Featured

ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ|| ಎಮ್.ಎನ್ ರಾಜೇಂದ್ರ ಕುಮಾರ್ ಅವರಿಗೆ ರೈತಬಂಧು ಪ್ರಶಸ್ತಿ ಮತ್ತು ಅಭಿವಂದನೆ ಕಾರ್ಯಕ್ರಮ.

ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ|| ಎಮ್.ಎನ್ ರಾಜೇಂದ್ರ ಕುಮಾರ್ ಅವರಿಗೆ ರೈತಬಂಧು ಪ್ರಶಸ್ತಿ ಮತ್ತು ಅಭಿವಂದನೆ ಕಾರ್ಯಕ್ರಮ.

ಮಂಗಳೂರು: ಇಸ್ರೆಲ್ ರಾಷ್ಟ್ರಕ್ಕೆ ಮೊದಲ ಬಾರಿಗೆ ಅಧ್ಯಯನ ಪ್ರವಾಸ ಕೈಗೊಂಡ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರವಾಸದ ರೂವಾರಿಯಾದ ಸಹಕಾರಿ ರತ್ನ ಡಾ|| ಎಮ್ ಎನ್ ರಾಜೇಂದ್ರ ಕುಮಾರ್ ಅವರಿಗೆ “ರೈತ ಬಂಧು” ಪ್ರಶಸ್ತಿ ನೀಡುವ ಮೂಲಕ‌ ಗೌರವಿಸಿ ಅಭಿವಂದನೆ ಸಮರ್ಪಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಮಾತನಾಡಿ “ರಾಜೇಂದ್ರ ಕುಮಾರ್ ಅವರು ಎಲ್ಲಾ ಸಹಕಾರಿಗಳ ಮಿತ್ರ ಅವರೊಂದು ಮಹಾನ್ ಶಕ್ತಿ ವ್ಯಕ್ತಿ ಅಲ್ಲ ,ಇಸ್ರೆಲ್ ‌ಮಾಡಿಸುವುದೆಂದರೆ ಅದು ಸುಲಭವಲ್ಲ ಅದರ ಯಶಸ್ಸಿಗೆ ಪ್ರತಿಜ್ಞೆ ಮಾಡುವುದು ಅದೊಂದು ಮಹತ್ಕಾರ್ಯ.

ಎಲ್ಲಾ ಟೀಕೆಗಳಿಗೆ ಸಾಧನೆಗಳ‌ ಮೂಲಕ ಸಮರ್ಥವಾದ ಉತ್ತರ ನೀಡಿದ‌ ದೇಶದ ಏಕೈಕ ಸಹಕಾರಿ ಎಮ್.ಎನ್.ಆರ್. ಎಂದರು.

ಕೆ.ಎಮ್.ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತಾಡಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆಯುತ್ತಿದೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದೇಶದಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿದೆ ಅದಕ್ಕೆ‌ ಮೂಲ ಕಾರಣ ಎಮ್.ಎನ್.ಆರ್ ಅವರಿಂದ ಅವರ ತಂಡದಿಂದ ಈ‌ ಕಾರ್ಯ ಸಾಧ್ಯವಾಗಿದೆ ಎಂದರು.

ಅಭಿವಂದನೆ ಸ್ವೀಕರಿಸಿ‌ ಮಾತಾಡಿದ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ” ನಮ್ಮ‌ ಬ್ಯಾಂಕ್ ಯಾವುದೇ ಸಾಧನೆ ಪ್ರಶಸ್ತಿ ಬಂದ್ರೆ ಅದಕ್ಕೆ ಮೂಲ ಕಾರಣ ಸಹಕಾರಿಗಳು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಭಾರಿ ಸಹಕಾರಿ ಅಧ್ಯಯನ ಪೀಠ ಸ್ಥಾಪನೆಗೆ ಇದೊಂದು ಸುವರ್ಣವಕಾಶ ಅದು ಸಾಕಾರಗೊಳ್ಳಲಿದೆ.
ಸಹಕಾರಿಗಳು ಸಲ್ಲಿಸಿರುವ ಅಭಿವಂದನೆ ಇಡೀ ಸಹಕಾರಿಗಳಿಗೆ ಸಲ್ಲಿಸಿದ ಗೌರವ‌ ಮತ್ತು ಪ್ರತಿಯೊಬ್ಬ ಸಹಕಾರಿ ಕೂಡ ರೈತರಿಗೆ ಪ್ರೋತ್ಸಾಹಿಸಬೇಕು.

ಮುಂದಿನ‌ ಭಾರಿ ಐದು ಮಂದಿ ಮಹಿಳೆಯರನ್ನು ಹೈನುಗಾರಿಕೆ ಅಧ್ಯಯನ ‌ಕುರಿತಾಗಿ ಪ್ರವಾಸ ಕಳುಹಿಸಿ ಕೊಡುವ ಪ್ರಯತ್ನ ಮಾಡಲಾಗುತ್ತದೆ.

ನೀರು ಹಾಳಾಗದಂತೆ ಸಣ್ಣ ಸಣ್ಣ ಅಣೆಕಟ್ಟುವಿನ ಮೂಲಕ ಕ್ರೋಡೀಕರಿಸುವ ಪ್ರಯತ್ನ ಮಾಡುವ ಸಂಸ್ಥೆಗಳು ಇದ್ದಲ್ಲಿ ಅವರಿಗೆ ಪೂರಕ‌ ಸಹಕಾರ ನೀಡುವಲ್ಲಿ ನಾನು ಬದ್ಧ ಎಂದರು.

ಕಾರ್ಯಕ್ರಮದಲ್ಲಿ ನೂರಾರು ಸಹಕಾರಿಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು

ಬ್ಯಾಂಕಿನ‌ನಿರ್ದೇಶ ಟಿ.ಜಿ‌ ರಾಜರಾಮ್ ಭಟ್ ಸ್ವಾಗತಿಸಿ,ಡಾ ದೇವಿ ಪ್ರಸಾದ್ ಶೆಟ್ಟಿ ಪ್ರಸ್ತಾವನೆ ಮಾತುಗಳನ್ನಾಡಿದರು.ಮನೋಹರ ಪ್ರಸಾದ್ ಕಾರ್ಯಕ್ರಮ‌ ನಿರೂಪಿಸಿದರು.

Vishwa News 24

Recent Posts

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

9 minutes ago

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ : ಪ್ರಿಯಾಂಕ್ ಖರ್ಗೆ – vishwanews24

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ .. ಜೈಲಿನಲ್ಲಿನ ಕೆಲವು ಅಧಿಕಾರಿಗಳು ತಮ್ಮ ಹಳೆಯ ಚಾಳಿ…

35 minutes ago

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು – vishwanews24

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ…

44 minutes ago

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ – vishwanews24

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು  ತಂಬಾಕು ಮತ್ತು ನಿಕೋಟಿನ್ ಹೊಂದಿರುವ…

59 minutes ago

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ  ಭೇಟಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ  ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ  ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…

1 hour ago

ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24

‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

3 hours ago