಕೂರು, ಕೃಷ್ಣಮೂರ್ತಿ ಭಟ್ ನಂದಿಕೂರು, ಶ್ರೀನಿವಾಸ ಉಡುಪ ಪಲಿಮಾರು, ಪ್ರಸನ್ನ ಆಚಾರ್ಯ ಕೆಮ್ಮಣ್ಣು, ಹರೀಶ್ ಜೋಯಿಸ ಪಾದೆಬೆಟ್ಟು, ಗುರುರಾಜ ಭಟ್ ಎರ್ಮಾಳು, ಕೊಳಚೂರು ಬರ್ಪಣಿ ವೇಣುಗೋಪಾಲ ರಾವ್, ಸರ್ವಜ್ಞ ರಾವ್, ಆದಿಶೇಷ ರಾವ್, ರಮೇಶ್ ರಾವ್, ಸುರೇಶ್ ರಾವ್, ಗಣೇಶ್ ರಾವ್, ವೆಂಕಟೇಶ ರಾವ್ ಮೊದಲಾದವರು ಉಪಸ್ಥಿತರಿದ್ದರು.
“ಪಂಚಭೌತಿಕವಾಗಿ ಶ್ರೀಮಂತವಾಗಿರುವ ಗೃಹದೊಂದಿಗೆ ಇಲ್ಲಿನ ಅವರ ಎಲ್ಲ ಭೂಮಿಯನ್ನು ಶ್ರೀ ಮಠದ ಸೀತಾರಾಮಚಂದ್ರ ದೇವರಿಗೆ ದಾನವಾಗಿ ಕೊಳಚೂರು ಬರ್ಪಣಿ ಕುಟುಂಬಿಕರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಬೇಸಿಗೆ ಕಾಲದ ಧಾರ್ಮಿಕ ಶಿಬಿರ, ವಿದ್ಯಾಗುರುಕುಲಗಳನ್ನೂ ಇಲ್ಲಿ ನಡೆಸುವ ಚಿಂತನೆಯಿದೆ.”
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…