ನವದೆಹಲಿ: ಡೀಸೆಲ್ ಮಾರಾಟಕ್ಕೆ ಕೇಂದ್ರ ಸರ್ಕಾರ ಮಿತಿ ಹೇರಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್ ಡೀಸೆಲ್ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ.
ಇಂಧನ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಮಾರಾಟವನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ.
ವಾಣಿಜ್ಯ, ಕೈಗಾರಿಕಾ ಮತ್ತು ಸಾಂಸ್ಥಿಕ ಗ್ರಾಹಕರು ಇನ್ಮುಂದೆ ರಿಟೇಲ್ ಬಂಕ್‌ಗಳಲ್ಲಿ ಡೀಸೆಲ್ ಖರೀದಿಸುವಂತಿಲ್ಲ. ವಾಣಿಜ್ಯ ಉದ್ದೇಶಕ್ಕೆ ನಿಗದಿಪಡಿಸಿದ ಮಾರಾಟ ಕೇಂದ್ರಗಳಿಂದಲೇ ಇಂಧನ ಖರೀದಿಸಬೇಕು ಎಂದು ಸೂಚಿಸಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಲೀಟರ್‌ಗೆ 95.20 ರೂ.ಗಳಾಗಿದ್ದರೆ, ಬೃಹತ್ ಮಾರಾಟ ಕೇಂದ್ರಗಳಲ್ಲಿ ಈ ಬೆಲೆ 134.50 ರೂ. ಇದೆ. ದರ ಕಡಿಮೆ ಇರುವುದರಿಂದ ಬೃಹತ್ ವಾಹನಗಳ ಗ್ರಾಹಕರು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಹೊಸ ನಿಯಮ ಜಾರಿಗೊಳಿಸಲಾಗಿದೆ.
ರಿಟೇಲ್ ಬಂಕ್‌ಗಳಲ್ಲಿ ಡೀಸೆಲ್ ಅನ್ನು ವಾಹನದ ಇಂಧನ ಟ್ಯಾಂಕ್‌ಗೇ ತುಂಬಿಸಿ ಮಾರಬೇಕು. ಕ್ಯಾನ್, ಬ್ಯಾರೆಲ್‌ಗಳಲ್ಲಿ ತುಂಬಿಸಿ ಮಾರುವಂತಿಲ್ಲ. ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಿತಾ ಸಂಸ್ಥೆ ಅನುಮತಿಸಿದ ಕ್ಯಾನ್‌ನಲ್ಲಿ ಡೀಸೆಲ್ ಖರೀದಿಸಬಹುದು ಎಂದು ಸೂಚನೆ ನೀಡಿದೆ.
ಮಧ್ಯಪ್ರಾಚ್ಯ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾಗಿದೆ. ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ, ರಿಟೇಲ್ ಬಂಕ್‌ಗಳಲ್ಲಿ ಇಂಧನ ಕೊರತೆ ಆಗದಂತೆ ನೋಡಿಕೊಳ್ಳಲು ಮಿತಿ ಕ್ರಮ ಅನುಸರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…