Featured

ಎಸಿಡಿಟಿ ನಿವಾರಣೆಗೆ ಈ ಮನೆಮದ್ದು ಸಹಕರಿಸುತ್ತದೆ ಉಪಯೋಗಿಸಿ – Vishwanews24

ಅನಿಯಮಿತ ಆಹಾರ ಸೇವನೆ, ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಸಾಕಷ್ಟು ನೀರು ಸೇವಿಸದಿರುವುದು, ಮಸಾಲೆಯುಕ್ತ ಹಾಗೂ ಜಂಕ್ ಫುಡ್ ಸೇವನೆ, ಒತ್ತಡ, ಧೂಮಪಾನ, ತುಂಬಾ ಹೊತ್ತು ಆಹಾರ ಸೇವಿಸದೆ ಇರೋದು ಎಸಿಡಿಟಿಗೆ ಕಾರಣವಾಗುತ್ತದೆ.ಹೊಟ್ಟೆ ಉರಿ, ಎದೆಯುರಿ, ಹುಳಿ ತೇಗು, ಕಡಿಮೆ ಹಸಿವು, ಹೊಟ್ಟೆ ಉಬ್ಬರ ಇವೆಲ್ಲವೂ ಎಸಿಡಿಟಿಯ ಲಕ್ಷಣವಾಗಿದೆ.

ಹೊಟ್ಟೆ, ಜೀರ್ಣಕ್ರಿಯೆಗೆ ಸಂಬಂಧಿತ ಅನೇಕ ಸಮಸ್ಯೆಗೆ ಮಜ್ಜಿಗೆ ರಾಮಬಾಣ. ಎಸಿಡಿಟಿ ಆಗದಂತೆ ತಡೆಯಲು ಊಟದ ಬಳಿಕ ಮಜ್ಜಿಗೆ ಕುಡಿಯುವ ಪದ್ದತಿ ಈಗಲೂ ಇದೆ. ಎಸಿಡಿಟಿ ಆದಲ್ಲಿ, ತಂಪಾದ ಮಜ್ಜಿಗೆ ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

ಶುಂಠಿ ರಸಕ್ಕೆ ನಿಂಬೆ ರಸ ಹಾಗೂ ಜೇನು ತುಪ್ಪ ಸೇರಿಸಿ ಕುಡಿಯಿರಿ. ಇದು ಹೊಟ್ಟೆಯುರಿ ಕಡಿಮೆ ಮಾಡಿ ಎಸಿಡಿಟಿ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಅಶ್ವಗಂಧ

ಹೊಟ್ಟೆ ತುಂಬಿದ್ದರೂ ಹೊಟ್ಟೆಯುರಿ ಕಾಡುತ್ತಿದ್ದರೆ ಅಶ್ವಗಂಧವನ್ನು ಸೇವನೆ ಮಾಡಿ. ಇದ್ರಿಂದ ಸಾಕಷ್ಟು ಪ್ರಯೋಜನಗಳಿವೆ.ಹಿಂದಿನವರು ಕೂಡ ಎಸಿಡಿಟಿ ಸಮಸ್ಯೆಗೆ ಚಂದನವನ್ನು ಬಳಸುತ್ತಿದ್ದರು. ಇದು ಹೊಟ್ಟೆಯುರಿ, ಎದೆಯುರಿ, ವಾಕರಿಕೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ.

ತಂಪಾದ ಹಾಲು

ಎಸಿಡಿಟಿ ಈಗಾಗಲೇ ಆರಂಭವಾದರೆ, ತಂಪಾದ ಹಾಲು ತುಂಬಾ ಒಳ್ಳೆಯ ಔಷಧವಾಗಿ ಪರಿಣಮಿಸುತ್ತದೆ. ಹಾಲಿನಲ್ಲಿರುವ ಅಂಶ ಆ್ಯಸಿಡ್‌ ಅಂಶವನ್ನು ಹೀರಿಕೊಳ್ಳುವ ಗುಣಹೊಂದಿದೆ. ಸಕ್ಕರೆ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ಬೆರೆಸದೆ, ತಂಪಾದ ಹಾಲನ್ನು ಕುಡಿಯಿರಿ.

ತುಳಸಿ 
ಜೀರ್ಣಕ್ರಿಯೆಯನ್ನು ಸರಿಪಡಿಸುವಲ್ಲಿ ತುಳಸಿಯನ್ನು ಔಷಧಿ ಎಂದೇ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರ ಅಲ್ಲ, ಆಯುರ್ವೇದದಲ್ಲಿ ತುಳಸಿ ರಸ ಔಷಧವೆಂದೇ ಪರಿಗಣಿಸಲಾಗಿದೆ. ತುಳಸಿ ಎಲೆಯನ್ನು ಹಾಗೆಯೇ ತಿನ್ನಬಹುದು, ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು. ಇದನ್ನು ನಿಮ್ಮ ಊಟದ ಬಳಿಕ ಸೇವಿಸಿದರೆ ಇನ್ನೂ ಒಳ್ಳೆಯದು

ಜೀರಿಗೆ

ಇದಲ್ಲದೆ, ಜೀರಿಗೆಯೂ ಹೊಟ್ಟೆಯ ಸಮಸ್ಯೆಗಳನ್ನು ದೂರವಾಗಿಸಲು ಬಳಸುತ್ತಾರೆ. ಜೀರಿಗೆಯನ್ನು ನೇರ ಬಾಯಿಗೆ ಹಾಕಬಹುದು ಅಥವಾ ಅವನ್ನು ನೀರಿನಲ್ಲಿ ಕುದಿಸಿ, ಬಿಸಿ ನೀರನ್ನೂ ಕುಡಿಯುವುದರಿಂದ ಹೆಚ್ಚು ಅನುಕೂಲವಾಗುತ್ತದೆ.

ಬಾಳೆಹಣ್ಣು 
ಪೊಟ್ಯಾಷಿಯಂ ಅಂಶವನ್ನು ಹೊಂದಿರುವ ಬಾಳೆ ಹಣ್ಣುಗಳು ಹೊಟ್ಟೆಯಲ್ಲಿ ಆ್ಯಸಿಡ್‌ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೂ ಬಾಳೆಹಣ್ಣು ಸಹಕಾರಿ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago