Featured

ಐದು ವರ್ಷ ಬಿಜೆಪಿ ಶಾಸಕರಿದ್ದರೂ ಇನ್ನೂ ಅನುಷ್ಠಾನಗೊಂಡಿಲ್ಲ ಕಾಪು ನಗರಾಭಿವೃದ್ದಿ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್..!! Vishwanews24

ಐದು ವರ್ಷ ಬಿಜೆಪಿ ಶಾಸಕರಿದ್ದರೂ ಇನ್ನೂ ಅನುಷ್ಠಾನಗೊಂಡಿಲ್ಲ ಕಾಪು ನಗರಾಭಿವೃದ್ದಿ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್..!!

ಚುನಾವಣೆಯ ಮುನ್ನಾ ನೀಡಿದ್ದ ಭರವಸೇ ಸುಳ್ಳಾಯಿತೆ…???

ಕಾಪು: ಇಲ್ಲಿನ ಪುರಸಭೆ ವ್ಯಾಪ್ತಿ ಮಾತ್ರವಲ್ಲದೆ ಸ್ಥಳಿಯ ಪಂಚಾಯತ್ ವ್ಯವಸ್ಥೆಯೊಳಗೆ ಸೇರಿಕೊಂಡಿರುವ ಕಾಪು ನಗರಾಭಿವೃದ್ದಿ ಪ್ರಾಧಿಕಾರದ ಕಾನೂನು ತೊಡಕುಗಳು ಸದ್ಯ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ ಇದರಿಂದಾಗಿ ಮುಂದಿನ ಚುನಾವಣೆ ನಡೆದು ಹೊಸ ಸರ್ಕಾರ ಬರುವವರೆಗೂ ಜನಸಾಮಾನ್ಯರು ಜಾತಕಪಕ್ಷಿಯಂತೆ ಕಾಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಪುವಿಗೆ ಬಿಜೆಪಿ ಶಾಸಕ ಆಡಳಿತ ಬಂದರೆ ಪ್ರಾಧಿಕಾರದ ಕಾನೂನು ತೊಡಕು ಮತ್ತು ಮಾಸ್ಟರ್ ಪ್ಲ್ಯಾನ್ ನಡೆಸಿ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನೀಡಿದ್ದ ಭರವಸೆ ಸದ್ಯ ಸುಳ್ಳಾಗಿದೆ ಮುಂದಿನ ಚುನಾವಣೆ ನಡೆದು ಹೊಸ ಶಾಸಕರು ಬರುವವರೆಗೆ ಈ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಸದ್ಯ ಕಾಣುತ್ತಿಲ್ಲ.

ಮಾಜಿ ಸಚಿವ ವಿನಯ ಕುಮಾರ್ ಸೊರಕೆಯ ಅವಧಿಯಲ್ಲಿ ಕಾಪುವಿಗೆ ಅಭಿವೃದ್ದಿಯ ದೃಷ್ಟಿಯಿಂದ ಜಾರಿಗೆ ಬಂದು ಹತ್ತಾರು ಸಾರ್ವಜನಿಕ ಕೆರೆಗಳು -ಇಂಟರ್ಲಾಕ್ – ಕಾಮಗಾರಿಗಳು ನಡೆದಿದ್ದವು ಅದೇ ಸಮಯದಲ್ಲಿ ಚುನಾವಣೆ ಘೋಷಣೆಯಾದ ಪರಿಣಾಮ ಪ್ರಾಧಿಕಾರದಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ ಬಿಜೆಪಿ ಶಾಸಕರಿ ಗೆದ್ದು ಬಂದ ಕೂಡಲೇ ಪ್ರಾಧಿಕಾರ ರದ್ದುಗೊಳಿಸುವುದಾಗಿ ಡಂಗುರ ಸಾರಿಸಿ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಕೈವಶ ಮಾಡಿಕೊಂಡು ೨೦೨೩ ನೇ ಸಾಲಿಗೆ ಐದು ವರ್ಷವಾದರೂ ಇದುವರೆಗೆ ಒಂದು ಪೈಸೆಯ ಹೊಸ ಬೆಳವಣಿಗೆ ಕಂಡುಬಂದಿಲ್ಲ ಮತ್ತು ಪ್ರಾಧಿಕಾರದಿಂದ ಹೊಸ ಯೋಜನೆಗಳು ಜಾರಿಗೆ ಬಾರದೇ ಹಿಂದಿನಿಗಿಂತ ಜಾಸ್ತಿ ಸಮಸ್ಯೆಗಳು ಉಧ್ಬವಗೊಂಡಿದೆ.

ಕಳೆದು ಐದು ವರ್ಷದಲ್ಲಿ ಮಾಸ್ಟರ್ ಪ್ಲ್ಯಾನ್ ‍ಝಡ್.ಆರ್.ಆರ್ ಆಗದ ಪರಿಣಾಮವಾಗಿ ಸಾಮಾನ್ಯ ಜನರ ಸಮಸ್ಯೆಗೆ ಮುಕ್ತಿ ದೊರಕದೆ ಪ್ರತಿದಿನ ಬಿಜೆಪಿ ಶಾಸಕರ ಸುಳ್ಳು ಭರವಸೆಗೆ ಹಿಡಿಶಾಪ ಹಾಕುವಂತಾಗಿದೆ.ಈ ಪ್ರಾಧಿಕಾರದಿಂದಾಗಿ ಕಾಪು ಪುರಸಭೆಯ ಸುತ್ತಲಿನ ಪಂಚಾಯತ್ನ ಗ್ರಾಮಸ್ಥರು ಕೂಡ ಬಲಿಯಾಗುತ್ತಿದ್ದು ಆದರೇ ಅಲ್ಲಿನ ಅಧಿಕಾರ ಶಾಹಿ ಪಕ್ಷಗಳು ತಮ್ಮದೇ ಪಕ್ಷದ ಶಾಸಕರ ಪರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಪರಿಣಾಮವಾಗಿ ತಮ್ಮೂರಿನ ಗ್ರಾಮಸ್ಥರನ್ನು ಪ್ರಾಧಿಕಾರದ ಕೂಪದೊಳಗೆ ದೂಡುವ ಪ್ರಯತ್ನ ನಡೆಸುತ್ತಿರುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ವಿಪರ್ಯಾಸವಾಗಿದೆ.

ನಗರಾಭಿವೃದ್ದಿ ಪ್ರಾಧಿಕಾರ ಪೆಡಂಭೂತ ಎಂದು ಸಾರಿ ಸಾರಿ ಹೇಳುತ್ತಿದ್ದ ಬಿಜೆಪಿ ಶಾಸಕ ಲಾಲಾಜಿ ಆರ್ ಮೆಂಡನ್ ಗೆ ಇವತ್ತಿನವರೆಗೂ ಸಿಬ್ಬಂಧಿ ಕೊರತೆ ನೀಗಿಸಲು ಸಾಧ್ಯವಾಗಿಲ್ಲ ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಅಭಿವೃದ್ದಿ ಕಾಣಬೇಕಾಗಿದ್ದ ಕಾಪು ಇದೀಗ ಪ್ರಾಧಿಕಾರದ ಸಮಸ್ಯೆಯಿಂದ ನಲುಗುತ್ತಿದೆ ಸದ್ಯ ಮುಂದಿನ ಚುನಾವಣೆ ನಡೆಯುವವರೆಗೂ ಈ ಸಮಸ್ಯೆಗಳು ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಯಾವುದೇ ಬೆಳವಣಿಗೆಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ.

https://www.youtube.com/@vishwanews24

Join our Whatsapp group by clicking the below link 👇👇

https://chat.whatsapp.com/BflK0tvHXPi6Sm8xRHrT1F

 

Vishwa News 24

Recent Posts

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

1 hour ago

ಹಜ್ ಯಾತ್ರೆ – 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ – vishwanews24

ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…

2 hours ago

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  – vishwanews24

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

2 hours ago

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…

2 hours ago

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

2 hours ago

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? ಕ್ಯಾಲಿಫೋರ್ನಿಯಾ :…

3 hours ago