ನವದೆಹಲಿ: ಕೋವಿಡ್ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತದಿಂದ ಇಂದು ಮೈಲಿಗಲ್ಲು ಸೃಷ್ಟಿಯಾಗಲಿದೆ. ಇಂದು 100 ಕೋಟಿ (1 ಬಿಲಿಯನ್) ಲಸಿಕೆ ವಿತರಿಸಿ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭವಾಗಿದೆ.
ನಿನ್ನೆ ಮಧ್ಯರಾತ್ರಿಯವರೆಗೂ 99,85,16,644 ಡೋಸ್ ಹಂಚಿಕೆ ಆಗಿತ್ತು. ಈ ಮೂಲಕ 9 ತಿಂಗಳಲ್ಲಿ 100 ಕೋಟಿ ಡೋಸ್ ನೀಡಿದ ಗರಿಮೆಗೆ ಭಾರತ ಪಾತ್ರವಾಗಲಿದೆ. ಚೀನಾ ನಂತರ ಕಡಿಮೆ ಅವಧಿಯಲ್ಲಿ 100 ಕೋಟಿ ಲಸಿಕೆ ಸಾಧನೆ ಮಾಡಿದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಜನವರಿ 16ರಂದು ಮೊದಲ ವ್ಯಾಕ್ಸಿನ್ ನೀಡಲಾಗಿತ್ತು. ಆ ಬಳಿಕ 100 ಕೋಟಿ ಲಸಿಕೆ ವಿತರಿಸಲು 277 ದಿನ ಪಡೆದುಕೊಂಡಿದೆ. ದೇಶದ ಶೇ. 50ರಷ್ಟು ಮಂದಿಗೆ ಸಿಂಗಲ್ ಡೋಸ್ ಲಸಿಕೆ ಸಿಕ್ಕಿದರೆ ಶೇ.21ರಷ್ಟು ಮಂದಿಗೆ ಡಬಲ್ ಡೋಸ್ ಲಸಿಕೆ ಪೂರ್ಣವಾಗಿದೆ. 58,645 ಸರ್ಕಾರಿ, 2,019 ಖಾಸಗಿ ಕೇಂದ್ರ ಸೇರಿ ಒಟ್ಟು 60,664 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ವಿತರಿಸಲು ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ.
ಟಾಪ್ 5 ವ್ಯಾಕ್ಸಿನ್ ರಾಜ್ಯಗಳು
ಉತ್ತರ ಪ್ರದೇಶ -12,19,47,031
ಮಹಾರಾಷ್ಟ್ರ – 9,28,41,727
ಪಶ್ಚಿಮ ಬಂಗಾಳ – 6,85,12,831
ಗುಜರಾತ್ – 6,76,67,794
ಕರ್ನಾಟಕ – 6,15,62,329 (8ನೇ ಸ್ಥಾನ)
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…