Featured

ಕಂಚಿನಡ್ಕದ ಮಿಂಚಿನಬಾವಿ ತಗಡು ಚಪ್ಪರ ವಿವಾದ : ಆಕ್ಷೇಪಣೆ ವಾಪಸ್ ಪಡೆದ 2 ಮುಸ್ಲಿಂ ಕುಟುಂಬ – Vishwanews24

ಕಂಚಿನಡ್ಕದ ಮಿಂಚಿನಬಾವಿ ತಗಡು ಚಪ್ಪರ ವಿವಾದ : ಆಕ್ಷೇಪಣೆ ವಾಪಸ್ ಪಡೆದ 2 ಮುಸ್ಲಿಂ ಕುಟುಂಬ – Vishwanews24

ಪಡುಬಿದ್ರಿ: ಮಿಂಚಿನಬಾವಿ ಶ್ರೀ ಕೋಡ್ದಬ್ಬು ಸನ್ನಿಧಾನದ ಎದುರಲ್ಲಿ ಪಂಚಾಯತ್ ರಸ್ತೆಗೆ ತಗಡು ಚಪ್ಪರದ ನಿರ್ಮಾಣ ಪಂಚಾಯತ್‌ಗೇ ಬಿಟ್ಟ ವಿಚಾರವಾಗಿದೆ. ಹಾಗಾಗಿ ಇದಕ್ಕೆ ಸಾನ್ನಿದ್ಧ್ಯದ ಬಳಿಯ ಎರಡು ಮನೆಯವರಾದ ನಾವು ಪಂಚಾಯತ್‌ಗೆ ಈ ಹಿಂದೆ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆದಿದ್ದೇವೆ.

ಇದರಲ್ಲಿ ಮುಸ್ಲಿಂ ಸಮುದಾಯವೆಲ್ಲವನ್ನೂ ಎಳೆದುತರಬೇಡಿ. ಕ್ಷೇತ್ರದ ಬಳಿಯಿದ್ದು 2004 ರಿಂದ ಇಂದಿನವರೆಗೂ ಸೌಹರ್ದತೆಯನ್ನು ಕಾಪಾಡಿಕೊಂಡು ಬಂದವರು ನಾವು ಎಂದು ಮಿಂಚಿನ ಬಾವಿ ಕ್ಷೇತ್ರದ ಬಳಿಯ ನಿವಾಸಿಗಳಾದ ಕಲಂದರ್ ಹಾಗೂ ರೆಹಾನಾ ಹೇಳಿದರು.

ಅವರು ಜೂ. 4ರಂದು ರಸ್ತೆಗೆ ತಗಡು ಚಪ್ಪರ ನಿರ್ಮಾಣದ ಕುರಿತಾಗಿ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆಯುತ್ತಿರುವ ಕುರಿತಾಗಿ ಮನವಿಗಳನ್ನು ಪಡುಬಿದ್ರಿ ಗ್ರಾ. ಪಂ. ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಅವರಿಗಿತ್ತ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾರ್ವಜನಿಕ ಹಿತಾಸಕ್ತಿ, ಮನೆ ಮಕ್ಕಳ ಸುರಕ್ಷತೆ, ವಿಶೇಷವಾಗಿ ಆ ಪ್ರದೇಶದಲ್ಲಿ ಬೀಸುವ ಬಲವಾದ ಗಾಳಿಯ ಒತ್ತಡಗಳನ್ನು ಪರಿಗಣಿಸಿ ಹಾಗೂ ಆ ರಸ್ತೆಯಲ್ಲಿ ಸಾಗುವ ಶಾಲಾ ವಾಹನ, ಘನವಾಹನಗಳನ್ನು ಗಮನದಲ್ಲಿಟ್ಟುಕೊಂಡು ಚಪ್ಪರದ ನಿರ್ಧಾರವನ್ನು ಪಂಚಾಯತ್ ತೆಗೆದುಕೊಳ್ಳಬೇಕಿದೆ ಎಂದೂ ರೆಹಾನಾ ಪ್ರತಿಪಾದಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರು, ಪಡುಬಿದ್ರಿಯಲ್ಲಿ ಈ ಹಿಂದಿನಿಂದಲೂ ಮತೀಯ ಸಾಮರಸ್ಯ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದವರು ನಾವಾಗಿದ್ದೇವೆ. ಚಪ್ಪರದ ಕುರಿತಾಗಿ ಆಕ್ಷೇಪಣೆಗಳನ್ನು ಮಿಂಚಿನಬಾವಿ ಕೋಡ್ದಬ್ಬು ದೈವಸ್ಥಾನದ ಬಳಿಯ ನಿವಾಸಿಗಳಾದ ಕಲಂದರ್ ಹಾಗೂ ರೆಹಾನಾ ವಾಪಾಸು ಪಡೆದಿರುವುದು ಸಂತಸ ತಂದಿದೆ. ಪರಸ್ಪರ ಸಹಮತದಿಂದಲೇ ತಗಡು ಚಪ್ಪರದ ನಿರ್ಮಾಣವಾಗಲಿ. ಡೋರ್ ನಂಬರ್ ಇಲ್ಲವಾದ್ದರಿಂದ ಪಂಚಾಯತ್ ಮೂಲಕ ಯಾವುದೇ ಪರವಾನಿಗೆಯನ್ನು ನೀಡಲಾಗದು ಎಂದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾ. ಪಂ. ಕಾರ್ಯದರ್ಶಿ ರೂಪಲತಾ, ಸದಸ್ಯರಾದ ಸಂದೇಶ್ ಶೆಟ್ಟಿ ಪಾದೆಬೆಟ್ಟು, ಶೋಭಾ ಶೆಟ್ಟಿ ಪಾದೆಬೆಟ್ಟು, ಅಬ್ದುಲ್ ರಜಾಕ್, ನಝೀರ್, ಯೂಸುಫ್ ಕಂಚಿನಡ್ಕ, ಶೆಹನಾಝ್, ಆಸ್ಮಾ, ಆಶಾಬಿ ಮತ್ತಿತರರಿದ್ದರು.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

1 day ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

1 day ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

1 day ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

1 day ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

1 day ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

2 days ago