Featured

ಏ.1ರಿಂದ ಹಾಲ್‌ಮಾರ್ಕ್ ಮಾಡದ ಚಿನ್ನಾಭರಣ ಮಾರಾಟ ನಿಷೇಧ – Vishwanews24

ಏ.1ರಿಂದ 6 ಅಂಕಿಗಳ ಕೋಡ್‌ ಇಲ್ಲದೆ ಹಾಲ್‌ಮಾರ್ಕ್ ಮಾಡದ ಚಿನ್ನಾಭರಣ ಮಾರಾಟ ನಿಷೇಧ

ನವದೆಹಲಿ: ಆರು ಅಂಕಿಗಳ ಕೋಡ್‌ ಇಲ್ಲದೆ ಹಾಲ್‌ಮಾರ್ಕ್ ಮಾಡದ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏ.1ರಿಂದ ನಿಷೇಧಿಸಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯಲ್‌ ಅವರು ಶುಕ್ರವಾರ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್ (ಬಿಐಎಸ್‌) ಕುರಿತ ಸಭೆ ನಡೆಸಿದ್ದು, ಇಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬಿಐಎಸ್‌ ಪದ್ಧತಿಯನ್ನು ಉತ್ತೇಜಿಸಲು ಬಿಐಎಸ್‌ ಸರ್ಟಿಫಿಕೇಟ್‌ಗೆ  ಶುಲ್ಕದ ಮೇಲೆ ಶೇ.80ರಷ್ಟು ರಿಯಾಯ್ತಿ ನೀಡಲು ನಿರ್ಧರಿ ಸಲಾಗಿದೆ. ಚಿನ್ನದ ಹಾಲ್‌ಮಾರ್ಕಿಂಗ್‌ ಅಮೂಲ್ಯವಾದ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. ಇದು ಜೂ. 16, 2021 ರವರೆಗೆ ಸ್ವಯಂಪ್ರೇರಿತವಾಗಿತ್ತು.

ಅದರ ನಂತರ, ಹಂತ ಹಂತವಾಗಿ ಹಾಲ್‌ಮಾರ್ಕಿಂಗ್‌ ಜಾರಿಗೆ ಸರ್ಕಾರ ನಿರ್ಧರಿಸಿತ್ತು. ಮೊದಲ ಹಂತದಲ್ಲಿ 256 ಜಿಲ್ಲೆಗಳಲ್ಲಿ ಕಡ್ಡಾಯಗೊಳಿಸಲಾಗಿತ್ತು. 2ನೇ ಹಂತದಲ್ಲಿ 32 ಜಿಲ್ಲೆಗಳನ್ನು ಸೇರಿಸಲಾಗಿದ್ದು, ಒಟ್ಟು ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಇನ್ನೂ 51 ಜಿಲ್ಲೆಗಳು ಸೇರ್ಪಡೆಯಾಗುತ್ತಿವೆ. ಏ.1ರಿಂದ ಬಿಐಎಸ್‌ ಇರುವ ಆಭರಣ ಮಾರಾಟ ಮಾತ್ರ ಅನುಮತಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

6 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

7 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

8 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

8 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

8 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

9 hours ago