ನವದೆಹಲಿ: ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್ ವಾಯುಸೇನೆಯ ಮುಖ್ಯಸ್ಥರಾದ ಬೀರೇಂದ್ರ ಸಿಂಗ್ ಧನೋವಾ. ಸೆಪ್ಟೆಂಬರ್ 7, 1957ರಲ್ಲಿ ಜನಿಸಿದ ಧನೋವಾ ಅವರು ಸೇನಾಪಡೆಯಲ್ಲಿ 37 ವರ್ಷಗಳಿಂದ ಭಾರತದ ವಾಯು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದಲ್ಲದೇ ಕಾರ್ಗಿಲ್ ಯುದ್ಧದ ವೇಳೆ ಕತ್ತಲಿನಲ್ಲಿ ಆಪರೇಷನ್ ನಡೆಸಿದ್ದ ಧನೋವಾ ಅವರೇ ಏರ್ ಸ್ಟ್ರೈಕ್‍ಗೆ ಸೂಚಿಸಿದ್ದರಂತೆ. ಪುಲ್ವಾಮಾದ ಆವಂತಿಪೋರ್ ನಲ್ಲಿ ನಡೆದ ದಾಳಿಗೆ ಸಂಬಂಧಪಟ್ಟಂತೆ ನಡೆದ ಭೂಸೇನೆ, ವಾಯುಸೇನೆ, ನೌಕಾಪಡೆಯ ಮುಖ್ಯಸ್ಥರ ಸಭೆಯಲ್ಲಿ ಪಾಕ್ ಉಗ್ರರ ಹುಟ್ಟಡಗಿಸಲು ಏರ್ ಸ್ಟ್ರೈಕ್ ಒಳ್ಳೆಯ ಆಯ್ಕೆ ಅಂತ ಧನೋವಾ ಸಲಹೆ ನೀಡಿದ್ದರು ಅದು ಈಗ ಯಶಸ್ವಿಯಾಗಿದೆ.
ಧನೋವಾ ಅವರು 1999ರ ಕಾರ್ಗಿಲ್ ಯುದ್ಧದ ವೇಳೆ ಫೈಟರ್ ಸ್ಕ್ವಾಡ್ರನ್ ಮತ್ತು ಅಂದಿನ ಏರ್ ಫೋರ್ಸ್ ಮುಖ್ಯಸ್ಥರಾಗಿದ್ದ ಎ.ವೈ ಟಿಪ್ನಿಸ್ ಅವರಿಗೆ ಸಾಥ್ ನೀಡಿದ್ದರು. ಅಂದಿನ ಮಾರ್ಷಲ್ ಟಿಫ್ನಿಸ್ ಅವರೇ ಖುದ್ದಾಗಿ ಪೈಲಟ್‍ಗಳ ಜೊತೆಗೆ ತೆರಳಿ ಕಾರ್ಗಿಲ್ ಯುದ್ಧದ ವೇಳೆ ಕತ್ತಲಿನಲ್ಲಿ ಆಪರೇಷನ್ ನಡೆಸಿ ಯಶಸ್ವಿಯಾದರು. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಬಾಲ್‍ಕೋಟ್‍ನಲ್ಲಿ 350 ಉಗ್ರರ ಚೆಂಡಾಡಿದ ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್. ಅಲ್ಲದೆ, ಈ ಸಂಪೂರ್ಣ ಆಪರೇಷನ್ ನಿರ್ವಹಿಸಿದವರು .
ಘಟನೆ ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಭೂಸೇನೆ, ವಾಯುಸೇನೆ, ನೌಕಾಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಪಾಕ್ ಉಗ್ರರ ಹುಟ್ಟಡಗಿಸಲು ಏರ್ ಸ್ಟ್ರೈಕ್ ಒಳ್ಳೆಯ ಆಯ್ಕೆ ಅಂತ ಧನೋಆ ಸಲಹೆ ನೀಡಿದ್ದರು ಅಂತ ತಿಳಿದು ಬಂದಿದೆ.
1978ರಲ್ಲಿ ವಾಯು ಸೇನೆ ಸೇರಿದ್ದ ಧನೋವಾ, ಎಚ್‍ಜೆಟಿ-16 ಕಿರಣ್, ಸೆಪೆಕ್ಯಾಟ್, ಜಾಗ್ವಾರ್, ಮಿಗ್-29 ಹಾಗೂ ಸುಖೋಯ್-30 ಎಂಕೆಐ ಫೈಟರ್ ಜೆಟ್‍ಗಳನ್ನು ಹಾರಿಸಿದ್ದಾರೆ. ಈ ಮೂಲಕ ಪರಿಣತ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷಗಳ ಸೇವೆಯಲ್ಲಿ ಹಲವಾರು ಅತ್ಯುನ್ನತ ಪ್ರಶಸ್ತಿ, ಪದಕಗಳನ್ನು ಧನೋವಾ ಪಡೆದಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…