Featured

ಒಂದು ವರ್ಷದ ಬಳಿಕ ಬ್ಯಾಂಕ್ ಲಾಕರ್ ತೆರೆದ ಮಹಿಳೆಗೆ ಶಾಕ್ – ಗೆದ್ದಲು ಪಾಲಾಯ್ತು ಮಗಳ ಮದುವೆಗೆಂದು ಕೂಡಿಟ್ಟ 18 ಲಕ್ಷ ರೂ.  Vishwanews24

ಒಂದು ವರ್ಷದ ಬಳಿಕ ಬ್ಯಾಂಕ್ ಲಾಕರ್ ತೆರೆದ ಮಹಿಳೆಗೆ ಶಾಕ್ ..

ಗೆದ್ದಲು ಪಾಲಾಯ್ತು ಮಗಳ ಮದುವೆಗೆಂದು ಕೂಡಿಟ್ಟ 18 ಲಕ್ಷ ರೂ.

ಲಕ್ನೋ: ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ತಾಯಿಯೊಬ್ಬಳು ಮಗಳ ಮದುವೆಗೆಂದು ಜೋಪಾನವಾಗಿ ಕೂಡಿಟ್ಟ 18 ಲಕ್ಷ ರೂ. ಹಣವು ಬ್ಯಾಂಕ್‌ನ ಲಾಕರ್‌ನಲ್ಲಿ ಗೆದ್ದಲು ಹಿಡಿದು ನಾಶವಾಗಿರುವ ಘಟನೆ ವರದಿಯಾಗಿದೆ.

ಮೊರಾದಾಬಾದ್ ನಿವಾಸಿ ಅಲ್ಕಾ ಪಾಠಕ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಂಕ್ ಆಫ್ ಬರೋಡಾದ ಆಶಿಯಾನಾ ಶಾಖೆಯಲ್ಲಿ 18 ಲಕ್ಷ ರೂಪಾಯಿ ಹಣವನ್ನು ಲಾಕರ್‌ನಲ್ಲಿ ಇರಿಸಿದ್ದರು. ಇತ್ತೀಚೆಗಷ್ಟೇ ಮಹಿಳೆಯನ್ನು ಸಂಪರ್ಕಿಸಿದ ಬ್ಯಾಂಕ್​ ಸಿಬ್ಬಂದಿ ಲಾಕರ್‌ ಒಪ್ಪಂದವನ್ನು ರಿನಿವಲ್​ ಮಾಡಲು ಮತ್ತು ಕೆವೈಸಿ  ಮಾಹಿತಿ ಅಪ್​ಡೇಟ್​ ಮಾಡಲು ಶಾಖೆಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.

ಬ್ಯಾಂಕ್​ಗೆ ಬಂದ ಅಲ್ಕಾ ಪಾಠಕ್​ ತನ್ನ ಲಾಕರ್ ಅನ್ನು ಓಪನ್​ ಮಾಡಿದ್ದಾರೆ. ಆದರೆ ಆಗ ಆಕೆಗೆ ದೊಡ್ಡ ಆಘಾತವಾಗಿದೆ. ಏಕೆಂದರೆ ಮಗಳ ಮದುವೆಗೆಂದು ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದ 18 ಲಕ್ಷ ರೂ. ಮೌಲ್ಯದ ನೋಟುಗಳನ್ನು ಗೆದ್ದಲು ಹುಳುಗಳು ತಿಂದಿದ್ದವು.

ಈ ಘಟನೆಯಿಂದ ಬ್ಯಾಂಕ್ ಅಧಿಕಾರಿಗಳೂ ಬೆಚ್ಚಿಬಿದ್ದಿದ್ದಾರೆ. ಈ ವಿಷಯ ವ್ಯಾಪಕವಾಗಿ ವರದಿಯಾದಾಗ ಮತ್ತು ಮಾಧ್ಯಮಗಳು ಉತ್ತರಕ್ಕಾಗಿ ಅವರನ್ನು ಒತ್ತಾಯಿಸಿದಾಗ ಬ್ಯಾಂಕ್ ಆಫ್ ಬರೋಡಾ ಪ್ರಧಾನ ಕಚೇರಿಗೆ ವರದಿಯನ್ನು ಕಳುಹಿಸಿರುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.

ತನಗಾದ ನಷ್ಟಕ್ಕೆ ಬ್ಯಾಂಕ್‌ನವರೇ ಪರಿಹಾರ ನೀಡಬೇಕೆಂದು ಮಹಿಳೆ ಆಗ್ರಹಿಸಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

1 day ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

1 day ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

1 day ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

1 day ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

1 day ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 day ago