ಮಂಗಳೂರು/ಉಡುಪಿ : ಐಷಾರಾಮಿ ಕಾರು ನೋಂದಣಿಯ ವೇಳೆ ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ, ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮತ್ತು ಉಡುಪಿ ಆರ್.ಟಿ.ಓ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಆರ್.ಟಿ.ಓ. ಕಚೇರಿಯಲ್ಲಿ ತೆರಿಗೆ ಮೊತ್ತವನ್ನು ಕಡಿಮೆ ಮಾಡಿ ಒಂದು ಬಿಎಂಡಬ್ಲ್ಯು ಕಾರನ್ನು ನೋಂದಣಿ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 85 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದೆ.
ವಾಹನದ ನೋಂದಣಿಗೆ ಸಂಬಂಧಿಸಿದ ಕೆಲವೊಂದು ಪ್ರಕ್ರಿಯೆಗಳು ಮಂಗಳೂರು ಆರ್.ಟಿ.ಓ. ಕಚೇರಿಯಲ್ಲೂ ನಡೆದಿರುವ ಕಾರಣ, ಲೋಕಾಯುಕ್ತ ಅಧಿಕಾರಿಗಳು ಎರಡೂ ಕಡೆಗಳ ಕಡತಗಳನ್ನು ಪರಿಶೀಲಿಸಿದ್ದಾರೆ.
ಪರಿಶೀಲನೆಯ ವೇಳೆ ಹಲವಾರು ವಿವರಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು. ಅಲ್ಲಿಂದ ಬರುವ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರ ಚಂದ್ರ ಅವರು ತಿಳಿಸಿದ್ದಾರೆ.
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…