Featured

ಕಟಪಾಡಿ ಅಂಡರ್‌ಪಾಸ್ : ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತ – vishwanews24

ಕಟಪಾಡಿ ಅಂಡರ್‌ಪಾಸ್  ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತ

ಕಟಪಾಡಿ: ರಾ. ಹೆ. 66ರ ಕಟಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಮತ್ತು ವೆಹಿಕಲ್ ಓವರ್‌ಪಾಸ್ ನಿರ್ಮಾಣದಲ್ಲಿ ಪಶ್ಚಿಮಪಾರ್ಶ್ವ ಕಾಮಗಾರಿಯ ಶೇ. 80 ಭಾಗ ಪೂರ್ಣಗೊಂಡಿದ್ದು, ಅಂಡರ್‌ಪಾಸ್ ರಸ್ತೆ ವಾರದೊಳಗಾಗಿ ಮಂಗಳೂರಿನಿಂದ ಉಡುಪಿಗೆ ಆಗಮಿಸುವ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಅಂಡರ್‌ಪಾಸ್‌ ಕಾಮಗಾರಿ ನಡೆಯುತ್ತಿರುವ ಪಶ್ಚಿಮ ಪಾರ್ಶ್ವದಲ್ಲಿ ರಿಟೈನಿಂಗ್ ವಾಲ್, ಡ್ರೈನೇಜ್, ಫೌಂಡೇಶನ್ ರಾವ್, ಕ್ಯಾಶ್ ಗಾರ್ಡ್ ಬ್ಯಾರಿಯರ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಹೆದ್ದಾರಿ ನಿರ್ಮಾಣದ ಪ್ರದೇಶದಲ್ಲಿ ವೆಟ್‌ಮಿಕ್ಸ್ ಅಳವಡಿಕೆ ಪ್ರಗತಿಯಲ್ಲಿದೆ. ಡಾಮರು ಕಾಮಗಾರಿ ಬಳಿಕ 11 ಮೀ. ಅಗಲದ ಪಶ್ಚಿಮ ಪಾರ್ಶ್ವ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಬಳಿಕ ಪೂರ್ವ ಪಾರ್ಶ್ವದ ಅಂಡರ್‌ಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ವೆಹಿಕಲ್ ಓವರ್‌ಪಾಸ್ ಕೂಡಾ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ಎಂಜಿನಿ ಯರ್ ವಲಯದಲ್ಲಿ ವ್ಯಕ್ತವಾಗಿದೆ. ಮಂಗಳೂರಿನತ್ತ ತೆರಳುವ ವಾಹನ ಸಂಚಾರ ವ್ಯವಸ್ಥೆ ಈಗಿರುವ ಮಾದರಿಯಲ್ಲಿಯೇ ಮುಂದುವರಿಯಲಿದೆ.

ಇದನ್ನೂ ಓದಿ:

 

17 ಕೋಟಿ ರೂ. ವೆಚ್ಚದಲ್ಲಿ ರಾ. ಹೆ. ಅಂಡರ್‌ಪಾಸ್ ಮತ್ತು ವೆಹಿಕಲ್ ಓವರ್‌ಪಾಸ್ ನಿರ್ಮಾಣ ಕಾಮಗಾರಿ ಕಿನ್ನಿಮೂಲ್ಕಿ ಮಾದರಿಯಲ್ಲಿ ನಡೆಯುತ್ತಿದೆ. ಕಟಪಾಡಿ ಜಂಕ್ಷನ್‌ನಿಂದ ಮಂಗಳೂರು-ಉಡುಪಿ ಭಾಗದತ್ತ ಒಟ್ಟು 535 ಮೀ. ಉದ್ದದವರೆಗಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 5.5 ಮೀ. ಎತ್ತರ ಹೊಂದಿರುತ್ತದೆ. ನ್ಯಾಶನಲ್ ಇನ್‌ಫ್ರಾ ಪ್ರಾಜೆಕ್ಟ್ ಕಂಪೆನಿ ಕಾಮಗಾರಿ ನಿರ್ವಹಿಸುತ್ತಿದೆ. 2025ರ ನವೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು.

ರಾ. ಹೆ. 66ರ ಶಿರ್ವ ರಸ್ತೆಯ ಭಾಗದಿಂದ ಕಟಪಾಡಿ ಪೇಟೆಯೊಳಕ್ಕೆ (ಪೂರ್ವ, ಪಶ್ಚಿಮ ಭಾಗಕ್ಕೆ) ಬಂದು ಹೋಗುವ ಪಾದಚಾರಿಗಳ ಸುರಕ್ಷೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಕಷ್ಟು ಮಾರ್ಗಸೂಚಿ ಫಲಕಗಳು, ವಾಹನಗಳ ವೇಗ ನಿಯಂತ್ರಣ ಸಹಿತ ಹೈಮಾಸ್ಟ್ ಲೈಟ್‌ಗಳನ್ನು ಅಳವಡಿಸಿ ಸುರಕ್ಷ ಕ್ರಮ ಅನುಸರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಶೇ. 80 ಭಾಗ ಕಾಮಗಾರಿ ಪೂರ್ಣಗೊಂಡಿದೆ. ವೆಟ್‌ಮಿಕ್ಸ್ ಅಳವಡಿಸುವ ಕಾಮಗಾರಿ ಪ್ರಗತಿ ಯಲ್ಲಿದೆ. ಬಳಿಕ ಡಾಮರು ಕಾಮಗಾರಿ ನಡೆಸಲಾಗುತ್ತದೆ. ವಾರದೊಳಗಾಗಿ ಉಡುಪಿ ಭಾಗದತ್ತ ವಾಹನಗಳನ್ನು ಇದೇ ರಸ್ತೆಯಲ್ಲಿ ಸಂಚಾರಕ್ಕೆ ಬಿಡಲಾಗುತ್ತದೆ. ಮಂಗಳೂರು ಭಾಗದತ್ತ ತೆರಳುವ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
– ಮೊಹಿದ್ದೀನ್, ಸೈಟ್ ಎಂಜಿನಿಯರ್

Vishwa News 24

Recent Posts

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: SDPI ಖಂಡನೆ -vishwanews24

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: ಎಸ್‌ ಡಿ ಪಿ ಐ ಖಂಡನೆ…

50 minutes ago

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂ. ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ – vishwanews24

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂಪಾಯಿ ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ ಕಾರ್ಕಳದಲ್ಲಿ…

58 minutes ago

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ – vishwanews24

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ…

1 hour ago

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಬೊಳ್ಜೆ ಉದ್ಯಾವರ : ಅಧ್ಯಕ್ಷರಾಗಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆ – vishwanews24

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಬೊಳ್ಜೆ ಉದ್ಯಾವರ : ಅಧ್ಯಕ್ಷರಾಗಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆ ಉಡುಪಿ…

1 hour ago

ಕುಂದಾಪುರ: ಡಿವೈಡರ್ ಏರಿ ಹೊಂಡಕ್ಕೆ ಬಿದ್ದ ಲಾರಿ; ಚಾಲಕ ಗಂಭೀರ – vishwanews24

ಕುಂದಾಪುರ: ಡಿವೈಡರ್ ಏರಿ ಹೊಂಡಕ್ಕೆ ಬಿದ್ದ ಲಾರಿ; ಚಾಲಕ ಗಂಭೀರ ಕುಂದಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ,…

2 hours ago

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಪೋಸ್ಟ್: ಯುವಕ ಅರೆಸ್ಟ್ – vishwanews24

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಪೋಸ್ಟ್: ಕಾಪು ಮೂಲದ ಯುವಕ ಅರೆಸ್ಟ್ ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಸಂದೇಶಗಳನ್ನು ಹಂಚಿಕೊ0ಡ…

2 hours ago