ಬೆಂಗಳೂರು(Vishwanews24) : 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಏ.7 ರಂದು ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರಿಗೆ ಎಸ್ಮಾ ಜಾರಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಏ.7 ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಾರಿಗೆ ಇಲಾಖಾಧಿಕಾರಿಗಳು ಹಾಗೂ ನಾಲ್ಕು ಸಾರಿಗೆ ನಿಗಮದ ವ್ಯವಸ್ಥಾಪಕರ ಜೊತೆ ಸಭೆ ನಡೆಸಿದರು. ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ”ಸಾರಿಗೆ ನೌಕರರು ಮುಷ್ಕರ ನಡೆಸಿದರೆ ವಿಪತ್ತು ನಿರ್ವಹಣಾ ಕಾಯ್ದೆ,ಎಸ್ಮಾ ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು.
”ಹಾಗೆಯೇ ಸಾರಿಗೆ ನೌಕರರೊಂದಿಗೆ ಮತ್ತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಆರನೇ ವೇತನ ಆಯೋಗ ಜಾರಿಗೊಳಿಸಲು ಸಾಧ್ಯವೂ ಇಲ್ಲ. ಈಗಾಗಲೇ ಕೊರೊನಾ ಕಾರಣದಿಂದಾಗಿ ಮುಷ್ಕರ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ. ಅಷ್ಟಕ್ಕೂ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಮಾಡಲಾಗುವುದು. ಹಾಗೆಯೇ ಸರ್ಕಾರ ಸಾರಿಗೆ ವ್ಯವಸ್ಥೆ ನಿರ್ವಹಿಸಲು ಪರ್ಯಾಯ ವ್ಯವಸ್ಥೆ ಮಾಡಲು ಸಿದ್ದವಿದೆ” ಎಂದರು.
ರಾಜ್ಯದಲ್ಲಿ ಮತ್ತೆ 5 ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ ! Vishwanews24
”ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಎಲ್ಲಾವನ್ನೂ ಪರವಾನಗಿ ಕೇಳದೆ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ. ರೂಟ್, ಪರ್ಮಿಟ್ ಇಲ್ಲದೆ ಸಂಚಾರಕ್ಕೆ ಅವಕಾಶ ನೀಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮತ್ತೆ ಸಂಧಾನ ಇಲ್ಲ” ಎಂದು ಸ್ಪಷ್ಟಪಡಿಸಿದರು.
”6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸಾಧ್ಯವಿಲ್ಲವಾದರೂ ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಈಗ ಉಪಚುನಾವಣೆ ನಡೆಯುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. ನೌಕಕರ ಸಂಬಳ ಹೆಚ್ಚಳ ಘೋಷಣೆ ಮಾಡಲು ಈಗಾಗಲೇ ಚುನಾವಣಾ ಆಯೋಗದ ಅನುಮತಿಯೂ ಕೋರಲಾಗಿದೆ” ಎಂದು ತಿಳಿಸಿದರು.
ಯಾವ ಪ್ರತಿಭಟನೆ ಮಾಡುವಂತಿಲ್ಲ, ಪ್ರತಿಭಟನೆ ನಡೆಸಿದ್ರೆ ಬಂಧಿಸುತ್ತೇವೆ : ಕಮಲ್ ಪಂಥ್ ಎಚ್ಚರಿಕೆ -Vishwanews24
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…
ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…
"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…