ಐಚಿ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದೆ. ಶುಕ್ರವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ ಚಿನ್ನದ ಪದಕ ಜಯಿಸಿದ್ದಾರೆ.
ಐಚಿ ಜನರಲ್ ಶೂಟಿಂಗ್ ರೇಂಜ್ ನಲ್ಲಿ ನಡೆದ ಫೈನಲ್‌ನಲ್ಲಿ ಕಮಲ್ ಜೀತ್–ಸುರುಚಿ ಜೋಡಿ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿತು. ಮೊದಲ ಹಂತದ (Stage 1) ಮೊದಲ ಸರಣಿಯಲ್ಲಿ ಭಾರತ 103.0 ಅಂಕ ಗಳಿಸಿತು. ಬಳಿಕದ ಸರಣಿಗಳ ಅಂತ್ಯಕ್ಕೆ ಭಾರತದ ಅಂಕಗಳು ಕ್ರಮವಾಗಿ 202.4 ಮತ್ತು 303.5ಕ್ಕೆ ತಲುಪಿದವು.
ಇದನ್ನೂ ಓದಿ :
ಎರಡನೇ ಹಂತದಲ್ಲೂ ಭಾರತೀಯ ಜೋಡಿ ಮುನ್ನಡೆ ಕಾಯ್ದುಕೊಂಡಿತು. ಈ ಹಂತದ ಒಂದು ಹಂತದಲ್ಲಿ 364.7 ಅಂಕ ಗಳಿಸಿದ್ದ ಭಾರತ, ದಕ್ಷಿಣ ಕೊರಿಯಾ ಮತ್ತು ಇರಾನ್‌ಗಿಂತ ಮುಂದಿತ್ತು. 18 ಶಾಟ್ ಗಳ ಬಳಿಕ ಭಾರತದ ಒಟ್ಟು ಅಂಕ 424.9ಕ್ಕೆ ಏರಿತು.
ಫೈನಲ್ ನಲ್ಲಿ ಭಾರತ, ದಕ್ಷಿಣ ಕೊರಿಯಾ, ಇರಾನ್ ಮತ್ತು ಇಂಡೋನೇಷ್ಯಾ ತಂಡಗಳು ಸ್ಪರ್ಧಿಸಿದ್ದವು. ಮೊದಲಿಗೆ ಇಂಡೋನೇಷ್ಯಾ ಸ್ಪರ್ಧೆಯಿಂದ ಹೊರಬಿತ್ತು. ನಂತರ ಇರಾನ್ 415.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡಿತು.
ಇದಾದ ಬಳಿಕ ಚಿನ್ನಕ್ಕಾಗಿ ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ನೇರ ಪೈಪೋಟಿ ನಡೆಯಿತು. ಅಂತಿಮ ಹಂತ ಆರಂಭಿಸುವಾಗ ಭಾರತ 7 ಅಂಕಗಳ ಮುನ್ನಡೆಯಲ್ಲಿತ್ತು. ಈ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡ ಕಮಲ್ ಜೀತ್–ಸುರುಚಿ ಜೋಡಿ ಒಟ್ಟು 484.6 ಅಂಕ ಗಳಿಸಿ ಚಿನ್ನದ ಪದಕ ಗೆದ್ದಿತು. ದಕ್ಷಿಣ ಕೊರಿಯಾ ಬೆಳ್ಳಿ ಪದಕ ಪಡೆಯಿತು.
ಇದನ್ನೂ ಓದಿ :
ಕಮಲ್ ಜೀತ್ ಮತ್ತು ಸುರುಚಿ ಅರ್ಹತಾ ಸುತ್ತಿನಲ್ಲೂ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಅವರು ಫೈನಲ್ ಗೆ ನೇರವಾಗಿ ಅರ್ಹತೆ ಪಡೆದಿದ್ದರು.
ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಮಹಿಳಾ ಕ್ರಿಕೆಟ್ ತಂಡದಿಂದ ಲಭಿಸಿತ್ತು. ಫೈನಲ್ ನಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದ ಭಾರತದ ಮಹಿಳಾ ತಂಡ ಸ್ವರ್ಣ ಪದಕ ಗೆದ್ದಿತ್ತು. ಇದೀಗ ಕಮಲ್‌ಜೀತ್–ಸುರುಚಿ ಜೋಡಿ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಕ್ರೀಡಾಕೂಟದ ಎರಡನೇ ಸ್ವರ್ಣ ಪದಕ ತಂದುಕೊಟ್ಟಿದೆ.
ಬಂಟ್ವಾಳ : ರಸ್ತೆಯಲ್ಲೇ ಕೆಟ್ಟು ನಿಂತಿದ್ದ ಲಾರಿಯಲ್ಲಿ ಪರಿಶೀಲನೆ ವೇಳೆ ಅಕ್ರಮ ಮಣ್ಣು ಸಾಗಾಟ ಪತ್ತೆ ; ಲಾರಿ ವಶಕ್ಕೆ…
ಉತ್ತರ ಪ್ರದೇಶ : ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ ; ಆರು ಮಂದಿ ಸಜೀವ ದಹನ ಉತ್ತರ ಪ್ರದೇಶ…
ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ನಾಲ್ಕು ಬೋಗಿಗಳು ; ತಪ್ಪಿದ ಭಾರೀ ಅನಾಹುತ…
ಉಡುಪಿ: ನ.29ರಂದು ಸೋದೆ ಪರ್ಯಾಯದ ಬಾಳೆ ಮುಹೂರ್ತ ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ದಲ್ಲಿ 2028-30ರ ಅವಧಿಯಲ್ಲಿ…
7 ಮಂದಿಯ ಭೀಕರ ಹತ್ಯೆ : ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಮರ್ಡರ್ ಕೇಸ್ ಬಗ್ಗೆ ಪೊಲೀಸ್ ಆಯುಕ್ತರ ಹೇಳಿಕೆ ಬೆಂಗಳೂರು:…
ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನತು ಉಡುಪಿ: ಹಿರಿಯಡ್ಕದ ಪ್ರದೀಪ್…