ಉಡುಪಿ: ಕಂಬಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆ ಮಾಡಿದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ.ತನ್ನ ಚಿಗರೆಯ ಓಟದ ವೈಖರಿಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ, ರಾಕೆಟ್ ಮೋಡ ಅಭಿಮಾನಿಗಳ ಹೃದಯವನ್ನು ಆರ್ದ್ರಗೊಳಿಸಿ ಬಾರದ ಲೋಕಕ್ಕೆ ಹೊರಟಿದ್ದಾನೆ.
ಅಧುನಿಕ ಕಂಬಳಕ್ಕೆ ವಿಶಿಷ್ಟ ಕೊಡುಗೆ ನೀಡದ ನಂದಳಿಕೆ ಶ್ರೀಕಾಂತ್ ಭಟ್ ಅವರ ಪ್ರೀತಿಯ, 20 ವರ್ಷದ ಕಂಬಳ ಕೋಣ ರಾಕೆಟ್ ಮೋಡ ವಯೋ ಸಹಜ ಕಾಯಿಲೆಯಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದಾನೆ. ಕರಾವಳಿಯ ಕಂಬಳ ಪ್ರಿಯರಿಗೆ ದುಃಖ ತಂದಿದೆ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ಈ ರಾಕೆಟ್ ಮೋಡ ಕೋಣದ್ದಾಗಿತ್ತು.
ರಾಕೆಟ್ ಈವರೆಗೆ 100ಕ್ಕೂ ಅಧಿಕ ಪದಕ ಪದೆದಿದ್ದು ಕಂಬಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆ ಮಾಡಿದ ಕೀರ್ತಿ ಪಡೆದಿದ್ದಾನೆ.144 ಮೀ ನ್ನು 13.57 ಸೆಕೆಂಡ್ ನಲ್ಲಿ ಕ್ರಮಿಸುವ ಮೂಲಕ ಕಂಬಳ ಇತಿಹಾಸದಲ್ಲಿ ಇನ್ನು ಅಳಿಸಲಾಗದ ದಾಖಲೆ ಸೃಷ್ಟಿಸಿದ್ದಾನೆ.
ಇದು ಮಾತ್ರವಲ್ಲದೆ, ಕಂಬಳ ಪ್ರಿಯರಿಗೆ ಇದು ಚಿರಪರಿಚಿತ ಕೋಣವಾಗಿತ್ತು. ಕೊಂಡೊಟ್ಟು ಮೋಡ, ರಾಕೆಟ್ ಮೋಡ ಎಂಬ ಹೆಸರಿನಿಂದಲೇ ಕಂಬಳ ಪ್ರಿಯರು ಇದನ್ನು ಕರೆಯುತ್ತಿದ್ದರು. ಪ್ರತಿಷ್ಠಿತ ಕಂಬಳ ಮನೆತನದ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಮನೆಯಲ್ಲಿದ್ದ ಈ ಓಟದ ಸರದಾರ ಬಳಿಕ ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಅವರ ಮನೆಯಲ್ಲಿತ್ತು.ನಂತರ ಹಲವು ದಿನಗಳಿಂದ ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯಲ್ಲಿತ್ತು.
ಕಂಬಳ ಕೋಣದ ಅಂತ್ಯ ಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ಮಾಡಿದ್ದು ವಿಶೇಷ ಮತ್ತು ಈ ವೇಳೆ ನೂರಾರು ಜನ ಕಂಬಳ ಪ್ರಿಯರು , ಕಂಬಳ ಯಜಮಾನರು, ಊರವರ ದಂಡೇ ಶ್ರೀಕಾಂತ್ ಭಟ್ ಅವರ ಮನೆಗೆ ಆಗಮಿಸಿ ರಾಕೆಟ್ ಮೋಡದ ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಕಂಬನಿ ಮಿಡಿದರು.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…