Featured

ಓಮಾನ್ ಮಸ್ಕತ್‌ನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಘಟಕ ಉದ್ಘಾಟನೆ – vishwanews24

ಓಮಾನ್ ಮಸ್ಕತ್‌ನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಘಟಕ ಉದ್ಘಾಟನೆ

ಮಸ್ಕತ್, ಓಮಾನ್: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್ ಓಮಾನ್ ಘಟಕವನ್ನು ಸನ್ಮಾನ್ಯ ಶ್ರೀ ಶಿವಾನಂದ ಕೋಟ್ಯಾನ್ ಕಟಪಾಡಿ ಇವರ ಅಧ್ಯಕ್ಷತೆಯಲ್ಲಿ ಮಸ್ಕತ್ತಿನ ಸ್ಟಾರ್ ಆಫ್ ಕೊಚ್ಚಿನ್ ಸಭಾಂಗಣದಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು.

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷರಾದ ಸನ್ಮಾನ್ಯ ಡಾ. ಹಿ. ಚಿ. ಬೋರಲಿಂಗಯ್ಯ ಅವರು ಓಮಾನ್ ದೇಶದ ಗಣ್ಯರು‌, ಕನಾರ್ಟಕ ಗಡಿ ಪ್ರಾಧಿಕಾರದ ಸದಸ್ಯರಾದ ಶ್ರೀ ಎ.ಆರ್ ಸುಬ್ಬಯ್ಯ ಕಟ್ಟೆ ಕಾಸರಗೋಡು ಗಡಿನಾಡು ಪ್ರಾಧಿಕಾರದ ಸದಸ್ಯ ಶ್ರೀ ಝೆಡ್ ಎ ಕೆಯ್ಯರ್ ಉಪಸ್ಥಿತಿಯಲ್ಲಿ ಘಟಕವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕತ್ತಿನ ಜಾನಪದ ಅಸಕ್ತರು, ಸ್ಥಳೀಯ ಕಲಾವಿದರು, ಗಾಯಕರಿಂದ ಹಲವು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಓಮಾನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಸಂಗಟ್ಟಿ, ಶ್ರೀ ಎಸ್.ಕೆ. ಪೂಜಾರಿ, ಶ್ರೀ ಶಶಿಧರ ಶೆಟ್ಟಿ ಮಲ್ಲಾರ್ ಮತ್ತು ವಿವಿಧ ಸಂಘ ಮತ್ತು ಕೂಟಗಳ ಪ್ರಮುಖರು ಹಾಗೂ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಬೋರಲಿಂಗಯ್ಯ ನವರು ಕರ್ನಾಟಕದ ವೈವಿಧ್ಯಮಯ ಜಾನಪದ ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು. ಎಚ್.ಎಲ್. ನಾಗೇಗೌಡರ ನೇತೃತ್ವದಲ್ಲಿ ಸ್ಥಾಪಿತವಾದ ಯೂನೆಸ್ಕೋ ಮಾನ್ಯತೆ ಪಡೆದಿರುವ ಜಾನಪದ ಲೋಕ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಸ್ಥಳೀಯ ಅನಿವಾಸಿಗಳು ತಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ನಮ್ಮ ನಾಡು ನುಡಿಯ ಬಗ್ಗೆ ವಾರ್ಷಿಕವಾಗಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳಿಂದ ಇಲ್ಲಿ ಘಟಕದ ಅವಶ್ಯಕತೆ ಇದೆ ಎಂದು ಮನಗಂಡ ರಾಜ್ಯದಿಂದ ಅಗಮಿಸಿದ ಅತಿಥಿಗಳ ಸೂಚನೆ ಮತ್ತು ಮಾರ್ಗದರ್ಶನದಲ್ಲಿ ಫಟಕ ಸ್ಥಾಪಿಸಲಾಯಿತು ಎಂದು ನೂತನ ಘಟಕದ ಅದ್ಯಕ್ಷರಾದ ಶಿವಾನಂದ ಕೋಟ್ಯಾನ್ ವಿವರಿಸಿದರು. .

ಮಸ್ಕತ್ ನ ಸಮಾಜಿಕ ಸಹಕಾರ ನೀಡುವ ಶ್ರೀ ಗಣೇಶ್ ಶೆಟ್ಟಿ ಮತ್ತು ಸತೀಶ್ ಪೂಜಾರಿ ಬರ್ಕ ಹಾಗೂ ಸ್ಕೂಲ್ ಲೀಡರ್ ಚಲನಚಿತ್ರದ ನಿರ್ಮಾಪಕರಾದ ಕಟಪಾಡಿ ಶ್ರೀ ಸತ್ಯೇಂದ್ರ ಪೈ , ನಿರ್ದೇಶಕ ಶ್ರೀ ರಝಾಕ್ ಪೂತ್ತೂರು, ಪತ್ರಕರ್ತ ಶ್ರೀ ಪ್ರಕಾಶ್ ಸುವರ್ಣ, ಮೂರು ಮುತ್ತು ಕಲಾವಿದ ಶ್ರೀ ನಾಗೇಶ್ ಕಾಮತ್, ಛಾಯಾಗ್ರಾಹಕ ಶ್ರೀ ಮೋಹನ್ ಪಡ್ರೆ ,ಯುವ ಜಾದುಗಾರ ಪ್ರಥಮ್ ಕಾಮತ್ ಇವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮಾಸ್ಟರ್ ಅಯುಷ್ ಮರಾಠೆ ಹಾಡು ಮತ್ತು ಮಾಸ್ಟರ್ ಹರ್ಪಿಲ್ ಅಂಚನ್ ನವರ ಜಾನಪದ ಕಥೆಯು ಮನೂರಂಜನೆಯಾಗಿ ಮೂಡಿ ಬಂದಿತು.
ಕಾರ್ಯಕ್ರಮದಲ್ಲಿ ಫಟಕದ ಕಾರ್ಯದರ್ಶಿ ಶ್ರೀಧರ್ ಶೆಟ್ಟಿ ವಂದಿಸಿದರು, ಗೌರವ ಸಲಹೆಗಾರದ ಶ್ರೀ ಯುವರಾಜ್ ಸಾಲ್ಯಾನ್, ಸುರೇಂದ್ರ ಅಮಿನ್, ಜೂಯಿಸನ್, ಅನಿಲ್ ಪೂತ್ತೂರು, ಬಾಲಕೃಷ್ಣ ಕೋಟ್ಯಾನ್ ಕಾಪು, ದಿನಕರ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಅಕ್ಷಯ ಮೂಡಬಿದ್ರೆಯವರು ಕಾರ್ಯಕ್ರಮ ನಿರೂಪಿಸಿದರು.

Vishwa News 24

Recent Posts

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಮತ್ತೆ ಆರಂಭ ; ಗುರುತಿನ ಚೀಟಿ, ಶುಲ್ಕ ಕಡ್ಡಾಯ – vishwanews24

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಆರಂಭ - ಈ ನಿಯಮ ಪಾಲನೆ ಕಡ್ಡಾಯ ಅಧಿಕೃತ ವೆಬ್‌ಸೈಟ್‌ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು…

2 minutes ago

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ – vishwanews24

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ ಉಡುಪಿ: ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ…

23 minutes ago

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

19 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

19 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

19 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

22 hours ago