ಕಟಪಾಡಿ: ರಾ. ಹೆ. 66ರ ಕಟಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಮತ್ತು ವೆಹಿಕಲ್ ಓವರ್‌ಪಾಸ್ ನಿರ್ಮಾಣದಲ್ಲಿ ಪಶ್ಚಿಮಪಾರ್ಶ್ವ ಕಾಮಗಾರಿಯ ಶೇ. 80 ಭಾಗ ಪೂರ್ಣಗೊಂಡಿದ್ದು, ಅಂಡರ್‌ಪಾಸ್ ರಸ್ತೆ ವಾರದೊಳಗಾಗಿ ಮಂಗಳೂರಿನಿಂದ ಉಡುಪಿಗೆ ಆಗಮಿಸುವ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವ ಪಶ್ಚಿಮ ಪಾರ್ಶ್ವದಲ್ಲಿ ರಿಟೈನಿಂಗ್ ವಾಲ್, ಡ್ರೈನೇಜ್, ಫೌಂಡೇಶನ್ ರಾವ್, ಕ್ಯಾಶ್ ಗಾರ್ಡ್ ಬ್ಯಾರಿಯರ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಹೆದ್ದಾರಿ ನಿರ್ಮಾಣದ ಪ್ರದೇಶದಲ್ಲಿ ವೆಟ್‌ಮಿಕ್ಸ್ ಅಳವಡಿಕೆ ಪ್ರಗತಿಯಲ್ಲಿದೆ. ಡಾಮರು ಕಾಮಗಾರಿ ಬಳಿಕ 11 ಮೀ. ಅಗಲದ ಪಶ್ಚಿಮ ಪಾರ್ಶ್ವ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಬಳಿಕ ಪೂರ್ವ ಪಾರ್ಶ್ವದ ಅಂಡರ್‌ಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ವೆಹಿಕಲ್ ಓವರ್‌ಪಾಸ್ ಕೂಡಾ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ಎಂಜಿನಿ ಯರ್ ವಲಯದಲ್ಲಿ ವ್ಯಕ್ತವಾಗಿದೆ. ಮಂಗಳೂರಿನತ್ತ ತೆರಳುವ ವಾಹನ ಸಂಚಾರ ವ್ಯವಸ್ಥೆ ಈಗಿರುವ ಮಾದರಿಯಲ್ಲಿಯೇ ಮುಂದುವರಿಯಲಿದೆ.
ಇದನ್ನೂ ಓದಿ:
17 ಕೋಟಿ ರೂ. ವೆಚ್ಚದಲ್ಲಿ ರಾ. ಹೆ. ಅಂಡರ್‌ಪಾಸ್ ಮತ್ತು ವೆಹಿಕಲ್ ಓವರ್‌ಪಾಸ್ ನಿರ್ಮಾಣ ಕಾಮಗಾರಿ ಕಿನ್ನಿಮೂಲ್ಕಿ ಮಾದರಿಯಲ್ಲಿ ನಡೆಯುತ್ತಿದೆ. ಕಟಪಾಡಿ ಜಂಕ್ಷನ್‌ನಿಂದ ಮಂಗಳೂರು-ಉಡುಪಿ ಭಾಗದತ್ತ ಒಟ್ಟು 535 ಮೀ. ಉದ್ದದವರೆಗಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 5.5 ಮೀ. ಎತ್ತರ ಹೊಂದಿರುತ್ತದೆ. ನ್ಯಾಶನಲ್ ಇನ್‌ಫ್ರಾ ಪ್ರಾಜೆಕ್ಟ್ ಕಂಪೆನಿ ಕಾಮಗಾರಿ ನಿರ್ವಹಿಸುತ್ತಿದೆ. 2025ರ ನವೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು.
ರಾ. ಹೆ. 66ರ ಶಿರ್ವ ರಸ್ತೆಯ ಭಾಗದಿಂದ ಕಟಪಾಡಿ ಪೇಟೆಯೊಳಕ್ಕೆ (ಪೂರ್ವ, ಪಶ್ಚಿಮ ಭಾಗಕ್ಕೆ) ಬಂದು ಹೋಗುವ ಪಾದಚಾರಿಗಳ ಸುರಕ್ಷೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಕಷ್ಟು ಮಾರ್ಗಸೂಚಿ ಫಲಕಗಳು, ವಾಹನಗಳ ವೇಗ ನಿಯಂತ್ರಣ ಸಹಿತ ಹೈಮಾಸ್ಟ್ ಲೈಟ್‌ಗಳನ್ನು ಅಳವಡಿಸಿ ಸುರಕ್ಷ ಕ್ರಮ ಅನುಸರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಶೇ. 80 ಭಾಗ ಕಾಮಗಾರಿ ಪೂರ್ಣಗೊಂಡಿದೆ. ವೆಟ್‌ಮಿಕ್ಸ್ ಅಳವಡಿಸುವ ಕಾಮಗಾರಿ ಪ್ರಗತಿ ಯಲ್ಲಿದೆ. ಬಳಿಕ ಡಾಮರು ಕಾಮಗಾರಿ ನಡೆಸಲಾಗುತ್ತದೆ. ವಾರದೊಳಗಾಗಿ ಉಡುಪಿ ಭಾಗದತ್ತ ವಾಹನಗಳನ್ನು ಇದೇ ರಸ್ತೆಯಲ್ಲಿ ಸಂಚಾರಕ್ಕೆ ಬಿಡಲಾಗುತ್ತದೆ. ಮಂಗಳೂರು ಭಾಗದತ್ತ ತೆರಳುವ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
– ಮೊಹಿದ್ದೀನ್, ಸೈಟ್ ಎಂಜಿನಿಯರ್
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…