ಕಠ್ಮಂಡು : ಸಿಂಗಾಪುರ, ಹಾಂಕಾಂಗ್ ದೇಶಗಳು ಭಾರತ ಮೂಲದ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಗಳಲ್ಲಿ ಹಾನಿಕಾರಕ , ರಾಸಾಯಾನಿಕ ಅಂಶಗಳಿವೆ ಎನ್ನುವ ಕಾರಣಕ್ಕೆ ನಿಷೇಧಿಸಿದ ಬೆನ್ನಲ್ಲೇ ಇದೀಗ ನೇಪಾಳದಲ್ಲಿ ಸುರಕ್ಷತೆಯ ಕಾರಣ ನೀಡಿ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಯನ್ನು ನಿಷೇಧಿಸಲಾಗಿದೆ.
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟದ ಇಲಾಖೆಯು ಭಾರತೀಯ ಎರಡು ಬ್ರ್ಯಾಂಡ್ ಮಸಾಲ ಪದಾರ್ಥಗಳನ್ನು ಕ್ಯಾನ್ಸರ್ ಉಂಟು ಮಾಡುವ ಕೀಟನಾಶಕ ಎಥೀಲಿನ್ ಆಕ್ಸೈಡ್ ಇದೆಯೇ ಎನ್ನುವುದರ ಬಗ್ಗೆ ಪರೀಕ್ಷೆ ನಡೆಸುತ್ತಿದ್ದು, ಅಂತಿಮ ಫಲಿತಾಂಶ ಬರುವ ತನಕ ಎವರೆಸ್ಟ್, ಎಂಡಿಎಚ್ ಮಸಾಲೆಗಳ ಮಾರಾಟ ಹಾಗೂ ಅಮದನ್ನು ನಿಷೇಧಿಸಿದೆ.
‘ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಗಳನ್ನು ಅಮದು ಹಾಗೂ ಪೇಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ. ಅವುಗಳಲ್ಲಿ ಹಾನಿಕಾರಕ ರಾಸಾಯನಿಕ ಅಂಶವಿದೆ ಎನ್ನುವ ಸುದ್ದಿ ಬಂದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅಂತಿಮ ಫಲಿತಾಂಶ ಬರುವ ತನಕ ಈ ಕ್ರಮ ಜಾರಿಯಲ್ಲಿರಲಿದೆ’ ಎಂದು ನೇಪಾಳದ ಆಹಾರ ತಂತ್ರಜ್ಙಾನದ ವಕ್ತಾರ ಮೋಹನ್ ಕೃಷ್ಣ ಮಹಾರಾಜನ್ ಹೇಳಿದ್ದಾರೆ.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…