Featured

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು – vishwanews24

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು

ಜೈಪುರ: ಸ್ಕಾರ್ಪಿಯೋ ಎಸ್‌ಯುವಿ  ಕಾರೊಂದು ಸುಮಾರು 700 ಅಡಿ ಕಂದಕಕ್ಕೆ ಉರುಳಿ ಬಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ  ರಾಯಗಡದ ಅಂಬೆನಾಲಿ ಘಾಟ್ ಬಳಿ ನಡೆದಿದೆ.

ಮಹಾಬಲೇಶ್ವರ ಮತ್ತು ಪೋಲಾದ್‌ಪುರದ ನಡುವೆ ಇರುವ ಅಂಬೆನಾಲಿ ಘಾಟ್‌ ಬಳಿ ದುರಂತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 8 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಾಗೂ ಸ್ಥಳೀಯ ಪೊಲೀಸರು ಶೋಧ ಆರಂಭಿಸಿದ್ದಾರೆ.

ಇದನ್ನೂ ಓದಿ: 

ಅಂಶ್ ಸಮೀರ್ ಚವ್ಹಾಣ್ (19), ರಿತೇಶ್ ರಾಜೇಂದ್ರ ಲೋಖಂಡೆ (22), ಸುಹಾಸ್ ಜಿತೇಂದ್ರ ಲೋಖಂಡೆ (20), ಉತ್ಕರ್ಷ್ ಆನಂದ್ ಶಿಂಗ್ಟೆ (21), ನಿಖಿಲ್ ಅಭಿಮನ್ಯು ಶಿಂಗ್ಟೆ (25), ಮಹೇಶ್ ಅನಿಲ್ ಪವಾರ್ (25), ಆದಿತ್ಯ ಅಶೋಕ್ ಸಾಳುಂಖೆ (21), ರಾಜೇಶ್ ಅಶೋಕ್ ಕಾಟ್ಕರ್ (35) ಮೃತರು. ಬಲಿಪಶುಗಳೆಲ್ಲರೂ ಸತಾರಾ ಜಿಲ್ಲೆಯ ಮೂಲದವರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಸ್ಕಾರ್ಪಿಯೋ ಎಸ್‌ಯುವಿ ಸತಾರಾ ಜಿಲ್ಲೆಯ ಅಸ್ಗಾಂವ್ ಗ್ರಾಮಕ್ಕೆ ಸೇರಿದ ವ್ಯಕ್ತಿಯದ್ದಾಗಿದೆ. ದಪೋಲಿಯಿಂದ ಸತಾರಾಗೆ ಹೋಗುತ್ತಿದ್ದಾಗ ವಾಹನ ಕಮರಿಗೆ ಬಿದ್ದಿದೆ. ಸುಮಾರು 500 ರಿಂದ 700 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಈಗಾಗಲೇ ರಕ್ಷಣಾ ತಂಡಗಳು 2 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಇನ್ನುಳಿದ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 

ರಾಯಗಢ ಮತ್ತು ಸತಾರ ಜಿಲ್ಲೆಗಳ ಗಡಿಯಲ್ಲಿರುವ ಅಂಬೇನಾಲಿ ಘಾಟ್‌ ಅಪಘಾತಗಳ ಹಾಟ್‌ಸ್ಪಾಟ್‌ ಎಂದೇ ಕರೆಯಲಾಗುತ್ತದೆ. ಏಕೆಂದ್ರೆ ಇಲ್ಲಿ ಆಗಾಗ್ಗೆ ಭೀಕರ ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಮೃತರು ಕೊಂಕಣ ಅಥವಾ ಮಹಾಬಲೇಶ್ವರಕ್ಕೆ ಭೇಟಿ ನೀಡಲು ಬಂದಿರಬೇಕು ಶಂಕಿಸಲಾಗಿದೆ. ಸದ್ಯ ರಕ್ಷಣಾ ತಂಡಗಳು ಶೋಧ ನಡೆಸುತ್ತಿದ್ದು, ಮತ್ತೊಂದು ಕಡೆ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.

Vishwa News 24

Recent Posts

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

13 minutes ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

19 minutes ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

34 minutes ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

44 minutes ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

2 hours ago

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ – vishwanews24

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋಗಿ ಸಾವನ್ನಪ್ಪಿದ್ದ 11 ಮಂದಿಯ…

2 hours ago