Featured

ಒಂದು ಬಾರಿ ಭೇಟಿ ನೀಡಿ ಕಾಶಿನಾಥನ (ಎಲ್ಲೂರು ಉಂಡಾಯಿ ಉಲ್ಲಾಯನ )ಸನ್ನಿಧಿಗೆ – ಮಹತೋಭಾರ ಶ್ರೀ ವಿಶ್ವೇಶ್ವರ ಕ್ಷೇತ್ರ, ಎಲ್ಲೂರು -Vishwanews24

ಮಹತೋಭಾರ ಶ್ರೀ ವಿಶ್ವೇಶ್ವರ ಕ್ಷೇತ್ರ, ಎಲ್ಲೂರು ಉಡುಪಿ ತಾಲೂಕಿನ ಉಚ್ಚಿಲದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೂರ್ವಕ್ಕೆ ತಿರುವಿ ,ಹಚ್ಚ ಹಸಿರಾಗಿ, ಬಾಗಿ ತಲೆಸವರುವಂತಹ ಗಿಡ ಬಳ್ಳಿಗಳಿಂದ ಕೂಡಿದ ,ಸ್ವಲ್ಪ ಇಕ್ಕಟ್ಟಾದ ಡಾಮರುರಸ್ತೆಯನ್ನು ನಾಲ್ಕು ಕಿಲೋ ಮೀಟರ್ನಷ್ಟು ದೂರ ಕ್ರಮಿಸಿದರೆ ಸಿಗುವ ಪುಟ್ಟ ಊರೇ ನಗು ಮೊಗವ ,ವಿಶಾಲ ಹೃದಯಿಗಳ ಊರು ” ಎಲ್ಲೂರು “ ಕಾಶಿನಾಥ, ಜಗದೊಡೆಯನ ದಿವ್ಯ ಸನ್ನಿಧಿ ಇರುವ ಎಲ್ಲೂರನ್ನು ”ವಿಶ್ವೇಶ್ವರ ಕ್ಷೇತ್ರ ” ಅಂದರೂ ತಪ್ಪೆನಿಲ್ಲಾ .ಈ ಜಗದದೊಡೆಯನು ಎಲ್ಲೂರರಿಗೆ “ಉಂಡಾಯಿ ಉಲ್ಲಾಯೇ ” ಅಂದರೆ “ಸ್ವಯಂ ಉದ್ಭವಿಸಿದ ಒಡೆಯ ”..

ಎಲ್ಲೂರು ಎಂಬ ಪುಟ್ಟ ಗ್ರಾಮ ರಾಷ್ಟೀಯ ಹೆದ್ದಾರಿ -17- ಉಚ್ಚಿಲ ದಿಂದ ಸುಮಾರು 4-5 ಕಿಲೋಮಿಟೆರ್ ಗಳಷ್ಟು ಪೂರ್ವಕ್ಕೆ ಚಲಿಸಿದರೆ ಸಿಗುತ್ತೆ , ಎಲ್ಲೂರು ನಲ್ಲಿರುವ “ವಿಶ್ವೇಶ್ವರ ಕ್ಷೇತ್ರ “ತುಂಬ ಪ್ರಸಿದ್ದಿಯಾದದ್ದು, ತುಳುವಿನಲ್ಲಿ .”ಉಂಡಾಯಿ ಉಲ್ಲಾಯೇ ” ಅಂತ ಹೇಳುತ್ತೇವೆ , ಈ ದೇವಳಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ , ಕುಂದ ಹೆಗ್ಗಡೆ ಎಂಬ ಪ್ರಾಂತ್ಯ ಅರಸ ರಿಂದ ಪೂಜಿಸಲ್ಪಡುತ್ತಿದ್ದ ಒಂಬತ್ತು ಮಾಗಣೆಗಳ (ಕುತ್ಯಾರು ,ನಂದಿಕೂರು , ಅಡ್ವೆ,ಉಳ್ಳೂರು ,ಕೊಳಚೂರು ,ಕುಂಜೂರು,ಕಳತ್ತೂರು ,ಪಾದೂರು ,ಬೆಳಪು ,) ಈ ಒಡೆಯ ,ಮೂಲತಃ ಒಲಿದದ್ದು ಪರಿಶಿಷ್ಟ ಗುಂಪಿಗೆ ಸೇರಿದ ಮಹಿಳೆಗೆ ..

ಕಳೆದೆರೆಡು ವರ್ಷದ ಹಿಂದೆ ಪೂರ್ಣ ಜಿರ್ಣೋದ್ದಾರ ವಾದ ದೇವಳದ ಸೌಂದರ್ಯ ಹೇಗೆ ಅಂದರೆ ಯಾವೂದೇ ಪುರಾತನ ದೇವಳಕ್ಕೆ ಕಡಿಮೆಯಿಲ್ಲ ,ಇಲ್ಲಿಯ ಗೋಪುರ ,ಮಂಟಪ ,ಗರ್ಭಗುಡಿ ಯಲ್ಲಿ .ಬೇಳೂರು ಹಳೆಬೀಡಿನಂತಹ ಶಿಲ್ಪ ಕಲೆಗಳು ಮೂಡಿವೆ , ಗರ್ಭಗುಡಿಯ ಸುತ್ತ ಹಿಂದಿನ ಇತಿಹಾಸ ಮರುಕಳಿಸುವಂತಹ .ಶಿಲೆಯ ಕೆತ್ತನೆಗಳು , ಮರದ ಒಂದೊಂದು ಕೆತ್ತನೆಗಳು ,ನೈಜ ಚಿತ್ರಣ ದಂತೆ ಇದೆ . ಒಂದು ಬಾರಿ ದೇವಳಕ್ಕೆ ಹೊಕ್ಕರೆ ಸಂತೋಷ ಬಿಡಿ ,ನಿಮಗೆ ಹೊರಗೆ ಬರಲಿಕ್ಕೆ ಮನಸಾಗಲ್ಲ ,ಅಷ್ಟೊಂದು ನಯನ ಮನೋಹರ ದೇವಳಕ್ಕೆ ಒಮ್ಮೆ ಭೇಟಿ ನೀಡಿ ನಿಮಗೆ ಅನ್ನಿಸುತ್ತೆ..

ಸ್ಥಳ ಪುರಾಣ:ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ವೃದ್ದ ಮಹಿಳೆಗೆ ಗೋಚರಿಸಿದ್ದು. ಮಹಿಳೆ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ. ವಿಷಯ ತಿಳಿದ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು. ಕುಂದ ಹೆಗ್ಗಡೆ ಅರಸು ಮನೆತನದ ಭೂರಿ ಕೀರ್ತಿ ಎಂಬ ಅರಸನು ಸಂತಾನ ಅಪೇಕ್ಷೆಯಿಂದ ಮತ್ತು ತನ್ನ ರಾಜ್ಯದಲ್ಲಿ ದೇವಾಲಯವಿಲ್ಲವೆಂಬ ಕಾರಣಕ್ಕೆ ಕಾಶಿಗೆ ಹೋಗಿ ತಪಸ್ಸನ್ನು ಆಚರಿಸಿ ದೇವರನ್ನು ಕರೆತಂದನೆಂದು ಕೂಡ ಇತಿಹಾಸ ಪುಟದಲ್ಲಿ ಗುರುತಿಸಲ್ಪಟ್ಟಿದ್ದಾನೆ. ಅರಸು ತಪಸ್ಸನ್ನು ಆಚರಿಸಿದರೂ ಮಹಾದೇವ ಮೊದಲು ಗೋಚರಿಸಿದ್ದು ಮಣ್ಣಿನಮಗಳಿಗೆ, ಆಕೆಯಿಂದ “ಎಲ್ಲು” ಎಂದು ಮೊದಲು ಕರೆಯಲ್ಪಟ್ಟಿತು. ಅಂದಿನಿಂದ ಆಕೆಯ ನೆನಪಿಗಾಗಿ ಕ್ಷೇತ್ರಕ್ಕೆ ಎಲ್ಲೂರು ಎಂದಾಯಿತು.

ಎಳನೀರು ಸೇವೆ ವಿಶೇಷ:

ಇಲ್ಲಿಗೆ ಭೇಟಿ ನೀಡುವಾಗ ನೀವು ಬೇರೇನೂ ಕೊಂಡೊಯ್ಯುದು ಬೇಡ ..ಕೇವಲ ಒಂದು ಸಿಯಾಳಗಳು (ಎಳೆನೀರು ) ಮತ್ತು ಒಂದು ಕೊಂಡೆ ದೀಪದ ಎಣ್ಣೆ ಕೊಂಡೊಯ್ದೆರೆ ಸಾಕು , ..ಅದೇ ಎಲ್ಲೂರು ಒಡೆಯನ ಬಯಕೆ , ಇಲ್ಲಿಯ ದೇವಳದ ಇನ್ನ್ದೊಂದು ವಿಶೇಷ ಅಂದರೆ ದೇವಳ ಅಸುಪಾಸುವಿನ ಅಂಗಡಿಗಳಲ್ಲಿ ಸಿಯಾಳ ವನ್ನು (ಎಳೆನೀರು ) ಕುಡಿಯಲೆಂದು ಕೊಡುವುದಿಲ್ಲ ,ಅದು ಕೇವಲ ಶಿವನ ಅಭಿಷೆಕಕ್ಕಾಗಿ , ಹಗಲಿರಲಿ ,ಇರುಳಿರಲಿ ,ಅಂಗಡಿಯ ಹೊರಗೆ ಉಪ್ಪಿವಿನ ಚೀಲ ಹೇಗೆ ಹೊರ ಇರುತ್ತೋ ಹಾಗೆ ..ಸಾವಿರಾರು ಸಿಯಾಳ(ಎಳೆನೀರು ) ಗಳು ಹೊರಗೆ ಇರುತ್ತೆ .ಇದೇ ಎಲ್ಲೂರಿನ ವಿಶೇಷ …….

ಎಲ್ಲೂರು ಸೀಮೆ ವ್ಯಾಪ್ತಿಯಲ್ಲಿ ನಂದಿಕೂರು, ಕುಂಜೂರು, ಕಳತ್ತೂರುಗಳಲ್ಲಿ ಅನುಕ್ರಮವಾಗಿ ದುರ್ಗಾಪರಮೇಶ್ವರಿ, ದುರ್ಗಾ ಮತ್ತು ಮಹಾಲಿಂಗೇಶ್ವರ ದೇವಾಲಯಗಳಿವೆ. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ತಮ್ಮ ತೀರ್ಥ ಪ್ರಬಂಧ ಕಥನದಲ್ಲಿ ಕ್ಷೇತ್ರಕ್ಕೆ ಆಗಮಿಸಿ ಐದು ಶ್ಲೋಕಗಳಿಂದ ಎಲ್ಲೂರು ವಿಶ್ವೇಶ್ವರನನ್ನು ಸ್ತುತಿಸಿದ ಉಲ್ಲೇಖವಿದೆ. ಕ್ಷೇತ್ರದಲ್ಲಿ ಎಳನೀರು ಸೇವೆ ಬಹಳ ವಿಶೇಷ. ಎಳ್ಳೆಣ್ಣೆ ಸೇವೆ ನೀಡಿದರೆ ಸಕಲ ಗ್ರಹದೋಷ, ದುಷ್ಟಾರಿಷ್ಟ, ಅಪತ್ತು ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ರೋಗಭಾದೆ, ಬಾಲಗ್ರಹ ನಿವಾರಣೆಗೆ ತುಲಾಭಾರ ಸೇವೆ ಕೂಡ ಸ್ವಾಮಿಗೆ ಅರ್ಪಣೆಯಾಗುತ್ತಿದೆ. ಬಂಟ್ಸ್, ಬ್ರಾಹ್ಮಣ, ಬಿಲ್ಲವ, ಮೊಗವೀರ, ಮಡಿವಾಳ, ದೇವಾಡಿಗ ವಿಶ್ವಕರ್ಮ ಸಮಾಜದವರ ಸಹಭಾಗಿತ್ವ ಕ್ಷೇತ್ರದ ವೈಶಿಷ್ಟ್ಯ. ಇತ್ತೀಚಿಗೆ ಕ್ಷೇತ್ರದ ಜೀರ್ಣೋದ್ದಾರ ಹೆಚ್ಚುಕಮ್ಮಿ ಆರು ಕೋಟಿ ರುಪಾಯಿ ವೆಚ್ಚದಲ್ಲಿ 2009 ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆದಿತ್ತು.

ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ “ಮಹಾತೊಭಾರ ಎಲ್ಲೂರು ಶ್ರೀವಿಶ್ವೇಶ್ವರ ದೇವಾಲಯ” ಕೂಡ ಒಂದು. ಎಲ್ಲೂರಿನ ಮೂಲಸ್ಥಾನ ಶ್ರೀ ವಿಶ್ವನಾಥ ಅಥವಾ ಶ್ರೀವಿಶ್ವೇಶ್ವರ ಸನ್ನಿಧಾನವು ಸ್ವಯಂಭು ಸನ್ನಿಧಿ ಎನ್ನುವುದು ಪ್ರತೀತಿ. ಅಪೂರ್ವ ವಾಸ್ತು ವಿನ್ಯಾಸದ ಮತ್ತು ಸರಳ ರೂಪದಲ್ಲಿರುವ ದೇವರು ಕಾಶಿಯಿಂದ ಬಂದವರೆಂದು ನಂಬಿಕೆ.

ಕ್ಷೇತ್ರದ ವಿಳಾಸ: ಮಹತೋಭಾರ ವಿಶ್ವೇಶ್ವರ ದೇವಾಲಯ, ಎಲ್ಲೂರು ಅಂಚೆ, ತಾಲೂಕು ಮತ್ತು ಜಿಲ್ಲೆ – ಉಡುಪಿ ದೂ. ಸ. 0820 -2550365

ಮಾರ್ಗ :-ಉಡುಪಿಯಿಂದ, ರಾ.ಹೆ 17 ರಲ್ಲಿ ಬಂದು ಕಟಪಾಡಿ, ಕಾಪು, ಉಚ್ಚಿಲ ಬಳಿ ಎಡಕ್ಕೆ ತಿರುಗಬೇಕು(ಮದರಂಗಡಿಗೆ ಹೋಗುವ ರಸ್ತೆ)
ಮಂಗಳೂರಿನಿಂದ, ರಾ.ಹೆ 17 ರಲ್ಲಿ ಬಂದು ಸುರತ್ಕಲ್ , ಮೂಲ್ಕಿ, ಪಡುಬಿದ್ರೆ , ಉಚ್ಚಿಲ ಬಳಿ ಬಲಕ್ಕೆ ತಿರುಗಬೇಕು (ಮುದರಂಗಡಿಗೆ ಹೋಗುವ ರಸ್ತೆ)

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago