ಬೆಂಗಳೂರು: ಟೆಸ್ಟ್ ರೈಡ್ ನೆಪದಲ್ಲಿ ದುಬಾರಿ ಬೆಲೆಯ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮಂಜುನಾಥ ಹೆಗಡೆ (20) ಎಂಬಾತನನ್ನು ಬಂಧಿಸಿರುವ ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು, ₹ 12 ಲಕ್ಷ ಮೌಲ್ಯದ ಬುಲೆಟ್ ಹಾಗೂ ಐದು ಕೆಟಿಎಂ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಸುಂಕದಕಟ್ಟೆ ನಿವಾಸಿಯಾದ ಈತ, ಪ್ರತಿದಿನ ಒಎಲ್‌ಎಕ್ಸ್‌ನಲ್ಲಿ ಜಾಹೀರಾತುಗಳನ್ನು ನೋಡುತ್ತಿದ್ದ. ಕೆಟಿಎಂ ಅಥವಾ ಬುಲೆಟ್ ಬೈಕ್ ಮಾರಾಟಕ್ಕಿದ್ದರೆ, ಕೂಡಲೇ ಅದರ ಮಾಲೀಕರಿಗೆ ಕರೆ ಮಾಡಿ ತಾನು ಖರೀದಿ ಮಾಡುವುದಾಗಿ ಹೇಳುತ್ತಿದ್ದ. ಬಳಿಕ ಬೈಕ್ ನೋಡಬೇಕೆಂದು ಅವರನ್ನು ಕರೆಸಿಕೊಳ್ಳುತ್ತಿದ್ದ.
‘ಒಮ್ಮೆ ಓಡಿಸಿ ನೋಡುತ್ತೇನೆ’ ಎಂದು ನಂಬಿಸಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಮಂಜುನಾಥ, ವಾಪಸ್ ಬರುತ್ತಲೇ ಇರಲಿಲ್ಲ. ಇದೇ ರೀತಿ ಹುಳಿಮಾವು, ಬನ್ನೇರುಘಟ್ಟ, ಆನೇಕಲ್, ಪರಪ್ಪನ ಅಗ್ರಹಾರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆಗಳ ವ್ಯಾಪ್ತಿಯಿಂದ ಆರು ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿ, ಕಡಿಮೆ ಬೆಲೆಗೆ ಅವುಗಳನ್ನು ಮಾರಾಟ ಮಾಡಿ ಗೋವಾದ ಕ್ಯಾಸಿನೋಗೆ ಹೋಗಿ ಮೋಜು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
1 ಮೊಬೈಲ್ 40 ಸಿಮ್: ‘ಪೊಲೀಸರು ಮೊಬೈಲ್ ಸಂಖ್ಯೆಯಿಂದ ತನ್ನನ್ನು ಪತ್ತೆ ಮಾಡಬಹುದೆಂದು ಆತ 40 ಸಿಮ್‌ಗಳನ್ನು ಇಟ್ಟುಕೊಂಡಿದ್ದ. ಒಬ್ಬರಿಗೆ ಕರೆ ಮಾಡಿ ಬೈಕ್ ಕದ್ದರೆ, ಮತ್ತೆ ಆ ಸಿಮ್ ಬಳಸುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.
ಟೆಸ್ಟ್ ರೈಡ್ ನೆಪದಲ್ಲೇ ವಾಹನ ಕದಿಯುವ ಹಳೆ ಆರೋಪಿಗಳ ಫೋಟೊಗಳನ್ನು ದೂರುದಾರರಿಗೆ ತೋರಿಸಿದಾಗ, ಒಬ್ಬರು ಮಂಜುನಾಥನನ್ನು ಗುರುತಿಸಿದರು. ಎಂಟು ತಿಂಗಳ ಹಿಂದೆ ಕೆ.ಜಿ.ಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಈತ ಒಂದೂವರೆ ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
‘ಆರೋಪಿ ಯಾವ್ಯಾವ ಸಂಖ್ಯೆಗಳಿಂದ ದೂರುದಾರರಿಗೆ ಕರೆ ಮಾಡಿದ್ದನೋ, ಆ ಸಂಖ್ಯೆಗಳನ್ನು ಪಡೆದು ತನಿಖೆ ಪ್ರಾರಂಭಿಸಿದೆವು. 40ರಲ್ಲಿ ಒಂದು ಸಿಮ್ ಮಾತ್ರ ಚಾಲ್ತಿಯಲ್ಲಿತ್ತು. ಅದರ ಜಾಡು ಹಿಡಿದು ಹೊರಟಾಗ ಯಲಹಂಕದಲ್ಲಿ ಆರೋಪಿ ಸಿಕ್ಕಿಬಿದ್ದ’ ಎಂದು ಮಾಹಿತಿ ನೀಡಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…