Featured

ಓಮಿಕ್ರಾನ್ ಭೀತಿ : ಕೇರಳದಲ್ಲಿ ಡಿ. 30 ರಿಂದ ಜ.2ರವರೆಗೆ ನೈಟ್ ಕರ್ಫ್ಯೂ – Vishwanews24

ಓಮಿಕ್ರಾನ್ ಭೀತಿ : ಕೇರಳದಲ್ಲಿ ಡಿ. 30 ರಿಂದ ಜ.2ರವರೆಗೆ ನೈಟ್ ಕರ್ಫ್ಯೂ – Vishwanews24

ತಿರುವನಂತಪುರಂ: ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಭೀತಿಯಿಂದಾಗಿ ಕೇರಳದಲ್ಲಿ ಡಿಸೆಂಬರ್ 30 ರಿಂದ ಜನವರಿ 2ರವರೆಗೂ ನೈಟ್ ಕರ್ಫ್ಯೂ ವಿಧಿಸಲಾಗಿದೆ.

ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಭೆ ನಡೆಸಿ ಈ ಕುರಿತಂತೆ ಕೇರಳ ಸರ್ಕಾರ ನೈಟ್ ಕರ್ಫ್ಯೂಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಅದರಂತೆ ಡಿಸೆಂಬರ್ 31ರಿಂದ ಬಾರ್‌ಗಳು, ಹೋಟೆಲ್‍ಗಳು, ಕ್ಲಬ್‍ಗಳು ಮತ್ತು ರೆಸ್ಟೋರೆಂಟ್ ಸೇರಿದಂತೆ ಯಾವುದೇ ಅಂಗಡಿಗಳು ರಾತ್ರಿ 10 ಗಂಟೆಯ ಬಳಿಕ ಕಾರ್ಯನಿರ್ವಹಿಸುವಂತಿಲ್ಲ.

ಸಮುದ್ರ, ಶಾಪಿಂಗ್ ಮಾಲ್, ಸಾರ್ವಜನಿಕ ಉದ್ಯಾನವನ ಸೇರಿದಂತೆ ಇತರ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಓಮಿಕ್ರಾನ್ ಭೀತಿಯಿಂದ ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಭಾನುವಾರ ಕೇರಳದಲ್ಲಿ 57 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 1,636 ಕೋವಿಡ್ ಸಕ್ರಿಯ ಪ್ರಕರಣಗಳು ಮತ್ತು 256 ಸಾವು ವರದಿಯಾಗಿದೆ.

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

10 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

11 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

11 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

11 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

12 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

12 hours ago