ಕಟಪಾಡಿ: ಯಾರು ನಂಬಲಾಗದ ಅಚ್ಚರಿಯೊಂದು ಇಲ್ಲಿ ನಡೆಯುತ್ತಿದೆ, ದಿನಾ ಬೆಳಿಗ್ಗೆ ಪೂಜೆ ಸಮಯಕ್ಕೆಂದು ಸಾಯಿಬಾಬಾರ ಭಾವಚಿತ್ರದ ಮುಂದೆ ಬಂದು ನಿಂತರೆ ಅದೇನೂ ತುಪ್ಪದಂತೆ ದ್ರವರೂಪದ ವಸ್ತು ಕಾಣ ಸಿಗುತ್ತೆ ಅರೇ ಇದು ಎಲ್ಲಿಂದ ಬರುತ್ತಿದೆ ನೋಡಿದ್ರೆ ಅಲ್ಲಿಯವರಿಗೂ ಅಚ್ಚರಿ ಕಾದಿತ್ತು.ಹಾಗದರೇ ಅದು ಎಲ್ಲಿ ,ಏನೂ ಎಂಬೂದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ,
ಉಡುಪಿ ಜಿಲ್ಲೆ ಕಟಪಾಡಿಯಿಂದ ಮಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ 66 ಎಡ ಭಾಗಕ್ಕೆ ತಿರುಗಿದರೆ ಕಾಣಸಿಗುವುದು ವಿಶ್ವಕ್ಕೆ ಪರಿಮಳ ಸೂಸಿದ ಶಂಕರಪುರ ಎಂಬ ಸಣ್ಣ ಊರು ಅಲ್ಲಿದೇ ಒಂದು ದ್ವಾರಕಮಯಿ ಶ್ರೀ ಸಾಯಿ ಸಾಂತ್ವನ ಮಂದಿರ. ಸುಮಾರು ವರ್ಷದಿಂದ ಗುರೂಜಿ ಸಾಯಿ ಈಶ್ವರ್ ಆರಾಧನೆ ಮಾಡಿಕೊಂಡಿರುವ ಸಾಯಿಬಾಬಾರ ಪ್ರತಿಷ್ಟಾ ಮೂರ್ತಿ ಮತ್ತು ಸಾಯಿಬಾಬಾರ ಭಾವಚಿತ್ರ ಪ್ರತೀ ಗುರುವಾರ ಪೂಜೆ ಪುರಸ್ಕಾರ ನಡೆಯುತ್ತದೆ ಆದ್ರೇ ಕಳೆದರಡು ವರ್ಷದಿಂದ ಇಲ್ಲಿ ಅಚ್ಚರಿಯ ಪ್ರಸಂಗ ನಡೆಯುತ್ತಿದೆ ಅದೇನೆಂದರೆ ಶಿರಡಿ ಸಾಯಿಬಾಬಾರ ಭಾವಚಿತ್ರದಲ್ಲಿ ಸಾಯಿಬಾಬಾರ ಪಾದದ ಭಾಗದಲ್ಲಿ ತುಪ್ಪದ ರೀತಿಯ ದ್ರವವೊಂದು ಹರಿದು ಬರುತ್ತಿದೆ.
ಅರೇ ಇದೇನಪ್ಪ ಅಂತಾ ಅಚ್ಚರಿ ಪಟ್ಟವರು ಖುದ್ದಾಗಿ ಬೇಟಿ ನೀಡಿದವರಿಗೆ ಕಾದಿತ್ತು ಶಾಕ್,ಮುಟ್ಟಿನೋಡಿದರೆ ಅದು ತುಪ್ಪದಂತೆ ಪರಿಮಳ ಬರುತ್ತಿದೆ ಆದ್ರೇ ಇದು ಈ ವರ್ಷ ಮಾತ್ರವಲ್ಲ ಕಳೆದೆರಡು ವರ್ಷದಿಂದ ಈ ರೀತಿಯಾಗಿ ಗೋಚರಿಸುತ್ತಿದೆ ಅಂತಾರೇ ಅಲ್ಲಿಯ ಭಕ್ತರು.ಹಾಗಾದರೇ ಈ ರೀತಿ ನಡೆಯಲು ಕಾರಣ ಏನೆಂದು ವಿಚಾರಿಸಿದಾಗ ಅಲ್ಲಿಯ ಮುಖ್ಯಸ್ಥರಾದ ಗುರೂಜಿ ಸಾಯಿ ಈಶ್ವರ್ ಹೀಗೆನ್ನುತ್ತಾರೆ” ಕಳೆದ ಎರಡು ವರ್ಷದಿಂದ ಇದೇ ರೀತಿ ತುಪ್ಪದ ದ್ರವ ಕಾಣುತ್ತಿತ್ತು ಆದ್ರೇ ಈ ವರ್ಷ ಮಾತ್ರ ಜಾಸ್ತಿಯಾಗಿಯೇ ಕಾಣ್ತ ಇದೆ,ಯಾರೂ ಕೂಡ ನಂಬುವ ವಿಚಾರ ಅಲ್ಲ. ನಾನು ಕೂಡು ನಂಬಿರಲಿಲ್ಲ ಆದ್ರೇ ಪದೇಪದೆ ಈ ರೀತಿಯಾಗಿ ಗೋಚರಿಸುವುದರಿಂದ ಸಾಯಿಬಾಬಾರ ನೂರನೇ ಸಮಾಧಿ ವರ್ಷ ಆಗಿರುವುದರಿಂದ ದೇಶದಲ್ಲಿ ವಿವಿಧ ರೀತಿಯ ಪವಾಡಗಳು ಆಗುತ್ತಿರುವುದು ಮತ್ತು ಇಲ್ಲಿಯೂ ನಡೆಯುತ್ತಿರುವುದು ಒಂದಕ್ಕೊಂದು ಕೊಂಡಿಯಂತೆ ಇದೆ ಅನ್ನುತ್ತಾರೆ.
ಆದರೇ ಏನೇ ಆಗಿರಲಿ ಕಲಿಯುಗದಲ್ಲಿಯೂ ಇಂಥಹ ಪ್ರಸಂಗಗಳು ನಡೆಯುತ್ತಿರುವುದು ಮಾತ್ರ ಅಚ್ಚರಿ ತಂದಿದೆ ಇದನ್ನ ನೋಡಲೆಂದೆ ದಿನಂಪ್ರತಿ ನೂರಾರು ಭಕ್ತರು ಕ್ಷೇತ್ರಕ್ಕೆ ಬಂದು ಹೋಗುತ್ತಿರುವುದು ಜನರ ಕುತೂಹಲ ಮತ್ತಷ್ಟು ಹೆಚ್ಚಿದೆ.
ಜಾಹಿರಾತು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…